‘ಪೋಷಕರು ಲೈಂಗಿಕ ಕ್ರಿಯೆ ನಡೆಸೋದನ್ನು ನೋಡ್ತಾ ಇರ್ತೀರಾ’; ವಿವಾದಕ್ಕೆ ಸಿಲುಕಿದ ರಣವೀರ್ ಅಲಾಹಾಬಾದಿಯಾ
ರಣವೀರ್ ಅಲಾಹಾಬಾದಿಯಾ ಅವರು ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋನಲ್ಲಿ ಕೇಳಿದ ವಿವಾದಾತ್ಮಕ ಪ್ರಶ್ನೆಯಿಂದಾಗಿ ಭಾರಿ ವಿರೋಧ ಎದುರಿಸುತ್ತಿದ್ದಾರೆ. ಅವರ ಪ್ರಶ್ನೆ ಅನೇಕರನ್ನು ಅಸಮಾಧಾನಗೊಳಿಸಿದ್ದು, ಮಹರಾಷ್ಟ್ರ ಮಹಿಳಾ ಆಯೋಗ ದೂರು ದಾಖಲಿಸಿದೆ. ಇದರಿಂದಾಗಿ ಎಫ್‌ಐಆರ್ ದಾಖಲಾಗಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ರಣವೀರ್ ಅಲಾಹಾಬಾದಿಯಾ ಅವರು ಸಾಕಷ್ಟು ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿ ಫೇಮಸ್ ಆದವರು. ಅವರ ‘ಬೀರ್ ಬೈಸೆಪ್ಸ್’ ಯೂಟ್ಯೂಬ್ ಚಾನೆಲ್ ಬರೋಬ್ಬರಿ 82 ಲಕ್ಷ ಸಬ್ಸ್ಕ್ರೈಬರ್ಗಳನ್ನು ಒಳಗೊಂಡಿದೆ. ಇತ್ತೀಚೆಗೆ ಅವರು ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋಗೆ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ.
ಸಮಯ್ ರೈನಾ ಕೂಡ ಯೂಟ್ಯೂಬರ್. ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋ ಮೂಲಕ ಅವರು ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದಾರೆ. ಈ ಶೋನಲ್ಲಿ ಫಿಲ್ಟರ್ ಇಲ್ಲದೆ ಮಾತನಾಡಲಾಗುತ್ತದೆ. ಈ ಶೋಗೆ ಬಂದಿದ್ದ ರಣವೀರ್ ಅವರು ಎಲ್ಲೆ ಮೀರಿ ಮಾತನಾಡಿದ್ದರು. ಹೀಗಾಗಿ, ಸಮಯ್ ರೈನಾ, ಅಪೂರ್ವಾ ಮಖಿಜಾ, ರಣವೀರ್ ಹಾಗೂ ಇತರರ ವಿರುದ್ಧ ಕೇಸ್ ದಾಖಲಾಗಿದೆ.
ನೀಡಿದ ಹೇಳಿಕೆ ಏನು?
ಶೋನಲ್ಲಿ ಪರ್ಫಾರ್ಮ್ ಮಾಡಲು ಬಂದ ಸ್ಪರ್ಧಿಗೆ ರಣವೀರ್ ಅವರು ಪ್ರಶ್ನೆ ಒಂದನ್ನು ಕೇಳಿದ್ದರು. ‘ನಿಮ್ಮ ಜೀವನದುದ್ದಕ್ಕೂ ನಿಮ್ಮ ಹೆತ್ತವರು ಪ್ರತಿದಿನ ಲೈಂಗಿಕತೆಯನ್ನು ಹೊಂದುವುದನ್ನು ನೀವು ನೋಡುತ್ತೀರಾ ಅಥವಾ ಒಮ್ಮೆ ಅವರ ಜೊತೆ ಸೇರಿ ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀರಾ’ ಎಂದು ಕೇಳಿದ್ದರು.
ವಿವಾದ
ಈ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ಅನೇಕ ನಾಯಕರು ಇದನ್ನು ವಿರೋಧಿಸಿದ್ದಾರೆ. ಮಹರಾಷ್ಟ್ರ ಮಹಿಳಾ ಕಮಿಷನ್ನವರು ಮುಂಬೈ ಕಮಿಷನರ್ಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ದಂಗಾದರೂ
ರಣವೀರ್ ಅಲಾಹಾಬಾದಿಯಾ ಅವರು ಸದಾ ಅಧ್ಯಾತ್ಮದ ಬಗ್ಗೆ ಹಾಗೂ ಆ ರೀತಿಯ ಪ್ರಶ್ನೆಗಳನ್ನು ಕೇಳುತ್ತಾ ಗಮನ ಸೆಳೆದವರು. ವೇದಿಕೆ ಮೇಲೆ ರಣವೀರ್ ನೀಡಿದ ಹೇಳಿಕೆ ಕೇಳಿ ಸಮಯ್ ರೈನಾ, ಯೂಟ್ಯೂಬರ್ ಆಶಿಶ್ ಚಂಚಲಾನಿ, ಅಪೂರ್ವ ಮಖಿಜಾ ಮೊದಲಾದವರು ಶಾಕ್ ಆದರು. ಅವರಿಗೆ ಮಾತು ಬರಲೇ ಇಲ್ಲ.
ಇದನ್ನೂ ಓದಿ: ರಣವೀರ್-ದೀಪಿಕಾ ಇರುವ ಮನೆಯ ಒಂದು ತಿಂಗಳ ಬಾಡಿಗೆ ಇಷ್ಟೊಂದಾ?
ಕ್ಷಮೆ
ವಿವಾದ ದೊಡ್ಡದಾಗುತ್ತಿದ್ದಂತೆ ಸಮಯ್ ರೈನಾ ಅವರು ಕ್ಷಮೆ ಕೇಳಿದ್ದಾರೆ. ‘ನನ್ನಿಂದ ತಪ್ಪಾಗಿದೆ ಕ್ಷಮಿಸಿ’ ಎಂದು ಕೇಳಿದ್ದಾರೆ. ಹೀಗಿರುವಾಗಲೇ ಇಂಡಿಯಾಸ್ ಗಾಟ್ ಲೇಟೆಂಟ್ ಶೋನ ಬ್ಯಾನ್ ಮಾಡುವ ಆಗ್ರಹವೂ ಕೇಳಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:33 am, Tue, 11 February 25