ಟಾಲಿವುಡ್ ರಾಮ್ ಚರಣ್ ಗೆ ಸಖತ್ ಇಷ್ಟ ಕನ್ನಡದ ಈ ಹಾಡು
Ram Charan: ಟಾಲಿವುಡ್ ನಟ ರಾಮ್ ಚರಣ್ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಲವು ಬಹಳ ಒಳ್ಳೆಯ ಹಾಡುಗಳನ್ನು ಸಹ ರಾಮ್ ಚರಣ್ ನೀಡಿದ್ದಾರೆ. ಆದರೆ ರಾಮ್ ಚರಣ್ಗೆ ಕನ್ನಡದ ಸೂಪರ್ ಹಿಟ್ ಸಿನಿಮಾದ ಹಾಡೆಂದರೆ ಬಲು ಇಷ್ಟವಂತೆ. ಆ ಹಾಡು ನಿಜ ಜೀವನದಲ್ಲಿಯೂ ಅವರ ಬ್ಯಾಕ್ರೌಂಡ್ ಹಾಡಾಗಿರಬೇಕು ಎಂಬ ಆಸೆಯಂತೆ.

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಕಳೆದ ಸಂಕ್ರಾಂತಿ ಪ್ರಯುಕ್ತ ರಿಲೀಸ್ ಆಗಿ ಸೋಲು ಕಂಡಿದೆ. ಇದರಿಂದ ರಾಮ್ ಚರಣ್ ಅವರು ಸಾಕಷ್ಟು ಹಿನ್ನಡೆ ಅನುಭವಿಸಿದ್ದಾರೆ. ಅವರ ನಟನೆಯ ‘ಆರ್ಆರ್ಆರ್’ ಯಶಸ್ಸಿನ ಬಳಿಕ ಅವರ ‘ಆಚಾರ್ಯ’ ಸಿನಿಮಾ ಕೂಡ ಫ್ಲಾಪ್ ಆಯಿತು. ಈಗ ‘ಗೇಮ್ ಚೇಂಜರ್’ ಪಾಳಿ. ಈ ಮಧ್ಯೆ ರಾಮ್ ಚರಣ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ತಮ್ಮ ಇಷ್ಟದ ಕನ್ನಡದ ಹಾಡು ಯಾವುದು ಎಂದು ಹೇಳಿದ್ದರು.
‘ಆರ್ಆರ್ಆರ್’ ಚಿತ್ರಕ್ಕೆ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾಗೆ ರಾಜಮೌಳಿ ಅವರು ಹೀರೋ. ಈ ಚಿತ್ರದ ಪ್ರಚಾರಕ್ಕಾಗಿ ರಾಮ್ ಚರಣ್ ಅವರು ವಿವಿಧ ಕಡೆಗಳಲ್ಲಿ ತೆರಳಿದ್ದರು. ಸಾಕಷ್ಟು ಸಂದರ್ಶನಗಳನ್ನು ನೀಡಿದ್ದರು. ಈ ವೇಳೆ ಅವರಿಗೆ ಹಾಡಿನ ಬಗ್ಗೆ ಕೇಳಲಾಗಿತ್ತು. ಆಗ ಅವರು ಕನ್ನಡದ ಸಾಂಗ್ ಒಂದರ ಬಗ್ಗೆ ವಿವರಿಸಿದ್ದರು.
‘ನೀವು ನಡೆದು ಬರುವಾಗ ಯಾವ ಹಾಡು ಬ್ಯಾಕ್ಗ್ರೌಂಡ್ನಲ್ಲಿ ಬರುತ್ತದೆ’ ಎಂದು ಕೇಳಲಾಯಿತು. ಆಗ ರಾಜಮೌಳಿ ಅವರು ‘ಧೀರ.. ಧೀರ..’ ಎಂದು ಹಾಡು ಹೇಳಲು ಮುಂದಾದರು. ಆಗ ರಾಮ್ ಚರಣ್ ಅವರು ನಾನು ಅಷ್ಟು ನಿಧಾನ ಅಲ್ಲ. ‘ನನಗೆ ಕೆಜಿಎಫ್ನ ಧೀರ.. ಧೀರ.. ಧೀರಾದಿ ಸುಲ್ತಾನ ಹಾಡು ಇಷ್ಟ’ ಎಂದು ವಿವರಿಸಿದರು. ಇದನ್ನು ಕೇಳಿ ಅಲ್ಲಿದ್ದವರಿಗೆ ಅಚ್ಚರಿ ಆಯಿತು.
ಕೆಜಿಎಫ್ ಸಿನಿಮಾ ಹಾಗೂ ಅದರ ಹಾಡುಗಳು ಮಾಡಿದ ದಾಖಲೆಗಳು ಸಾಕಷ್ಟಿವೆ. ಇವುಗಳನ್ನು ಅನೇಕ ಸೆಲೆಬ್ರಿಟಿಗಳು ಇಷ್ಟಪಟ್ಟಿದ್ದಾರೆ. ರಾಮ್ ಚರಣ್ ಅವರಿಗೂ ಈ ಹಾಡು ಇಷ್ಟ ಅನ್ನೋದು ವಿಶೇಷ.
ಇದನ್ನೂ ಓದಿ:ಅಲ್ಲು ಅರ್ಜುನ್ ಬಳಿಕ ರಾಮ್ ಚರಣ್ ಜೊತೆ ನಟಿಸಲಿರುವ ರಶ್ಮಿಕಾ ಮಂದಣ್ಣ
ರಾಮ್ ಚರಣ್ ಅವರು ಸದ್ಯ ಬುಚ್ಚಿ ಬಾಬು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಉಪ್ಪೇನಾ’ ಖ್ಯಾತಿ ಬುಚ್ಚಿ ಬಾಬು ಗೆ ಇದೆ. ಈ ಚಿತ್ರದಲ್ಲಿ ಕನ್ನಡದ ಶಿವರಾಜ್ಕುಮಾರ್ ನಟಿಸುತ್ತಿದ್ದಾರೆ. ರಾಮ್ ಚರಣ್ ಅವರ ‘ಗೇಮ್ ಚೇಂಜರ್’ 450 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿತ್ತು. ಆದರೆ, ಕೆಲವೇ ಕೋಟಿ ರೂಪಾಯಿಯಲ್ಲಿ ಈ ಚಿತ್ರ ಆಟ ಪೂರ್ಣಗೊಳಿಸಿದೆ ಅನ್ನೋದು ಬೇಸರದ ವಿಚಾರ. ಈ ಚಿತ್ರದಿಂದ ನಿರ್ಮಾಪಕ ದಿಲ್ ರಾಜುಗೆ ನಷ್ಟ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