ರಣವೀರ್​ ಸಿಂಗ್​ ನಟಿಸಿದ ಈ ಟಾಪ್​ 10 ಚಿತ್ರಗಳಲ್ಲಿ ನಿಮಗೆ ಯಾವುದು ಇಷ್ಟ?

| Updated By: ಮದನ್​ ಕುಮಾರ್​

Updated on: Jul 06, 2021 | 9:22 AM

Ranveer Singh: ಪ್ರತಿಭಾವಂತ ನಟ ರಣವೀರ್​ ಸಿಂಗ್​ ಅವರ ಖಾತೆಯಲ್ಲಿ ಹಲವು ಸೂಪರ್​ಹಿಟ್​ ಚಿತ್ರಗಳಿವೆ. ಆ ಪೈಕಿ ಐಎಂಡಿಬಿ ವೆಬ್​ಸೈಟ್​ನಲ್ಲಿ ಹೆಚ್ಚು ಅಂಕ ಪಡೆದುಕೊಂಡ ಟಾಪ್​ 10 ಸಿನಿಮಾಗಳ ಪಟ್ಟಿ ಇಲ್ಲಿದೆ.

ರಣವೀರ್​ ಸಿಂಗ್​ ನಟಿಸಿದ ಈ ಟಾಪ್​ 10 ಚಿತ್ರಗಳಲ್ಲಿ ನಿಮಗೆ ಯಾವುದು ಇಷ್ಟ?
ರಣವೀರ್​ ಸಿಂಗ್​
Follow us on

ನಟ ರಣವೀರ್​ ಸಿಂಗ್​ ಅವರಿಗೆ ಇಂದು (ಜು.6) ಜನ್ಮದಿನ. ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟನಾಗಿ ಮಿಂಚುತ್ತಿರುವ ಅವರು ಈವರೆಗೂ ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಮಾಸ್​ಗೂ ಸೈ, ಕ್ಲಾಸ್​ಗೂ ಸೈ ಎಂಬಂತೆ ಇರುವ ಅವರ ಪ್ರತಿಭೆಗೆ ಅನೇಕರು ಫಿದಾ ಆಗಿದ್ದಾರೆ. ಐತಿಹಾಸಿಕದಿಂದ ಹಿಡಿದು ಮಾಡರ್ನ್​​ ಲವ್​ಸ್ಟೋರಿ ಚಿತ್ರಗಳವರೆಗೆ ಅವರು ಎಲ್ಲ ಬಗೆಯ ಪಾತ್ರಗಳನ್ನೂ ಮಾಡಿದ್ದಾರೆ. ಐಎಂಡಿಬಿ (ಇಂಟರ್​ನೆಟ್​ ಮೂವೀ ಡೇಟಾಬೇಸ್​) ಪ್ರಕಾರ ರಣವೀರ್​ ಸಿಂಗ್​ ಅಭಿನಯದ ಈ ಸಿನಿಮಾಗಳು ಟಾಪ್​ 10ರಲ್ಲಿ ಸ್ಥಾನ ಪಡೆದುಕೊಂಡಿವೆ.

 

1. ಗಲ್ಲಿ ಬಾಯ್​

ರಣವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ಜೋಡಿಯಾಗಿ ನಟಿಸಿದ ‘ಗಲ್ಲಿ ಬಾಯ್​’ ಚಿತ್ರಕ್ಕೆ ಐಎಂಡಿಬಿ 10ಕ್ಕೆ 8 ಅಂಕ ನೀಡಿದೆ. ಈ ಚಿತ್ರದಲ್ಲಿ ಸ್ಲಂ ಯುವಕನಾಗಿ ರಣವೀರ್​ ನಟಿಸಿರುವುದು ವಿಶೇಷ. 2019ರಲ್ಲಿ ಬಂದ ಈ ಚಿತ್ರಕ್ಕೆ ಜೋಯಾ ಅಖ್ತರ್​ ನಿರ್ದೇಶಕಿ.

2. ಲುಟೇರಾ

ಲುಟೇರಾ ಚಿತ್ರಕ್ಕೆ 7.3 ಅಂಕ ನೀಡಲಾಗಿದೆ. ಸೋನಾಕ್ಷಿ ಸಿನ್ಹಾ ಮತ್ತು ರಣವೀರ್​ ಸಿಂಗ್​ ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡರೂ ಕೂಡ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಗೆಲುವು ಕಾಣಲಿಲ್ಲ.

3. ಬಾಜಿರಾವ್​ ಮಸ್ತಾನಿ

10ಕ್ಕೆ 7.2 ಅಂಕ ಪಡೆದ ಬಾಜೀರಾವ್​ ಮಸ್ತಾನಿ ಸಿನಿಮಾ ಮೂರನೇ ಸ್ಥಾನದಲ್ಲಿದೆ. ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ನಟಿಸಿದ ಈ ಚಿತ್ರಕ್ಕೆ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶಕರು. ಬಾಕ್ಸ್​ ಆಫೀಸ್​ನಲ್ಲೂ ಈ ಸಿನಿಮಾ ಭರ್ಜರಿ ಕಮಾಯಿ ಮಾಡಿತ್ತು.

4. ಬ್ಯಾಂಡ್​ ಬಜಾ ಬರಾತ್​

ಬ್ಯಾಂಡ್​ ಬಜಾ ಬರಾತ್​ ಸಿನಿಮಾ ಕೂಡ 7.2 ಅಂಕ ಪಡೆದುಕೊಂಡಿದೆ. ಮನೀಶ್​ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್​ ಸಿಂಗ್​ಗೆ ಅನುಷ್ಕಾ ಶರ್ಮಾ ಜೋಡಿ. 2010ರಲ್ಲಿ ಬಂದ ಈ ಚಿತ್ರ ಉತ್ತಮ ವಿಮರ್ಶೆಯ ಜೊತೆಗೆ ಒಳ್ಳೆಯ ಕಲೆಕ್ಷನ್​ ಕೂಡ ಮಾಡಿತ್ತು.

