Arun Govil: ರಾಮನ ಪಾತ್ರ ಮಾಡಿದ್ದ ನಟನ ಕಾಲಿಗೆ ಬಿದ್ದು ಮಗುವನ್ನು ಉಳಿಸುವಂತೆ ಬೇಡಿಕೊಂಡಿದ್ದ ಮಹಿಳೆ: ನಂತರ ಆಗಿದ್ದೇನು?

Adipurush Controversy: ‘ಧರ್ಮದ ಬಗ್ಗೆ ಸಿನಿಮಾ ಮಾಡಿದಾಗ ದೇವರ ಬಗ್ಗೆ ಚಿತ್ರತಂಡದರಿಗೆ ನಂಬಿಕೆ ಇರಬೇಕು’ ಎಂದು ಅರುಣ್​ ಗೋವಿಲ್​ ಹೇಳಿದ್ದಾರೆ. ಒಂದು ಅಪರೂಪದ ಘಟನೆಯನ್ನು ಅವರು ನೆನೆಪು ಮಾಡಿಕೊಂಡಿದ್ದಾರೆ.

Arun Govil: ರಾಮನ ಪಾತ್ರ ಮಾಡಿದ್ದ ನಟನ ಕಾಲಿಗೆ ಬಿದ್ದು ಮಗುವನ್ನು ಉಳಿಸುವಂತೆ ಬೇಡಿಕೊಂಡಿದ್ದ ಮಹಿಳೆ: ನಂತರ ಆಗಿದ್ದೇನು?
ಅರುಣ್​ ಗೋವಿಲ್​
Follow us
|

Updated on: Jun 24, 2023 | 7:15 AM

ಪ್ರಭಾಸ್​ ನಟನೆಯ ‘ಆದಿಪುರುಷ್​​’ ಸಿನಿಮಾ (Adipurush Movie) ಸಖತ್​ ಟ್ರೋಲ್​ ಆಗುತ್ತಿದೆ. ಜನಸಾಮಾನ್ಯರು ಅಷ್ಟೇ ಅಲ್ಲದೇ ಸೆಲೆಬ್ರಿಟಿಗಳು ಕೂಡ ಈ ಚಿತ್ರವನ್ನು ಟೀಕಿಸಿದ್ದಾರೆ. ಇದು ರಾಮಾಯಣದ ಕಥೆಯನ್ನು ಆಧರಿಸಿದ ಸಿನಿಮಾ. ಇದರಲ್ಲಿ ರಾಮನಾಗಿ ಪ್ರಭಾಸ್​ ನಟಿಸಿದ್ದಾರೆ. ಸೀತೆಯ ಪಾತ್ರಕ್ಕೆ ಕೃತಿ ಸನೋನ್​ ಬಣ್ಣ ಹಚ್ಚಿದ್ದಾರೆ. ಆದರೆ ಒಟ್ಟಾರೆ ಸಿನಿಮಾ ಸರಿಯಾಗಿ ಮೂಡಿಬಂದಿಲ್ಲ ಎಂಬ ಕಾರಣಕ್ಕೆ ನಿರ್ದೇಶಕ ಓಂ ರಾವತ್ (Om Raut)​ ಅವರನ್ನು ಎಲ್ಲರೂ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಜನರ ನಂಬಿಕೆ ಜೊತೆ ಆಟ ಆಡಬಾರದು ಎಂಬುದು ಬಹುತೇಕರ ಅಭಿಪ್ರಾಯ. ಈ ಸಂದರ್ಭದಲ್ಲಿ ಹಿರಿಯ ನಟ ಅರುಣ್​ ಗೋವಿಲ್​ ಅವರು ಒಂದು ಹಳೇ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಈ ಹಿಂದೆ ಪ್ರಸಾರವಾದ ‘ರಾಮಾಯಣ’ ಧಾರಾವಾಹಿಯಲ್ಲಿ ಅರುಣ್​ ಗೋವಿಲ್​ (Arun Govil) ಅವರು ರಾಮನ ಪಾತ್ರ ಮಾಡಿದ್ದರು.

