‘ಟಾಕ್ಸಿಕ್’ ಚಿತ್ರದಿಂದ ರವಿ ಬಸ್ರೂರು ಔಟ್? ರಾಕ್ಸ್ಟಾರ್ಗೆ ಮಣೆ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗಿದೆ. ಮೊದಲು ರವಿ ಬಸ್ರೂರು ಅವರ ಹೆಸರು ಘೋಷಣೆಯಾಗಿತ್ತು. ಆದರೆ ಈಗ ಅನಿರುದ್ಧ್ ಅವರ ಆಯ್ಕೆ ಖಚಿತವಾಗಿದೆ ಎನ್ನಲಾಗುತ್ತಿದೆ. ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಒಂದಿಲ್ಲೊಂದು ಅಪ್ಡೇಟ್ ಸಿಗುತ್ತಲೇ ಇದೆ. ಈ ಸಿನಿಮಾ ಪಾತ್ರವರ್ಗದ ಕಾರಣಕ್ಕೆ ಸಾಕಷ್ಟು ಸುದ್ದಿ ಆಗುತ್ತಿದೆ. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾಗೆ ಸಂಗೀತ ಸಂಯೋಜಕನ ಆಯ್ಕೆ ಸಂಪೂರ್ಣ ಫೈನಲ್ ಆಗಿದೆ. ಟಾಲಿವುಡ್ ಹಾಗೂ ಕಾಲಿವುಡ್ನ ಹಿಟ್ ಸಂಗೀತ ಸಂಯೋಜಕ ರಾಕ್ಸ್ಟಾರ್ ಅನಿರುದ್ಧ್ ರವಿಚಂದ್ರನ್ ಅವರು ಈ ಸಿನಿಮಾಗೆ ಮ್ಯೂಸಿಕ್ ಮಾಡಲಿದ್ದಾರೆ ಎಂದು ವರದಿ ಆಗಿದೆ.
ಯಾವುದೇ ಸಿನಿಮಾ ಗಮನ ಸೆಳೆಯಬೇಕು ಎಂದರೆ ಮ್ಯೂಸಿಕ್ ಕೂಡ ಮುಖ್ಯವಾಗುತ್ತದೆ. ಈ ಮೊದಲು ತಮಿಳಿನಲ್ಲಿ ರಿಲೀಸ್ ಆಗಿ ಹಿಟ್ ಆದ ‘ಜೈಲರ್’ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದು ಅನಿರುದ್ಧ್ ಅವರೇ. ಈ ಹಾಡುಗಳು ಗಮನ ಸೆಳೆದವರು. ಚಿತ್ರದ ಬಿಜಿಎಂ ಕೂಡ ಪ್ರೇಕ್ಷಕರಿಂದ ಹೆಚ್ಚಿನ ಅಂಕ ಪಡೆಯಿತು. ಅನಿರುದ್ಧ್ ಅವರು ಈ ರೀತಿಯ ಹಲವು ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರನ್ನು ‘ಟಾಕ್ಸಿಕ್’ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.
View this post on Instagram
ಈ ಮೊದಲು ರವಿ ಬಸ್ರೂರು ಅವರು ‘ಟಾಕ್ಸಿಕ್’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗಿತ್ತು. ಯಶ್ ಬರ್ತ್ಡೇ ದಿನ ರಿಲೀಸ್ ಆದ ಟೀಸರ್ಗೆ ಅವರದ್ದೇ ಸಂಗೀತ ಸಂಯೋಜನೆ ಇತ್ತು. ಆದರೆ, ಈಗ ಅವರ ಬದಲು ಅನಿರುದ್ಧ್ಗೆ ಮಣೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ತಂಡದ ಕಡೆಯಿಂದ ಖಚಿತವಾಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಒಂದೊಮ್ಮೆ ಈ ಸುದ್ದಿ ನಿಜವೇ ಆದಲ್ಲಿ, ಇದು ಅನಿರುದ್ಧ್ ಅವರ ಮೊದಲ ಕನ್ನಡ ಸಿನಿಮಾ ಆಗಿರಲಿದೆ.
ಇದನ್ನೂ ಓದಿ: ‘ರಾಮಾಯಣ’ ಗ್ಲಿಂಪ್ಸ್, ಯಶ್ಗೆ ಭೇಷ್ ಎಂದ ನಟ್ಟಿಗರು, ರಣ್ಬೀರ್ ಬಗ್ಗೆ ಟೀಕೆ ಏಕೆ?
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ ಅಭಿನಯಿಸಿದ್ದಾರೆ. ಇನ್ನೂ ಹಲವು ಪಾತ್ರಗಳು ಗುಟ್ಟಾಗಿಯೇ ಇವೆ. ಹಾಲಿವುಡ್ ತಂತ್ರಜ್ಞರು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾ 2026ರ ಮಾರ್ಚ್ 19ರಂದು ತೆರೆಗೆ ಬರಲಿದೆ. ಕನ್ನಡದ ಜೊತೆ ಇಂಗ್ಲಿಷ್ನಲ್ಲೂ ಸಿನಿಮಾ ಶೂಟ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Mon, 7 July 25