5. ಪದ್ಮಾವತ್​

ಅಲ್ಲಾವುದ್ಧೀನ್​ ಖಿಲ್ಜಿ ಪಾತ್ರದಲ್ಲಿ ರಣವೀರ್​ ಸಿಂಗ್​ ಕಾಣಿಸಿಕೊಂಡ ಸಿನಿಮಾ ‘ಪದ್ಮಾವತ್​’. ದೀಪಿಕಾ ಪಡುಕೋಣೆ ಮತ್ತು ಶಾಹಿದ್​ ಕಪೂರ್​ ಜೋಡಿಯಾಗಿದ್ದ ಈ ಚಿತ್ರದಲ್ಲಿ ರಣವೀರ್​ಗೆ ವಿಲನ್​ ಪಾತ್ರ. ಈ ಸಿನಿಮಾ 10ಕ್ಕೆ 7 ಅಂಕ ಪಡೆದುಕೊಂಡಿದೆ.

6. ದಿಲ್​ ದಡಕ್ನೇ ದೋ

ಜೋಯಾ ಅಖ್ತರ್​ ನಿರ್ದೇಶನದ ದಿಲ್​ ದಡಕ್ನೇ ದೋ ಚಿತ್ರಕ್ಕೆ 6.9 ಅಂಕ ಸಿಕ್ಕಿದೆ. 2015ರಲ್ಲಿ ಈ ಸಿನಿಮಾ ತೆರೆಕಂಡಿತು. ರಣವೀರ್​ ಸಿಂಗ್​ ಮಾತ್ರವಲ್ಲದೆ ಅನಿಲ್​ ಕಪೂರ್​, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಸೇರಿದಂತೆ ಬಾಲಿವುಡ್​ನ ​ಅನೇಕ ಕಲಾವಿದರು ನಟಿಸಿದ್ದರು.

7. ರಾಮ್​ಲೀಲಾ

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಜೊತೆಯಾಗಿ ನಟಿಸಿದ ಈ ಚಿತ್ರ 6.4 ಅಂಕ ಪಡೆದುಕೊಂಡಿದೆ. 2013ರಲ್ಲಿ ಬಿಡುಗಡೆ ಆದ ಈ ಸಿನಿಮಾ ಕೂಡ ಬಾಕ್ಸ್​ ಆಫೀಸ್​ನಲ್ಲಿ ಯಶಸ್ಸು ಗಳಿಸಿತ್ತು. ಈ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ಕೂಡ ಸಂಜಯ್​​ ಲೀಲಾ ಬನ್ಸಾಲಿ.

8. ಲೇಡೀಸ್​ ವರ್ಸಸ್​ ರಿಕ್ಕಿ ಬಹ್ಲ್​

ಐಎಂಡಿಬಿ ರೇಟಿಂಗ್​ನಲ್ಲಿ 10ಕ್ಕೆ 6 ಅಂಕ ಪಡೆದುಕೊಂಡಿರುವ ‘ಲೇಡೀಸ್​ ವರ್ಸಸ್​ ರಿಕ್ಕಿ ಬಹ್ಲ್​’ ಚಿತ್ರ 8ನೇ ಸ್ಥಾನ ಪಡೆದುಕೊಂಡಿದೆ. ರಣವೀರ್​ ನಟನೆಯ 2ನೇ ಸಿನಿಮಾ ಇದು.

9. ಸಿಂಬಾ

ರಣವೀರ್​ ಸಿಂಗ್ ಅವರು ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ರೋಹಿತ್​ ಶೆಟ್ಟಿ ನಿರ್ದೇಶಕ. ಈ ಸಿನಿಮಾ 5.6 ಪಡೆದುಕೊಂಡು 9ನೇ ಸ್ಥಾನದಲ್ಲಿದೆ.

10. ಬೇಫಿಕ್ರೆ

ಹತ್ತಕ್ಕೆ 3.9 ಅಂಕ ಪಡೆದುಕೊಂಡ ಈ ಸಿನಿಮಾದಲ್ಲಿ ವಾಣಿ ಕಪೂರ್​ ಮತ್ತು ರಣವೀರ್​ ಸಿಂಗ್​ ಜೋಡಿಯಾಗಿ ನಟಿಸಿದ್ದರು. 2016ರಲ್ಲಿ ಬಿಡುಗಡೆ ಆದ ‘ಬೇಫಿಕ್ರೆ’ ಚಿತ್ರಕ್ಕೆ ಆದಿತ್ಯ ಚೋಪ್ರಾ ನಿರ್ದೇಶಕರು.

ಇದನ್ನೂ ಓದಿ:

ಬೆಳ್ಳಿ ಪರದೆಯಲ್ಲಿ ಉತ್ತುಂಗದಲ್ಲಿರುವಾಗಲೇ ಕಿರುತೆರೆಗೆ ಕಾಲಿಟ್ಟ ನಟ ರಣವೀರ್​ ಸಿಂಗ್​

ಉದ್ದನೆಯ ಕೂದಲು, ವಿಚಿತ್ರ ಬಟ್ಟೆ, ಅರ್ಧ ಕೆಜಿ ಚಿನ್ನ; ಟ್ರೋಲ್​ ಆದ ರಣವೀರ್​ ಸಿಂಗ್​ ಹೊಸ ಅವತಾರ