ಸೆಲೆಬ್ರಿಟಿಗಳು ಯಾವುದೇ ವಿಚಾರದ ಬಗ್ಗೆ ಮಾತನಾಡುವಾಗ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಅವರ ಮಾತನ್ನು ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತದೆ. ಈಗ ನಟ ರಾಣಾ ದಗ್ಗುಬಾಟಿ (Rana Daggubati) ಅವರಿಗೂ ಹಾಗೆಯೇ ಆಗಿದೆ. ಮಲಯಾಳಂ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ (Dulquer Salman) ಅವರನ್ನು ಹೊಗಳುವ ಭರದಲ್ಲಿ ಅವರು ನಟಿ ಸೋನಂ ಕಪೂರ್ನ ತೆಗಳಿದ್ದರು. ಸೋನಂ ಸೆಟ್ನಲ್ಲಿ ಹೇಗೆ ಇರುತ್ತಿದ್ದರು ಎಂಬುದನ್ನು ರಾಣಾ ವಿವರಿಸಿದ್ದರು. ಈಗ ಈ ಮಾತಿಗೆ ಅವರು ಕ್ಷಮೆ ಕೇಳಿದ್ದಾರೆ.
ದುಲ್ಕರ್ ಸಲ್ಮಾನ್ ನಟನೆಯ ‘ಕಿಂಗ್ ಆಫ್ ಕೋಥಾ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ರಾಣಾ ಭಾಗಿ ಆಗಿದ್ದರು. ಈ ವೇಳೆ ಅವರು 2019ರಲ್ಲಿ ರಿಲೀಸ್ ಆದ ‘ದಿ ಜೋಯಾ ಫ್ಯಾಕ್ಟರ್’ ಚಿತ್ರದ ಘಟನೆ ನೆನಪಿಸಿಕೊಂಡಿದ್ದರು. ಆದರೆ, ಎಲ್ಲಿಯೂ ಅವರು ಸೋನಂ ಹೆಸರನ್ನು ಹೇಳಿರಲಿಲ್ಲ. ‘ದುಲ್ಕರ್ ಸಲ್ಮಾನ್ ಆ್ಯಕ್ಷನ್ ಸಿನಿಮಾ ಮಾಡುತ್ತಾರೆ ಅನ್ನೋದು ನನಗೆ ಎಗ್ಸೈಟಿಂಗ್ ಅನಿಸುತ್ತಿದೆ. ನಟನಾ ಶಾಲೆಯಲ್ಲಿ ಅವರು ನನ್ನ ಜೂನಿಯರ್. ಅವರು ಒಂದು ಹಿಂದಿ ಸಿನಿಮಾ ಮಾಡುತ್ತಿದ್ದರು. ಅದರ ಹೆಸರನ್ನು ಹೇಳುವುದಿಲ್ಲ. ನಿರ್ಮಾಪಕ ನನ್ನ ಗೆಳೆಯ. ಹೀಗಾಗಿ ಒಮ್ಮೆ ಶೂಟಿಂಗ್ ಸೆಟ್ಗೆ ಹೊಗಿದ್ದೆ’ ಎಂದು ಹಳೆಯ ಘಟನೆ ಬಗ್ಗೆ ಮಾತನಾಡಿದ್ದರು ರಾಣಾ.
‘ದೊಡ್ಡ ಹಿಂದಿ ಹೀರೋಯಿನ್ ಆ ಸಿನಿಮಾದಲ್ಲಿ ನಟಿಸಿದ್ದರು. ನಾನು ಹೋಗುವಾಗ ಅವರು ಮೂರನೇ ಟೇಕ್ ಮಾಡುತ್ತಿದ್ದರು ಅನಿಸುತ್ತಿದೆ. ಶೂಟಿಂಗ್ ನಡೆಯುವಾಗ ಲಂಡನ್ನಲ್ಲಿರುವ ಗಂಡನ ಜೊತೆ ಮಾತನಾಡುತ್ತಿದ್ದರು. ಹಾಗಂತ ಅದು ಮುಖ್ಯವಾದ ವಿಚಾರ ಆಗಿರಲಿಲ್ಲ. ಯಾವುದೋ ಶಾಪಿಂಗ್ ವಿಚಾರವಾಗಿ ಮಾತನಾಡುತ್ತಿದ್ದರು. ದುಲ್ಕರ್ ಮಾತ್ರ ಒಂದು ಕಡೆಯಲ್ಲಿ ನಿಂತಿದ್ದರು. ಕ್ಯಾಮೆರಾ ಎದುರಿಸುವಾಗ ಡೈಲಾಗ್ ಮರೆಯುತ್ತಿದ್ದರು, ಫೋನ್ನಲ್ಲಿ ಮಾತನಾಡುತ್ತಿದ್ದರು. ಆದರೆ, ಆ ವ್ಯಕ್ತಿ ಮಾತ್ರ ಹಾಗೆಯೇ ನಿಂತಿದ್ದರು. ಅವರು ಮಾತ್ರ ಪ್ಯಾಕ್ಅಪ್ ಅನ್ನೋವರೆಗೂ ಹಾಗೆಯೇ ಇದ್ದರು’ ಎಂದು ರಾಣಾ ಹೇಳಿದ್ದರು. ಇದು ಸೋನಂ ಬಗ್ಗೆ ಹೇಳಿದ ಮಾತು ಎಂದು ಎಲ್ಲರಿಗೂ ಗೊತ್ತಾಗಿತ್ತು.
I am genuinely troubled by the negativity that has been aimed at Sonam due to my comments, that are totally untrue and were meant entirely in a light-hearted manner. As friends, we often exchange playful banter, and I deeply regret that my words have been misinterpreted.
I take…— Rana Daggubati (@RanaDaggubati) August 15, 2023
ಇದನ್ನೂ ಓದಿ: ಹೊಸ ಸಿನಿಮಾ ಘೋಷಿಸಿದ ರಾಣಾ ದಗ್ಗುಬಾಟಿ ಮೇಲೆ ಹಿರಿಯ ನಿರ್ದೇಶಕ ಗರಂ: ಕಾರಣ?
ರಾಣಾ ಹೇಳಿದ ಡೈಲಾಗ್ ಇಟ್ಟುಕೊಂಡು ಸೋನಂ ಅವರನ್ನು ಟೀಕೆ ಮಾಡಲಾಗಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಕಾಮೆಂಟ್‌ಗಳಿಂದಾಗಿ ಸೋನಂ ಟೀಕೆಗೆ ಒಳಗಾಗಿದ್ದಾರೆ. ನಾನು ಹೇಳಿದ್ದು ಸತ್ಯವಲ್ಲ. ಅದನ್ನು ನಾನು ಗಂಭೀರವಾಗಿ ಹೇಳಿರಲಿಲ್ಲ. ನಾವು ಆಗಾಗ ತಮಾಷೆ ಮಾಡುತ್ತಾ ಇರುತ್ತೇವೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಸೋನಂ ಮತ್ತು ದುಲ್ಕರ್‌ಗೆ ನಾನು ಕ್ಷಮೆ ಕೇಳುತ್ತೇನೆ. ಅವರಿಬ್ಬರನ್ನೂ ನಾನು ಬಹಳವಾಗಿ ಗೌರವಿಸುತ್ತೇನೆ. ಈ ಸ್ಪಷ್ಟೀಕರಣ ಎಲ್ಲಾ ತಪ್ಪು ತಿಳುವಳಿಕೆಯನ್ನು ಕೊನೆಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನೀವು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು’ ಎಂದು ರಾಣಾ ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Tue, 15 August 23