ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಶೂಟಿಂಗ್ ಮುಗಿದಿದ್ದು, ಅವರು ಡಬ್ಬಿಂಗ್ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಸಿನಿಮಾಗೆ ದಿಲ್ ರಾಜು ಅವರು ಬಂಡವಾಳ ಹೂಡುತ್ತಿದ್ದು, ಶಂಕರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ 2024ರ ಕ್ರಿಸ್ಮಸ್ ಸಂದರ್ಭದಲ್ಲಿ ರಿಲೀಸ್ ಆಗಲಿದೆ. ಇದೊಂದು ಪೊಲಿಟಿಕಲ್ ಆ್ಯಕ್ಷನ್ ಡ್ರಾಮಾ. ಈ ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್ ಒಂದನ್ನು ನೀಡಿದ್ದಾರೆ ಸಂಗೀತ ಸಂಯೋಜಕ ತಮನ್. ಈ ಸಿನಿಮಾದಲ್ಲಿ ಬರೋಬ್ಬರಿ ಏಳು ಹಾಡುಗಳು ಇರಲಿವೆಯಂತೆ.
ರಾಮ್ ಚರಣ್ ಬರ್ತ್ಡೇ ಪ್ರಯುಕ್ತ ‘ಜರಗಂಡಿ..’ ಸಾಂಗ್ ರಿಲೀಸ್ ಆಗಿತ್ತು. ಈ ಹಾಡು ಗಮನ ಸೆಳೆದಿತ್ತು. ಈಗ ಆಗಸ್ಟ್ ಅಂತ್ಯಕ್ಕೆ ಮತ್ತೊಂದು ಹಾಡು ರಿಲೀಸ್ ಆಗೋ ಸಾಧ್ಯತೆ ಇದೆ. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರರೋದು ತಮನ್ ಅವರು. ಅವರು ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಿನಿಮಾದಲ್ಲಿ ಏಳು ಹಾಡುಗಳು ಇರಲಿವೆ ಎಂದು ಹೇಳಿದ್ದಾರೆ.
‘ದಿಲ್ ರಾಜು ಇತ್ತೀಚೆಗೆ ಒಂದು ಸರ್ಪ್ರೈಸ್ ನೀಡಿದ್ದಾರೆ (ಕ್ರಿಸ್ಮಸ್ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂಬುದನ್ನು ಉಲ್ಲೇಖಿಸಿ ಈ ಮಾತನ್ನು ಹೇಳಿದ್ದಾರೆ.) ಈ ಸಿನಿಮಾದಲ್ಲಿ ಏಳು ಹಾಡುಗಳು ಇರಲಿವೆ. ಆಗಸ್ಟ್ ಅಂತ್ಯದಿಂದ ಸಿನಿಮಾ ಬಗ್ಗೆ ಅಪ್ಡೇಟ್ ಸಿಗಲಿದೆ. ಮುಂದೆ ಯಾವ ಸಾಂಗ್ ರಿಲೀಸ್ ಮಾಡಬೇಕು ಎಂಬುದನ್ನು ನಿರ್ಧರಿಸಿಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಕಡಿಮೆ ಇಲ್ಲ ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೇಲ ಆಸ್ತಿ ಮೌಲ್ಯ
ಸಾಂಗ್ಗಳು ಸಿನಿಮಾಗಳಿಗೆ ವರವೂ ಹೌದು, ಶಾಪವೂ ಹೌದು. ಹಾಡುಗಳು ಚೆನ್ನಾಗಿ ಇದ್ದರೆ ಸಿನಿಮಾ ಗೆಲ್ಲುತ್ತದೆ. ಆದರೆ, ಸಾಂಗ್ಗಳು ಚೆನ್ನಾಗಿ ಮೂಡಿ ಬಂದಿಲ್ಲ ಎಂದರೆ ಅದನ್ನು ಸಹಿಸಿಕೊಳ್ಳೋದು ಪ್ರೇಕ್ಷಕರಿಗೆ ಕಷ್ಟ ಎನಿಸಬಹುದು. ಹೀಗಾಗಿ, ‘ಗೇಮ್ ಚೇಂಜರ್’ ಸಾಂಗ್ಗಳು ಯಾವ ರೀತಿಯಲ್ಲಿ ಇವೆ ಎಂಬುದು ಸದ್ಯದ ಪ್ರಶ್ನೆ.
ಕಿಯಾರಾ ಅಡ್ವಾಣಿ ಅವರು ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಎಸ್ಜೆ ಸೂರ್ಯ, ಅಂಜಲಿ, ಶ್ರೀಕಾಂತ್, ಜಯರಾಮ್, ನವೀನ್ ಚಂದ್ರ, ಸುನೀಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.