ರಾಣಿ ಮುಖರ್ಜಿ ಪತಿಯ ಬಳಿ ಇದೆ 7500 ಕೋಟಿ ರೂ. ಆಸ್ತಿ; ಎರಡನೇ ಪತ್ನಿ ಆಗಲು ನಟಿ ಒಪ್ಪಿದ್ದೇಕೆ?

| Updated By: ರಾಜೇಶ್ ದುಗ್ಗುಮನೆ

Updated on: Mar 21, 2024 | 8:02 AM

ರಾಣಿ ಮುಖರ್ಜಿ ಖಾಸಗಿ ವಿಚಾರಗಳನ್ನು ಹೆಚ್ಚು ಹಂಚಿಕೊಳ್ಳುವುದಿಲ್ಲ. ಇದೇ ರೀತಿಯ ಪತಿ ಸಿಕ್ಕರೆ ಉತ್ತಮ ಎಂದು ಅವರು ಅಂದುಕೊಂಡಿದ್ದರು. ಪತಿ ಹೆಚ್ಚು ಇಂಟ್ರೋವರ್ಟ್ ಆಗಿದ್ದರೆ ಉತ್ತಮ ಎಂದು ಅವರು ಭಾವಿಸಿದ್ದರು. ಆದಿತ್ಯ ಚೋಪ್ರಾ ಅವರಲ್ಲಿ ಈ ಗುಣ ಇತ್ತು. ಹೀಗಾಗಿ ಅವರನ್ನು ರಾಣಿ ಒಪ್ಪಿಕೊಂಡಿದ್ದರು.

ರಾಣಿ ಮುಖರ್ಜಿ ಪತಿಯ ಬಳಿ ಇದೆ 7500 ಕೋಟಿ ರೂ. ಆಸ್ತಿ; ಎರಡನೇ ಪತ್ನಿ ಆಗಲು ನಟಿ ಒಪ್ಪಿದ್ದೇಕೆ?
ರಾಣಿ ಮುಕರ್ಜಿ
Follow us on

ನಟಿ ರಾಣಿ ಮುಖರ್ಜಿ (Rani Mukerji) ಅವರಿಗೆ ಇಂದು (ಮಾರ್ಚ್ 21) ಬರ್ತ್​ಡೇ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಾಣಿ ಮುಖರ್ಜಿ ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ಆದಿತ್ಯ ಚೋಪ್ರಾ ಅವರನ್ನು ಮದುವೆ ಆಗಿ 10 ವರ್ಷಗಳು ಕಳೆದಿವೆ. ಅವರ ಜನ್ಮದಿನದ ಸಂದರ್ಭದಲ್ಲಿ ಮದುವೆ ವಿಚಾರ ಚರ್ಚೆಗೆ ಬರುತ್ತಿದೆ. ಅವರ ಪತಿ ಆದಿತ್ಯ ಚೋಪ್ರಾ ಅವರ ಆಸ್ತಿ ಬರೋಬ್ಬರಿ 7,500 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಆದಿತ್ಯ ಚೋಪ್ರಾ ಹಾಗೂ ರಾಣಿ ಮುಖರ್ಜಿ ಅವರು 2014ರಲ್ಲಿ ಮದುವೆ ಆದರು. ಈ ದಂಪತಿಗೆ ಓರ್ವ ಮಗಳಿದ್ದಾಳೆ. ರಾಣಿ ಮುಖರ್ಜಿ ಪತಿ ಆದಿತ್ಯ ಚೋಪ್ರಾಗೆ ಆಗಲೇ ಒಂದು ಮದುವೆ ಆಗಿತ್ತು. ಪಾಯಲ್ ಖನ್ನಾ ಅವರನ್ನು 2001ರಲ್ಲಿ ಮದುವೆ ಆಗಿದ್ದ ಆದಿತ್ಯ 2009ರಲ್ಲಿ ವಿಚ್ಛೇದನ ನೀಡಿದ್ದರು. ಆದಿತ್ಯ ಚೋಪ್ರಾ ಅವರು ಖ್ಯಾತ ಡೈರೆಕ್ಟರ್, ನಿರ್ಮಾಪಕ. ಅವರು ಯಶ್ ರಾಜ್ ಫಿಲ್ಮ್ಸ್​ನ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಈಗಾಗಲೇ ಮದುವೆ ಆಗಿ ಡಿವೋರ್ಸ್ ಆಗಿದೆ ಎನ್ನುವ ವಿಚಾರ ಗೊತ್ತಿದ್ದೂ ರಾಣಿ ಮುಖರ್ಜಿ ಮದುವೆ ಆಗಿದ್ದು ಏಕೆ? ಅವರ ಬಳಿ ಸಾಕಷ್ಟು ದುಡ್ಡಿದೆ ಎಂಬುದೇ ಕಾರಣಕ್ಕೆ? ಇದಕ್ಕೆ ರಾಣಿ ಮುಖರ್ಜಿ ಉತ್ತರ ನೀಡಿದ್ದರು.

