ರಿಲೀಸ್​ಗೂ ಮೊದಲೇ ‘ಜವಾನ್’ ಸಿನಿಮಾ ದಾಖಲೆ ಪುಡಿಮಾಡಿದ ‘ಅನಿಮಲ್’ ಸಿನಿಮಾ

| Updated By: ರಾಜೇಶ್ ದುಗ್ಗುಮನೆ

Updated on: Nov 08, 2023 | 12:47 PM

ಬಾಕ್ಸ್ ಆಫೀಸ್​ನಲ್ಲಿ ‘ಜವಾನ್’ ಹಾಗೂ ‘ಬ್ರಹ್ಮಾಸ್ತ್ರ’ ಸಿನಿಮಾ ಒಳ್ಳೆಯ ಗಳಿಕೆ ಮಾಡಿದ್ದವು. ಕೇವಲ ಭಾರತ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರಕ್ಕೆ ಒಳ್ಳೆಯ ಗಳಿಕೆ ಆಗಿತ್ತು. ಈಗ ‘ಅನಿಮಲ್’ ಚಿತ್ರಕ್ಕೆ ವಿದೇಶದಲ್ಲಿ ಹೆಚ್ಚು ಸ್ಕ್ರೀನ್ ಸಿಗುತ್ತಿರುವುದರಿಂದ ಸಹಜವಾಗಿಯೇ ಗಳಿಕೆ ಹೆಚ್ಚಲಿದೆ.

ರಿಲೀಸ್​ಗೂ ಮೊದಲೇ ‘ಜವಾನ್’ ಸಿನಿಮಾ ದಾಖಲೆ ಪುಡಿಮಾಡಿದ ‘ಅನಿಮಲ್’ ಸಿನಿಮಾ
ರಣಬೀರ್​ ಕಪೂರ್​, ರಶ್ಮಿಕಾ ಮಂದಣ್ಣ
Follow us on

ಡಿಸೆಂಬರ್ ತಿಂಗಳು ಬಂತೆಂದರೆ ಸಿನಿಪ್ರಿಯರಿಗೆ ಖುಷಿಯೋ ಖುಷಿ. ಕ್ರಿಸ್​ಮಸ್ ಸಮಯ ಎಂಬ ಕಾರಣಕ್ಕೆ ಸಾಕಷ್ಟು ಸಿನಿಮಾಗಳು ಈ ಸಂದರ್ಭದಲ್ಲಿ ರಿಲೀಸ್ ಆಗುತ್ತವೆ. ಬಿಗ್ ಬಜೆಟ್ ಚಿತ್ರಗಳು ಈ ಸಂದರ್ಭದಲ್ಲಿ ರಿಲೀಸ್ ಆಗಿ ಅಬ್ಬರಿಸುತ್ತವೆ. ಈ ವರ್ಷ ಡಿಸೆಂಬರ್​ನಲ್ಲೂ ಹಲವು ಚಿತ್ರಗಳು ಬಿಡುಗಡೆ ಆಗುತ್ತಿವೆ. ಆ ಪೈಕಿ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್’ (Animal Movie) ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ರಿಲೀಸ್​ಗೂ ಮೊದಲೇ ಈ ಚಿತ್ರ ‘ಜವಾನ್’ ಚಿತ್ರದ ದಾಖಲೆಯನ್ನು ಉಡೀಸ್ ಮಾಡಿದೆ.

‘ಅರ್ಜುನ್ ರೆಡ್ಡಿ’ ಹಾಗೂ ಇದರ ಹಿಂದಿ ರಿಮೇಕ್ ‘ಕಬೀರ್ ಸಿಂಗ್’ ಚಿತ್ರವನ್ನು ನಿರ್ದೇಶನ ಮಾಡಿ ಫೇಮಸ್ ಆದರು ಸಂದೀಪ್ ರೆಡ್ಡಿ ವಂಗ. ಆ ಬಳಿಕ ಅವರು ‘ಅನಿಮಲ್’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರು ರಣಬೀರ್ ಕಪೂರ್​ಗೆ ಜೊತೆಯಾಗಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ಎರಡು ಶೇಡ್​ನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರ ಅಮೆರಿಕದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.

