
ಪ್ರಶಾಂತ್ ನೀಲ್ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ‘ಕೆಜಿಎಫ್’ ನಂತರ ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಈ ಕಾರಣಕ್ಕೆ ಅವರು ಯಾವುದೇ ಸ್ಟಾರ್ ನಟರನ್ನು ಭೇಟಿ ಮಾಡಿದರೂ ಸಿನಿಮಾ ವಿಚಾರ ಮುನ್ನೆಲೆಗೆ ಬರುತ್ತದೆ. ಇತ್ತೀಚೆಗೆ ರಾಮ್ ಚರಣ್ ಹಾಗೂ ಚಿರಂಜೀವಿ ಜತೆ ಕಾಣಿಸಿಕೊಂಡಿದ್ದರು ಪ್ರಶಾಂತ್ ನೀಲ್. ರಾಮ್ ಚರಣ್ ಜತೆ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದರ ಅಸಲಿಯತ್ತು ಈಗ ಹೊರ ಬಿದ್ದಿದೆ.
ಸ್ಟಾರ್ ನಟರ ಜತೆ ಸಿನಿಮಾ ಮಾಡೋಕೆ ಪ್ರಶಾಂತ್ ನೀಲ್ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಿರುವಾಗಲೇ ರಾಮ್ ಚರಣ್ ಜತೆ ಕಾಣಿಸಿಕೊಂಡಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ‘ಲೆಜೆಂಡ್ ನಟರನ್ನು ಭೇಟಿ ಮಾಡಿದೆ. ಆತಿಥ್ಯ ನೀಡಿದ್ದಕ್ಕೆ ಧನ್ಯವಾದ. ಚಿರಂಜೀವಿಯನ್ನು ಭೇಟಿ ಮಾಡಬೇಕು ಎನ್ನುವ ಬಾಲ್ಯದ ಕನಸು ನನಸಾಯಿತು’ ಎಂದು ಟ್ವೀಟ್ ಮಾಡಿದ್ದರು ರಾಮ್ ಚರಣ್. ಇದರ ಜತೆಗೆ ಆರ್ಆರ್ಆರ್ ಸಿನಿಮಾ ನಿರ್ಮಾಣ ಸಂಸ್ಥೆ ಡಿವಿವಿ ಮೂವೀಸ್ ಅನ್ನು ಟ್ಯಾಗ್ ಮಾಡಿದ್ದರು ರಾಮ್ ಚರಣ್. ಈ ಮೂಲಕ ಸಾಕಷ್ಟು ಕುತೂಹಲ ಹುಟ್ಟಿಸಿದ್ದರು. ಈಗ ರಾಮ್ ಚರಣ್ ಕಡೆಯಿಂದ ಇದಕ್ಕೆ ಉತ್ತರ ಸಿಕ್ಕಿದೆ.
ಈ ಬಗ್ಗೆ ಟಿವಿ9 ತೆಲುಗಿಗೆ ಪ್ರತಿಕ್ರಿಯೆ ನೀಡಿರುವ ರಾಮ್ ಚರಣ್, ‘ಇಲ್ಲ, ಪ್ರಶಾಂತ್ ಅವರು ಕೇವಲ ಊಟಕ್ಕೆ ಬಂದಿದ್ದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಘೋಷಿಸುತ್ತೇವೆ’ ಎಂದರು. ಈ ಮೂಲಕ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟರು. ಅವರು ಸಿನಿಮಾ ಮಾಡುವುದಿಲ್ಲ ಎಂದಾದರೆ, ಆರ್ಆರ್ಆರ್ ಸಿನಿಮಾ ನಿರ್ಮಾಣ ಸಂಸ್ಥೆ ಡಿವಿವಿ ಮೂವೀಸ್ಅನ್ನುಏಕೆ ಟ್ಯಾಗ್ ಮಾಡುತ್ತಿದ್ದರು ಎಂದು ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ.
ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬುದಕ್ಕೆ ಇತ್ತೀಚೆಗೆ ಉತ್ತರ ಸಿಕ್ಕಿತ್ತು. 2022ರ ಏಪ್ರಿಲ್ 14ರಂದು ಚಿತ್ರ ಬಿಡುಗಡೆ ಆಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗಾಗಲೇ ‘ಕೆಜಿಎಫ್ 2’ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ವೈರಸ್ ಎರಡನೇ ಅಲೆ ಹರಡಿದ ಪರಿಣಾಮ ಚಿತ್ರದ ರಿಲೀಸ್ ದಿನಾಂಕ ಮುಂದೂಡಲಾಗಿತ್ತು. ಈ ಚಿತ್ರದ ಕೊನೆಯ ಹಂತದ ಕೆಲಸದಲ್ಲಿ ಪ್ರಶಾಂತ್ ನೀಲ್ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಚಿರಂಜೀವಿ ಮತ್ತು ರಾಮ್ ಚರಣ್ ಜತೆ ಪ್ರಶಾಂತ್ ನೀಲ್; ಆರ್ಆರ್ಆರ್ ನಿರ್ಮಾಣ ಸಂಸ್ಥೆಯಿಂದ ಬಂಡವಾಳ?