ರಾಣಿ ಮುಖರ್ಜಿ ಖಾಸಗಿ ವಿಚಾರಗಳನ್ನು ಹೆಚ್ಚು ಹಂಚಿಕೊಳ್ಳುವುದಿಲ್ಲ. ಇದೇ ರೀತಿಯ ಪತಿ ಸಿಕ್ಕರೆ ಉತ್ತಮ ಎಂದು ಅವರು ಅಂದುಕೊಂಡಿದ್ದರು. ಪತಿ ಹೆಚ್ಚು ಇಂಟ್ರೋವರ್ಟ್ ಆಗಿದ್ದರೆ ಉತ್ತಮ ಎಂದು ಅವರು ಭಾವಿಸಿದ್ದರು. ಆದಿತ್ಯ ಚೋಪ್ರಾ ಅವರಲ್ಲಿ ಈ ಗುಣ ಇತ್ತು. ಹೀಗಾಗಿ ಅವರನ್ನು ರಾಣಿ ಒಪ್ಪಿಕೊಂಡಿದ್ದರು. ಇದರಲ್ಲಿ ದುಡ್ಡಿನ ವಿಚಾರ ಬಂದಿರಲಿಲ್ಲ.

ರಾಣಿ ಮುಖರ್ಜಿ ಅವರು 2013ರಿಂದ ಈಚೆ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟಿವ್ ಇಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅತ್ತ ಅವರ ಪತಿ ಆದಿತ್ಯ ಚೋಪ್ರಾ ನಿರ್ಮಾಪಕರಾಗಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ಹೀಗಾದಾಗ ಬೇಸರ ಆಗುವುದಲ್ಲವೇ ಎಂದು ಅವರಿಗೆ ಕೇಳಲಾಗಿತ್ತು. ಇದಕ್ಕೆ ಅವರು ನೇರ ಉತ್ತರ ನೀಡಿದ್ದರು. ‘ಅವರ ಯಶಸ್ಸು ನನಗೆ ಖುಷಿ ನೋಡುತ್ತದೆ. ನನ್ನ ಯಶಸ್ಸಿಗಿಂತ ಹೆಚ್ಚಿನ ಖುಷಿಯನ್ನು ಇದು ನೀಡುತ್ತದೆ’ ಎಂದು ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ: ಯಶ್ ಚೋಪ್ರಾ ಪತ್ನಿ, ಗಾಯಕಿ, ನಿರ್ಮಾಪಕಿ ಪಮೇಲಾ ಚೋಪ್ರಾ ನಿಧನ

ರಾಣಿ ಮುಖರ್ಜಿ ಹಾಗೂ ಆದಿತ್ಯ ಚೋಪ್ರಾ 2014ರಲ್ಲಿ ಮದುವೆ ಆದರು. 2015ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿದಳು. ಅವಳಿಗೆ ಅದಿರಾ ಎಂದು ಹೆಸರು ಇಡಲಾಗಿದೆ. ಅವರು ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. 2023ರಲ್ಲಿ ಅವರ ನಟನೆಯ ‘ಮಿಸ್ ಚಟರ್ಜಿ vs ನಾರ್​ವೇ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