
ಡಬ್ಲ್ಯುಡಬ್ಲ್ಯುಇ (WWE) ಪಂದ್ಯಗಳ ಬಗ್ಗೆ ಇಡೀ ಜಗತ್ತಿನಲ್ಲಿ ಕ್ರೇಜ್ ಇದೆ. ವಿಶೇಷವಾಗಿ ಮಕ್ಕಳು ಈ ಶೋ ಹೆಚ್ಚು ನೋಡುತ್ತಾರೆ. ಹಾಗಂತ ದೊಡ್ಡವರಿಗೆ ಕ್ರೇಜ್ ಇಲ್ಲ ಅಂತೇನಲ್ಲ. ವಯಸ್ಕರು ಕೂಡ ಡಬ್ಲ್ಯುಡಬ್ಲ್ಯುಇ ಕಾದಾಟ ನೋಡಿ ಎಂಜಾಯ್ ಮಾಡುತ್ತಾರೆ. ದಶಕಗಳಿಂದ ಜನರನ್ನು ರಂಜಿಸುತ್ತ ಬಂದಿರುವ ಈ ಕ್ರೀಡೆಗೆ ಈಗಲೂ ಅಷ್ಟೇ ಜನಪ್ರಿಯತೆ ಇದೆ. ಇತ್ತೀಚೆಗೆ ‘ಡಬ್ಲ್ಯುಡಬ್ಲ್ಯುಇ ರಸಲ್ ಮೇನಿಯಾ 41’ (WWE Wrestlemania 41) ಪಂದ್ಯಗಳು ನಡೆದಿವೆ. ಈ ಇವೆಂಟ್ಗೆ ಟಾಲಿವುಡ್ ನಟ ರಾಣಾ ದಗ್ಗುಬಾಟಿ (Rana Daggubati) ಅವರು ಹಾಜರಿ ಹಾಕಿದ್ದಾರೆ. ಈ ಸಂದರ್ಭದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ.
ಪ್ರತಿವರ್ಷ ‘ರಸಲ್ ಮೇನಿಯಾ’ ಪಂದ್ಯಗಳು ನಡೆಯುತ್ತವೆ. ಈ ಬಾರಿ 41ನೇ ಸಾಲಿನ ಹಣಾಹಣಿ ನಡೆದಿದೆ. ಈ ಪಂದ್ಯಗಳನ್ನು ನೋಡಲು ಟಾಲಿವುಡ್ ಹೀರೋ, ನಿರ್ಮಾಪಕ ರಾಣಾ ದಗ್ಗುಬಾಟಿ ಅವರು ಹೋಗಿದ್ದಾರೆ. ಭಾರತದಿಂದ ‘ಡಬ್ಲ್ಯುಡಬ್ಲ್ಯುಇ ರಸಲ್ ಮೇನಿಯಾ’ ನೋಡಲು ಹೋದ ಮೊದಲ ಸೆಲೆಬ್ರಿಟಿ ಎಂಬ ಖ್ಯಾತಿಗೆ ರಾಣಾ ದಗ್ಗುಬಾಟಿ ಅವರು ಪಾತ್ರರಾಗಿದ್ದಾರೆ.
ಅಷ್ಟಕ್ಕೂ ರಾಣಾ ದಗ್ಗುಬಾಟಿ ಅವರು ‘ಡಬ್ಲ್ಯುಡಬ್ಲ್ಯುಇ ರಸಲ್ ಮೇನಿಯಾ’ ನೋಡಲು ಹೋಗಿದ್ದಕ್ಕೆ ಒಂದು ಪ್ರಮುಖ ಕಾರಣ ಕೂಡ ಇದೆ. ಇದೇ ಮೊದಲ ಬಾರಿಗೆ ನೆಟ್ಫ್ಲಿಕ್ಸ್ನಲ್ಲಿ ‘ಡಬ್ಲ್ಯುಡಬ್ಲ್ಯುಇ ರಸಲ್ ಮೇನಿಯಾ’ ಪ್ರಸಾರ ಆಗುತ್ತಿದೆ. 10 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ಕಾರಣದಿಂದ ‘ಡಬ್ಲ್ಯುಡಬ್ಲ್ಯುಇ ರಸಲ್ ಮೇನಿಯಾ’ ಇವೆಂಟ್ನಲ್ಲಿ ನೆಟ್ಫ್ಲಿಕ್ಸ್ ಕಾರ್ಯಕ್ರಮಗಳ ಪ್ರಮೋಷನ್ ಮಾಡಲಾಗಿದೆ.
ರಾಣಾ ದಗ್ಗುಬಾಟಿ ಅವರು ‘ರಾಣಾ ನಾಯ್ಡು’ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಇದು ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಆಗುತ್ತಿದೆ. ಇದರ ಪ್ರಚಾರಕ್ಕಾಗಿ ರಾಣಾ ದಗ್ಗುಬಾಟಿ ಅವರು ಲಾಸ್ ವೇಗಸ್ ನಗರಕ್ಕೆ ತೆರಳಿ ‘ಡಬ್ಲ್ಯುಡಬ್ಲ್ಯುಇ ರಸಲ್ ಮೇನಿಯಾ’ ಇವೆಂಟ್ನಲ್ಲಿ ಭಾಗಿಯಾಗಿದ್ದಾರೆ. ಇದು ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.
ಇದನ್ನೂ ಓದಿ: ರಿಷಬ್ ಶೆಟ್ಟಿಯ ಹುಡುಕಿ ಕೆರಾಡಿಗೆ ಬಂದ ರಾಣಾ ದಗ್ಗುಬಾಟಿ: ಚಿತ್ರಗಳು
ಈ ಅವಕಾಶದ ಬಗ್ಗೆ ರಾಣಾ ದಗ್ಗುಬಾಟಿ ಅವರು ಮಾತನಾಡಿದ್ದಾರೆ. ‘ಡಬ್ಲ್ಯುಡಬ್ಲ್ಯುಇ ರಸಲ್ ಮೇನಿಯಾ 41’ ಇವೆಂಟ್ನಲ್ಲಿ ಭಾಗಿಯಾಗಿರುವುದು ಒಂದು ವಿಶೇಷ ಅನುಭವ. ಡಬ್ಲ್ಯುಡಬ್ಲ್ಯುಇ ನಮ್ಮೆಲ್ಲರ ಬಾಲ್ಯದ ಭಾಗವಾಗಿತ್ತು. ಈಗ ನೇರವಾಗಿ ನೋಡುತ್ತಾ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದೇನೆ. ರಾಣಾ ನಾಯ್ಡು ಮತ್ತು ಡಬ್ಲ್ಯುಡಬ್ಲ್ಯುಇ ನೆಟ್ಫ್ಲಿಕ್ಸ್ನಲ್ಲಿ ಒಟ್ಟಿಗೆ ಪ್ರಸಾರ ಆಗುತ್ತಿರುವುದರಿಂದ ಒಂದು ಪೂರ್ಣತೆಯ ಭಾವ ಮೂಡಿದೆ’ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.