ಜೀ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಅರುಣ್​ ಗೋವಿಲ್​ ಒಂದು ಅಪರೂಪದ ಘಟನೆ ನೆನಪಿಸಿಕೊಂಡಿದ್ದಾರೆ. ‘ರಾಮಾಯಣ ಸೀರಿಯಲ್​ ಶೂಟಿಂಗ್​ ವೇಳೆ ನಾನು ಮೇಕಪ್​ ಹಾಕಿಕೊಂಡು ಕುಳಿತಿದ್ದೆ. ಟಿ-ಶರ್ಟ್​ ಮತ್ತು ಶಾರ್ಟ್ಸ್​ ಧರಿಸಿದ್ದೆ. ಆಗ ಓರ್ವ ಮಹಿಳೆ ತನ್ನ ಮಗುವನ್ನು ಕರೆದುಕೊಂಡ ಬಂದಳು. ಆಕೆ ಅಳುತ್ತಿದ್ದಳು. ಮಗುವನ್ನು ನನ್ನ ಕಾಲಿನ ಮೇಲೆ ಹಾಕಿ, ದಯವಿಟ್ಟು ಅದರ ಜೀವ ಉಳಿಸುವಂತೆ ಬೇಡಿಕೊಂಡಳು. ಮೊದಲು ಆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆಕೆಗೆ ಹೇಳಿದೆ. ಅಂದು ನಾನು ಕೂಡ ಆ ಮಗುವಿಗಾಗಿ ಪ್ರಾರ್ಥಿಸಿದೆ. ನನ್ನ ಕೈಯನ್ನು ತೆಗೆದುಕೊಂಡು ಮಗುವಿನ ತಲೆಯ ಮೇಲೆ ಆಕೆ ಇರಿಸಿದಳು’ ಎಂದು ಅರುಣ್​ ಗೋವಿಲ್​ ಅವರು ನೆನಪಿನ ಪುಟ ತೆರೆದಿದ್ದಾರೆ.

ಇದನ್ನೂ ಓದಿ: Kriti Sanon: ಟ್ರೋಲ್​ಗಳ ನಡುವೆಯೂ ಶಾಲೆ ಮಕ್ಕಳಿಗೆ ಉಚಿತವಾಗಿ ‘ಆದಿಪುರುಷ್​’ ಚಿತ್ರ ತೋರಿಸಲು ಮುಂದಾದ ಕೃತಿ ಸನೋನ್​

‘ಮೂರು ದಿನಗಳ ಬಳಿಕ ಆಕೆ ಮತ್ತೆ ಬಂದಳು. ಮಗ ಗುಣಮುಖನಾಗಿ ಆಕೆಯ ಪಕ್ಕದಲ್ಲಿ ನಡೆದುಕೊಂಡು ಬಂದ. ಇದರಲ್ಲಿ ನನ್ನ ಪಾಲು ಏನೂ ಇಲ್ಲ. ಅದೆಲ್ಲವೂ ಆಗಿದ್ದು ಆಕೆ ರಾಮನಲ್ಲಿ ಇಟ್ಟಿದ್ದ ನಂಬಿಕೆಯಿಂದ. ಇದು ನಮ್ಮ ನಂಬಿಕೆ, ಭಕ್ತಿ. ಧರ್ಮದ ಬಗ್ಗೆ ಸಿನಿಮಾ ಮಾಡಿದಾಗ ದೇವರ ಬಗ್ಗೆ ಚಿತ್ರತಂಡದರಿಗೆ ಇಷ್ಟೇ ನಂಬಿಕೆ ಇರಬೇಕು’ ಎಂದು ಅರುಣ್​ ಗೋವಿಲ್​ ಹೇಳಿದ್ದಾರೆ.

ಇದನ್ನೂ ಓದಿ: Om Raut: ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ‘ಆದಿಪುರುಷ್​’ ನಿರ್ದೇಶಕ ಓಂ ರಾವತ್​ಗೆ ಮುಂಬೈ ಪೊಲೀಸರಿಂದ​ ಭದ್ರತೆ?

ಭಾರಿ ಟೀಕೆ ಎದುರಾಗಿದ್ದರಿಂದ ‘ಆದಿಪುರುಷ್​’ ಸಿನಿಮಾದ ಕಲೆಕ್ಷನ್​ ತಗ್ಗುತ್ತಿದೆ. ಪ್ರಭಾಸ್​ ಅವರು ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ರಾವಣನ ಪಾತ್ರ ಮಾಡಿದ ಸೈಫ್​ ಅಲಿ ಖಾನ್​ ಅವರ ಮೊದಲಿನಿಂದಲೂ ಈ ಸಿನಿಮಾ ಬಗ್ಗೆ ಏನನ್ನೂ ಮಾತನಾಡುತ್ತಿಲ್ಲ. ಎಲ್ಲ ವಿವಾದಗಳಿಂದ ಅವರು ದೂರವೇ ಉಳಿದುಕೊಂಡಿದ್ದಾರೆ. ಚಿತ್ರದ ನಿರ್ದೇಶಕ ಓಂ ರಾವತ್​ ಹಾಗೂ ಸಂಭಾಷಣಕಾರ ಮನೋಜ್​ ಮುಂತಶೀರ್​ ಅವರು ಸಮರ್ಥನೆ ನೀಡಲು ಹೋಗಿ ಇನ್ನಷ್ಟು ಟ್ರೋಲ್​ಗೆ ಒಳಗಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್