
ರಣವೀರ್ ಸಿಂಗ್ (Ranveer Sinhgh) ಅವರು ಕಾರಿನ ಬಗ್ಗೆ ಸಖತ್ ಕ್ರೇಜ್ ಹೊಂದಿದ್ದಾರೆ. ಅವರು ಆಗಾಗ ಹೊಸ ಕಾರುಗಳನ್ನು ಖರೀದಿ ಮಾಡುತ್ತಾರೆ. ಅವರ ಬಳಿ ಬೆಂಟ್ಲಿ, ರೇಂಜ್ ರೋವರ್ ರೀತಿಯ ಕಾರುಗಳು ಇವೆ. ಈಗ ಅವರ ಗ್ಯಾರೇಜ್ಗೆ ಹೊಸ ಕಾರೊಂದು ಸೇರ್ಪಡೆ ಆಗಿದೆ. ಲಕ್ಷುರಿ ಹಾಗೂ ಪವರ್ ಫುಲ್ ಹಮ್ಮರ್ ಇವಿ 3ಎಕ್ಸ್ ಕಾರನ್ನು ರಣವೀರ್ ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ ನಾಲ್ಕೂವರೆ ಕೋಟಿ ರೂಪಾಯಿ. ಮುಂದಿನ ದಿನಗಳಲ್ಲಿ ಅವರು ಮುಂಬೈ ರಸ್ತೆಗಳಲ್ಲಿ ಈ ಕಾರಿನಲ್ಲಿ ಸುತ್ತಾಟ ನಡೆಸಿದರೂ ಅಚ್ಚರಿ ಏನಿಲ್ಲ.
ರಣವೀರ್ ಬಳಿ ಇಷ್ಟು ವಿವಿಧ ರೀತಿಯ ಕಾರುಗಳು ಇವೆ ನಿಜ. ಆದರೆ, ಅವರು ಈವರೆಗೆ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿರಲಿಲ್ಲ. ಈಗ ಅವರು ತಮ್ಮ ಹೆಸರಲ್ಲಿ ಹಮ್ಮರ ಖರೀದಿ ಮಾಡಿದ್ದಾರೆ. ಈ ಕಾರನ್ನು ಅವರ ಮುಂಬೈ ನಿವಾಸಕ್ಕೆ ಡೆಲಿವರಿ ನೀಡಲಾಗಿದೆ. ಈ ಕಾರು ಹಲವು ಫೀಚರ್ಗಳನ್ನು ಹೊಂದಿದೆ.
ರಣವೀರ್ ಖರೀದಿಸಿದ ಹಮ್ಮರ್ ಹೈ ಎಂಡ್ ಕಾರಾಗಿದ್ದು, ಇದರ ಎಕ್ಸ್ ಶೋ ರೂಂ. ಬೆಲೆ 3.85 ಕೋಟಿ ರೂಪಾಯಿ. ಟ್ಯಾಕ್ಸ್ ಹಾಗೂ ಇತರ ವಿಚಾರ ಸೇರಿದರೆ ಇದರ ಬೆಲೆ 4.57 ಕೋಟಿ ರೂಪಾಯಿ ಆಗಲಿದೆ. ರಣವೀರ್ ಸಿಂಗ್ ಬರ್ತ್ಡೇ ವಾರದಲ್ಲಿ ಈ ಕಾರು ಬಂದಿದೆ ಅನ್ನೋದು ವಿಶೇಷ. ಈ ಕಾರನ್ನು ಅವರು ಬರ್ತ್ಡೇ ದಿನವೇ ಪಡೆಯುವ ಆಲೋಚನೆಯಲ್ಲಿ ಇದ್ದರು. ಆದರೆ, ಸ್ವಲ್ಪ ತಡವಾಗಿದೆ.
ಹಮ್ಮರ್ ಇವಿ 3ಎಕ್ಸ್ ಸಾಮಾನ್ಯ ಕಾರಲ್ಲ. ಒಮ್ಮೆ ಪೂರ್ತಿಯಾಗಿ ಚಾರ್ಜ್ ಆದರೆ ಸುಮಾರು 500 ಕಿ.ಮೀ ಚಲಿಸಬಹುದು. 830 ಹಾರ್ಸ್ ಪವರ್ ಹೊಂದಿದೆ. 11,500 ಟಾರ್ಕ್ ಕಾರಿನಲ್ಲಿ ಇದೆ. ಎಲೆಕ್ಟ್ರಿಕ್ ಕಾರಿನಲ್ಲಿ ಇಷ್ಟೊಂದು ಫೀಚರ್ ಎಲ್ಲಿಯೂ ಸಿಗೋದಿಲ್ಲ. ಸೂಪರ್ ಕ್ರ್ಯೂಸ್ ಮೊದಲಾದ ತಂತ್ರಜ್ಞಾನವನ್ನು ಇದು ಹೊಂದಿದೆ. ಈ ಕಾರು ಬಿಳಿ, ಕೆಂಪು, ಸೇರಿದಂತೆ ಏಳು ಬಣ್ಣಗಳಲ್ಲಿ ಲಭ್ಯ.
ಇದನ್ನೂ ಓದಿ: 20 ವರ್ಷ ಕಿರಿಯ ನಟಿಯ ಜೊತೆ ರಣವೀರ್ ಸಿಂಗ್ ರೊಮ್ಯಾನ್ಸ್; ಕೇಳಿಬಂತು ಟೀಕೆ
ಇದು ಉದ್ದನೆಯ ಕಾರು ಎನಿಸಿಕೊಂಡರು ಐವರು ಮಾತ್ರ ಇದರಲ್ಲಿ ಕೂರಬಹುದು. ಲಕ್ಷುರಿ ಫೀಲ್ ಬರಲಿ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಆರು ಏರ್ಬ್ಯಾಗ್ಗಳನ್ನು ಕಾರು ಹೊಂದಿದೆ. 14 ಸ್ಪೀಕರ್ಗಳನ್ನು ಈ ಕಾರು ಹೊಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:58 am, Thu, 10 July 25