20 ವರ್ಷ ಕಿರಿಯ ನಟಿಯ ಜೊತೆ ರಣವೀರ್ ಸಿಂಗ್ ರೊಮ್ಯಾನ್ಸ್; ಕೇಳಿಬಂತು ಟೀಕೆ
Sara Arjun: ರಣವೀರ್ ಸಿಂಗ್ ಅವರ ಹೊಸ ಚಿತ್ರ 'ಧುರಂಧರ್' ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅವರು ತಮಗಿಂತ 20 ವರ್ಷ ಕಿರಿಯ ನಟಿ ಸಾರಾ ಅರ್ಜುನ್ ಜೊತೆ ನಟಿಸಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಾರಾ ಅವರು 'ಪೊನ್ನಿಯಿನ್ ಸೆಲ್ವನ್'ನಲ್ಲೂ ನಟಿಸಿದ್ದಾರೆ.

ರಣವೀರ್ ಸಿಂಗ್ (Ranveer Singh) ಅವರು ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಇದಕ್ಕೆ ಸಿನಿಮಾ ಬದುಕು ಹಾಗೂ ಅವರ ವೈಯಕ್ತಿಕ ಜೀವನ ಎರಡೂ ಕಾರಣ. ಈಗ ರಣವೀರ್ ಸಿಂಗ್ ಅವರ ಹೆಸರು ಸಾಕಷ್ಟು ಚರ್ಚೆಯಲ್ಲಿ ಇದೆ. ಅವರ ನಟನೆಯ ‘ಧುರಂಧರ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅವರು ತಮಗಿಂತ 20 ವರ್ಷ ಸಣ್ಣ ನಟಿಯ ಜೊತೆ ರೊಮ್ಯಾನ್ಸ್ ಮಾಡಿರೋದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ರಣವೀರ್ ಸಿಂಗ್ ಅವರು ‘ಧುರಂದರ್’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ‘ಉರಿ’ ಖ್ಯಾತಿಯ ಆದಿತ್ಯ ಧಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಸಾರಾ ಅರ್ಜುನ್ ನಾಯಕಿ. ಅವರಿಗೆ ಈಗಿನ್ನೂ 20 ವರ್ಷ. ರಣವೀರ್ ಸಿಂಗ್ಗೆ 40 ವರ್ಷ. ಇಬ್ಬರ ಮಧ್ಯೆ 20 ವರ್ಷಗಳ ವಯಸ್ಸಿನ ಅಂತರ ಇದೆ. ಮಗಳ ವಯಸ್ಸಿನವರ ಜೊತೆ ರೊಮ್ಯಾನ್ಸ್ ಮಾಡೋಕೆ ಹೇಗೆ ಸಾಧ್ಯ ಎಂದು ಅನೇಕರು ಕೇಳಿದ್ದಾರೆ.
ಸಾರಾ ಅವರು 2005ರ ಜೂನ್ 18ರಂದು ಜನಿಸಿದರು. ಅವರು ಹುಟ್ಟಿದ್ದು ಮುಂಬೈನಲ್ಲಿ. ತೊಟ್ಟಿಲಲ್ಲಿ ಇದ್ದಾಗಲೇ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡರು. ಕೇವಲ 5ನೇ ವಯಸ್ಸಿಗೆ ಸಿನಿಮಾ ಲೋಕದ ಜೊತೆ ಒಳ್ಳೆಯ ನಂಟು ಬೆಳೆಯಿತು. ಆಗಲೇ ಅವರು 100ಕ್ಕೂ ಅಧಿಕ ಕಮರ್ಷಿಯಲ್ಗಳಲ್ಲಿ ಕಾಣಿಸಿಕೊಂಡಿದ್ದರು. ವಿಕ್ರಮ್ ನಟನೆಯ ‘ದೈವ ತಿರುಮಗಳ್’ (2011) ಚಿತ್ರದಲ್ಲಿ ಸಾರಾ ಮಾಡಿದ ಪಾತ್ರ ಗಮನ ಸೆಳೆಯಿತು. ಅವರು ಹಿಂದಿಯಲ್ಲೂ ಮಿಂಚಿದರು.
ಇದನ್ನೂ ಓದಿ: ಬಾಲಿವುಡ್ನಲ್ಲಿ ಮತ್ತೊಂದು ‘ಅನಿಮಲ್’; ‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ರಕ್ಕಸ ಅವತಾರ
ಈ ಮೊದಲು ರಿಲೀಸ್ ಆಗಿ ಸೂಪರ್ ಹಿಟ್ ಆದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದಲ್ಲಿ ಸಾರಾ ನಟಿಸಿದ್ದರು. ಸಾರಾ 19 ವರ್ಷದಲ್ಲಿದ್ದಾಗ ಅವರಿಗೆ ‘ಧುರಂಧರ್’ ಸಿನಿಮಾ ಆಫರ್ ಬಂತು. ರಣವೀರ್ ಎದುರು ಅವರು ನಟಿಸುತ್ತಿದ್ದಾರೆ. ನಾಯಕಿ ಆಗಿ ಅವರಿಗೆ ಇದು ಮೊದಲ ಚಿತ್ರ. ಸಾರಾ ಅವರು ರಾಜ್ ಅರ್ಜುನ್ ಮಗಳು. ತಂದೆಯ ಕಾರಣದಿಂದ ಅವರಿಗೆ ಸುಲಭದಲ್ಲಿ ಬಣ್ಣದ ಲೋಕದಲ್ಲಿ ನಟಿಸೋ ಅವಕಾಶ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:50 am, Mon, 7 July 25