‘ಸೂರ್ಯ 44’ ಸಿನಿಮಾಗೆ ಕನ್ನಡದ ಈ ಸ್ಟಾರ್ ಹೀರೋಗೆ ಬಂದಿತ್ತು ಆಫರ್​; ಮುಂದೇನಾಯ್ತು?

ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಧನಂಜಯ್ ಸೈಕಲ್ ಹೊಡೆದರು. ಆದರೆ, ಯಶಸ್ಸು ಸಿಕ್ಕಿರಲಿಲ್ಲ. ಅವರಿಗೆ ಗೆಲುವು ತಂದ್ಕೊಟ್ಟಿದ್ದು ‘ಟಗರು’ ಸಿನಿಮಾ. ಈ ಚಿತ್ರದ ಮೂಲಕ ಧನಂಜಯ್ ಅವರು ಸಖತ್ ಫೇಮಸ್ ಆದರು. ಈಗ ಅವರಿಗೆ ಸೂರ್ಯ 44 ಸಿನಿಮಾದ ಆಫರ್ ಬಂದ ಬಗ್ಗೆ ಹೇಳಿಕೊಂಡಿದ್ದಾರೆ.

‘ಸೂರ್ಯ 44’ ಸಿನಿಮಾಗೆ ಕನ್ನಡದ ಈ ಸ್ಟಾರ್ ಹೀರೋಗೆ ಬಂದಿತ್ತು ಆಫರ್​; ಮುಂದೇನಾಯ್ತು?
ಸೂರ್ಯ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jul 24, 2024 | 8:23 AM

‘Suriya44’ ಸಿನಿಮಾದ ಫಸ್ಟ್ ಲುಕ್ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಈ ಟೀಸರ್​ನಲ್ಲಿ ಸೂರ್ಯ ಅವರು ಸಖತ್ ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಈ ಟೀಸರ್ ಗಮನ ಸೆಳೆಯುತ್ತಿದೆ. ಕಾರ್ತಿಕ್ ಸುಬ್ಬರಾಜು ಅವರು ಈ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಎಂದರೆ ಕನ್ನಡದ ಸ್ಟಾರ್ ಹೀರೋಗೆ ಈ ಸಿನಿಮಾದಲ್ಲಿ ನಟಿಸೋಕೆ ಅವಕಾಶ ಬಂದಿತ್ತು. ಆದರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಸಿನಿಮಾ ಫೈನಲ್ ಮಾಡೋಕೆ ಆಗಿಲ್ಲ. ಅವರು ಬೇರಾರೂ ಅಲ್ಲ ಡಾಲಿ ಧನಂಜಯ್.

ಧನಂಜಯ್ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಸೈಕಲ್ ಹೊಡೆದರು. ಆದರೆ, ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿರಲಿಲ್ಲ. ಅವರಿಗೆ ಗೆಲುವು ತಂದ್ಕೊಟ್ಟಿದ್ದು ‘ಟಗರು’ ಸಿನಿಮಾ. ಈ ಚಿತ್ರದ ಮೂಲಕ ಧನಂಜಯ್ ಅವರು ಸಖತ್ ಫೇಮಸ್ ಆದರು. ‘ಡಾಲಿ’ ಎಂದೇ ಅವರು ಫೇಮಸ್ ಆದರು. ಈ ಸಿನಿಮಾ ಬಳಿಕ ಧನಂಜಯ್ ಅವರು ಹೀರೋ ಹಾಗೂ ವಿಲನ್ ಎರಡೂ ಪಾತ್ರಗಳನ್ನು ಮಾಡುತ್ತಿದ್ದಾರೆ. ಅವರ ಖ್ಯಾತಿ ಹೆಚ್ಚುತ್ತಿದೆ. ಪರಭಾಷೆಯಿಂದಲೂ ಅವರಿಗೆ ಆಫರ್ ಬರುತ್ತಿದೆ. ಅವರು ಇತ್ತೀಚೆಗೆ ತಮಿಳು ಚಿತ್ರರಂಗದಿಂದ ಬಂದ ಆಫರ್ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ‘ತಪ್ಪಾಗಿದ್ರೆ ಶಿಕ್ಷೆ ಆಗಲಿ’; ದರ್ಶನ್ ಪ್ರಕರಣದ ಬಗ್ಗೆ ಧನಂಜಯ್ ಮಾತು

‘ಕಾರ್ತಿಕ್ ಸುಬ್ಬರಾಜು ಅವರು ‘ಸೂರ್ಯ 44’ ಸಿನಿಮಾದಲ್ಲಿ ನಟಿಸೋಕೆ ಕರೆದರು. ಆದರೆ, ಡೇಟ್ಸ್​ ಮ್ಯಾನೇಜ್ ಮಾಡೋಕೆ ಆಗಿಲ್ಲ. ನನಗೆ ಆ ಸಿನಿಮಾ ಮಾಡಬೇಕಿತ್ತು. ಸೂರ್ಯ ಹಾಗೂ ಕಾರ್ತಿಕ್ ಸುಬ್ಬರಾಜು ಜೊತೆ ಕೆಲಸ ಮಾಡಬೇಕು ಎನ್ನುವ ಹಂಬಲ ಇತ್ತು. ನಟನಾಗಿ ಹೆಚ್ಚೆಚ್ಚು ಕಲಿಯಬೇಕು, ಬೇರೆ ಬೇರೆ ಮಾಸ್ಟರ್​ಗಳ ಜೊತೆ ಕೆಲಸ ಮಾಡಬೇಕು. ಇದು ನನ್ನನ್ನು ಬೇರೆ ರೀತಿಯ ಕಲಾವಿದನಾಗಿ ಮಾಡುತ್ತದೆ’ ಎಂದಿದ್ದಾರೆ ಅವರು.

ಧನಂಜಯ್ ಅವರು ಕಲಾವಿದನಾಗಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ‘ಪುಷ್ಪ’ ಚಿತ್ರದಲ್ಲಿ ಜಾಲಿ ರೆಡ್ಡಿ ಹೆಸರಿನ ಪಾತ್ರದಲ್ಲಿ ಧನಂಜಯ್ ಅವರು ಕಾಣಿಸಿಕೊಂಡಿದ್ದರು. ‘ಪುಷ್ಪ 2’ ಚಿತ್ರದಲ್ಲಿಯೂ ಅವರ ಪಾತ್ರ ಇರಲಿದೆ. ಅವರ ಪಾತ್ರ ಎರಡನೇ ಪಾರ್ಟ್​ನಲ್ಲಿ ಪ್ರಾಮುಖ್ಯತೆ ಪಡೆಯೋ ಸಾಧ್ಯತೆ ಇದೆ. ಈಗ ಅವರಿಗೆ ತಮಿಳು ಸಿನಿಮಾದ ಆಫರ್ ಮಿಸ್ ಆಗಿರೋದಕ್ಕೆ ಕೊಂಚ ಬೇಸರ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:22 am, Wed, 24 July 24