‘ಅನಿಮಲ್’ ಸಿನಿಮಾ ಉತ್ತರ ಅಮೆರಿಕದಲ್ಲಿ 888 ಪರದೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಮೊದಲು ರಿಲೀಸ್ ಆದ ‘ಜವಾನ್’ ಚಿತ್ರಕ್ಕೆ ಈ ಭಾಗದಲ್ಲಿ 850 ಪರದೆಗಳು ಸಿಕ್ಕಿದ್ದವು. ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ 810 ಪರದೆಗಳು ದೊರೆತಿದ್ದವು. ಈ ದಾಖಲೆಯನ್ನು ‘ಅನಿಮಲ್’ ಸಿನಿಮಾ ಮುರಿದು ಹಾಕಿದೆ. ಅಮೆರಿಕದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಹಿಂದಿ ಸಿನಿಮಾ ಎನ್ನುವ ಜನಪ್ರಿಯತೆ ಈ ಚಿತ್ರಕ್ಕೆ ಸಿಕ್ಕಿದೆ.

ಬಾಕ್ಸ್ ಆಫೀಸ್​ನಲ್ಲಿ ‘ಜವಾನ್’ ಹಾಗೂ ‘ಬ್ರಹ್ಮಾಸ್ತ್ರ’ ಸಿನಿಮಾ ಒಳ್ಳೆಯ ಗಳಿಕೆ ಮಾಡಿದ್ದವು. ಕೇವಲ ಭಾರತ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರಕ್ಕೆ ಒಳ್ಳೆಯ ಗಳಿಕೆ ಆಗಿತ್ತು. ಈಗ ‘ಅನಿಮಲ್’ ಚಿತ್ರಕ್ಕೆ ವಿದೇಶದಲ್ಲಿ ಹೆಚ್ಚು ಸ್ಕ್ರೀನ್ ಸಿಗುತ್ತಿರುವುದರಿಂದ ಸಹಜವಾಗಿಯೇ ಗಳಿಕೆ ಹೆಚ್ಚಲಿದೆ. ಇದರಿಂದ ನಿರ್ಮಾಪಕರ ಮೊಗದಲ್ಲಿ ನಗು ಮೂಡಿದೆ.

ಇದನ್ನೂ ಓದಿ: ಡಿಪ್​ಫೇಕ್​ ವಿಡಿಯೋಗಳಿಂದ ಸಮಸ್ಯೆಗೆ ಒಳಗಾದ ಸೆಲೆಬ್ರಿಟಿಗಳು ಇವರೇ ನೋಡಿ

‘ಅರ್ಜುನ್ ರೆಡ್ಡಿ’ ಸಿನಿಮಾ ಸಖತ್ ರಾ ಆಗಿತ್ತು. ಕಥಾ ನಾಯಕನಿಗೆ ಅಲ್ಲಿ ಎರಡು ಶೇಡ್ ಇತ್ತು. ‘ಅನಿಮಲ್’ ಚಿತ್ರಕ್ಕೂ ಇದೇ ಥೀಮ್ ಇದೆ. ಸಿನಿಮಾ ರಾ ಆಗಿದೆ ಹಾಗೂ ಕಥಾ ನಾಯಕನಿಗೆ ಎರಡು ಶೇಡ್ ಇದೆ ಅನ್ನೋದು ಟೀಸರ್ ಮೂಲಕ ಗೊತ್ತಾಗಿದೆ. ಈ ಕಾರಣದಿಂದಲೇ ‘ಅನಿಮಲ್’ ನೋಡಲು ಫ್ಯಾನ್ಸ್ ಕಾದಿದ್ದಾರೆ. ಟಿ-ಸೀರಿಸ್ ಮೂಲಕ ಭೂಷಣ್​ ಕುಮಾರ್, ಕ್ರಿಶನ್ ಕುಮಾರ್ ಮೊದಲಾದವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಣಬೀರ್, ರಶ್ಮಿಕಾ ಜೊತೆ ಬಾಬಿ ಡಿಯೋಲ್, ಅನಿಲ್ ಕಪೂರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಡಿಸೆಂಬರ್ 1ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಟ್ರೇಲರ್​ಗಾಗಿ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