AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂನ್ ತಿಂಗಳಿಗೆ ‘ಪೆದ್ದಿ’ ಸಿನಿಮಾ ರಿಲೀಸ್ ಮುಂದೂಡಿಕೆ: ‘ಟಾಕ್ಸಿಕ್’ ಎದುರು ಪೈಪೋಟಿ?

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕ ಪದೇ ಪದೇ ಮುಂದೂಡಿಕೆ ಆಗುತ್ತಲೇ ಇದೆ. ಜೂನ್ ತಿಂಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ ಎಂದು ಈಗ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಜೂನ್ ತಿಂಗಳಲ್ಲಿಯೇ ‘ಟಾಕ್ಸಿಕ್’ ಕೂಡ ಬಿಡುಗಡೆ ಆಗಲಿದೆ. ಆದ್ದರಿಂದ ಸಿನಿಪ್ರಿಯರ ಕುತೂಹಲ ಹೆಚ್ಚಿದೆ.

ಜೂನ್ ತಿಂಗಳಿಗೆ ‘ಪೆದ್ದಿ’ ಸಿನಿಮಾ ರಿಲೀಸ್ ಮುಂದೂಡಿಕೆ: ‘ಟಾಕ್ಸಿಕ್’ ಎದುರು ಪೈಪೋಟಿ?
Ram Charan
ಮದನ್​ ಕುಮಾರ್​
|

Updated on: Apr 15, 2026 | 6:38 PM

Share

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ‘ಪೆದ್ದಿ’ ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಯಾವುದೇ ಪ್ರಚಾರ ಕಾರ್ಯಗಳು ನಡೆಯದ ಕಾರಣ ಸಿನಿಮಾ ಮುಂದೂಡಿಕೆ ಆಗಲಿದೆ ಎಂದು ಮೊದಲೇ ಊಹಿಸಲಾಗಿತ್ತು. ಈಗ ಆ ಊಹೆ ನಿಜವಾಗಿದೆ. ಚಿತ್ರತಂಡ ಅಧಿಕೃತವಾಗಿ ಇದನ್ನು ಘೋಷಿಸಿದೆ. ‘ಪೆದ್ದಿ’ (Peddi) ಚಿತ್ರವು ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಆದರೆ ನಿಖರವಾಗಿ ಹೊಸ ಬಿಡುಗಡೆ ದಿನಾಂಕವನ್ನು (Peddi Release Date) ತಿಳಿಸಿಲ್ಲ. ಹಾಗಾಗಿ ಈ ಸಿನಿಮಾದ ಬಿಡುಗಡೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹಾಗೆಯೇ ಮುಂದುವರಿದಿದೆ.

ಸೋಶಿಯಲ್ ಮೀಡಿಯಾದಲ್ಲಿ ‘ಪೆದ್ದಿ’ ಚಿತ್ರತಂಡದವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ನಮ್ಮ ಹಾಡುಗಳು ಮತ್ತು ಗ್ಲಿಂಪ್ಸ್‌ಗಳಿಗೆ ನೀವು ನೀಡಿದ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು. ‘ಪೆದ್ದಿ’ ಚಿತ್ರದ ಮೇಲೆ ನೀವು ತೋರುತ್ತಿರುವ ಪ್ರೀತಿ ಮತ್ತು ಉತ್ಸಾಹವನ್ನು ಕಂಡು ನಮಗೆ ನಿಜಕ್ಕೂ ಸಂತೋಷವಾಗಿದೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಕೇವಲ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ನಾವು ಚಿತ್ರದ ಎಡಿಟಿಂಗ್ ನೋಡಿದ್ದು, ಬಂದಿರುವ ಔಟ್‌ಪುಟ್ ಬಗ್ಗೆ ನಮಗೆ ಅತ್ಯಂತ ತೃಪ್ತಿಯಿದೆ’ ಎಂದು ಚಿತ್ರತಂಡ ಹೇಳಿದೆ.

‘ನಮ್ಮ ಕೈಯಲ್ಲಿ ಇಂತಹ ಉತ್ತಮ ಕಂಟೆಂಟ್ ಇರುವುದರಿಂದ, ಅದನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರಲು ನಾವು ಬಯಸುತ್ತೇವೆ. ಅದಕ್ಕಾಗಿ, ನಮ್ಮ ತಾಂತ್ರಿಕ ವರ್ಗ ಮತ್ತು ಪೋಸ್ಟ್-ಪ್ರೊಡಕ್ಷನ್ ತಂಡಕ್ಕೆ ಇನ್ನಷ್ಟು ಸಮಯ ನೀಡುವುದು ಅಗತ್ಯ ಎಂದು ನಮಗೆ ಅನಿಸಿದೆ. ಇದರಿಂದ ಅವರು ಚಿತ್ರವನ್ನು ಪರಿಪೂರ್ಣತೆಯೊಂದಿಗೆ ಹೊರತರಲು ಸಾಧ್ಯವಾಗುತ್ತದೆ. ನಿಮಗೆ ಅತ್ಯುತ್ತಮವಾದ ಥಿಯೇಟರ್ ಅನುಭವವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ’ ಎಂದಿದೆ ‘ಪೆದ್ದಿ’ ತಂಡ.

View this post on Instagram

A post shared by PEDDI (@peddimovie)

‘ಚಿತ್ರದ ಬಿಡುಗಡೆಯನ್ನು ನಾವು ಜೂನ್ ತಿಂಗಳಿಗೆ ಮುಂದೂಡಲು ನಿರ್ಧರಿಸಿದ್ದೇವೆ. ನಿಖರವಾದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ನಿಮ್ಮ ನಿರಂತರ ಬೆಂಬಲ ಮತ್ತು ತಾಳ್ಮೆಗೆ ಧನ್ಯವಾದಗಳು. ಇದು ನಮಗೆ ಬಹಳ ಮುಖ್ಯವಾದುದು’ ಎಂದು ಪೆದ್ದಿ ಚಿತ್ರತಂಡದವರು ಮಾಹಿತಿ ನೀಡಿದ್ದಾರೆ. ಹೊಸ ಬಿಡುಗಡೆ ದಿನಾಂಕವನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರಕ್ಕೆ ಜಾನ್ವಿ, ಮೃಣಾಲ್ ಮೆರುಗು: ಶೀಘ್ರವೇ ಸಾಂಗ್ ಶೂಟಿಂಗ್ ಶುರು

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಜೂನ್ 4ರಂದು ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಆ ಸಿನಿಮಾ ತೆರೆಕಾಣಲಿದೆ. ಭಾರಿ ನಿರೀಕ್ಷೆ ಇರುವುದರಿಂದ ಜೂನ್ ತಿಂಗಳು ಪೂರ್ತಿ ‘ಟಾಕ್ಸಿಕ್’ ಅಬ್ಬರ ಇರಲಿದೆ. ಅದೇ ತಿಂಗಳಲ್ಲಿ ‘ಪೆದ್ದಿ’ ಬಿಡುಗಡೆ ಆಗುತ್ತಿರುವುದರಿಂದ ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us