ಬಾಲಿವುಡ್ಗೆ ಹೋಲಿಸಿದರೆ ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡೋದು ಸುಲಭ ಎಂದ ರಶ್ಮಿಕಾ ಮಂದಣ್ಣ
ದೀಪಿಕಾ ಪಡುಕೋಣೆ ಅವರು ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡುವ ಬಗ್ಗೆ ಹೇಳಿದ್ದರು.ಈ ಮಧ್ಯೆ ರಶ್ಮಿಕಾ ಮಂದಣ್ಣ ಅವರು ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್ ಚಿತ್ರರಂಗದ ಕೆಲಸದ ಸಮಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಸಮಯದ ಕೆಲಸವಿಲ್ಲ ಎಂದು ಅವರು ಹೇಳಿದ್ದಾರೆ. ಬಾಲಿವುಡ್‌ನಲ್ಲಿ 12 ಗಂಟೆಗಳ ಕೆಲಸದ ಸಮಯ ಇರುವುದರಿಂದ, ಚಿತ್ರೀಕರಣದ ಸಮಯದ ಬಗ್ಗೆ ಮೊದಲೇ ಚರ್ಚಿಸಿಕೊಳ್ಳುವುದು ಮುಖ್ಯ ಎಂದು ಅವರು ಸಲಹೆ ನೀಡಿದ್ದಾರೆ.

ದೀಪಿಕಾ ಪಡುಕೋಣೆ ಅವರು ಶೂಟಿಂಗ್ಗೆ ನಿರ್ದಿಷ್ಟ ಸಮಯ ನಿಗದಿ ಮಾಡಬೇಕು ಎಂದು ಕೋರಿದ್ದ ವಿಚಾರ ಸಾಕಷ್ಟು ಚರ್ಚೆಗೆ ಕಾರಣ ಆಯಿತು. ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡೋದಾಗಿ ಅವರು ಹೇಳಿದ್ದರು. ಇದರಿಂದ ಅವರಿಗೆ ಸಂದೀಪ್ ರೆಡ್ಡಿ ವಂಗ ಚಿತ್ರದ ಆಫರ್ ತಪ್ಪಿತು. ಈಗ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರು ಈ ಮೊದಲು ‘ಅನಿಮಲ್’ ಸಿನಿಮಾದಲ್ಲಿ ಸಂದೀಪ್ ಜೊತೆ ಕೆಲಸ ಮಾಡಿದ್ದರು. ಬಲಿವುಡ್ಗೆ ಹೋಲಿಸಿದರೆ ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡೋದು ಸುಲಭ ಎಂಬರ್ಥದಲ್ಲಿ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.
‘ನಾನು ಕನ್ನಡ, ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದೇನೆ. ಅದು ಆಫೀಸ್ ಕಚೇರಿ ಅವಧಿ ತರವೇ ಇರುತ್ತದೆ. ಬೆಳಿಗ್ಗೆ ಒಂಭತ್ತರಿಂದ ಸಂಜೆ ಆರು ಗಂಟೆವರೆಗೆ ಚಿತ್ರೀಕರಣೆ ಮಾಡಿದರೆ ಆಯಿತು. ಶೂಟ್ ಬಳಿಕ ಕುಟುಂಬದ ಜೊತೆ ಸಮಯ ಕಳೆಯಬಹುದು, ನಿದ್ದೆ ಮಾಡಬಹುದು. ಆದರೆ, ಹಿಂದಿಯಲ್ಲಿ ಹಾಗಲ್ಲ. ಅಲ್ಲಿ 12 ಗಂಟೆ ಶಿಫ್ಟ್. ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡಬೇಕು. ನನಗೆ ಎರಡೂ ಇಷ್ಟ. ಸಿನಿಮಾ ಯಾವುದನ್ನು ಕೇಳುತ್ತದೆಯೋ ಅದನ್ನು ಮಾಡುತ್ತೇನೆ’ ಎಂದಿದ್ದಾರೆ ಅವರು.
‘ಈ ಕೆಲಸದ ಅವಧಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದು ಅವರವರಿಗೆ ಬಿಟ್ಟ ವಿಚಾರ. ಪ್ರತಿ ಸಿನಿಮಾ ಆರಂಭಕ್ಕೂ ಮೊದಲು ಕಲಾವಿದರು ಈ ಬಗ್ಗೆ ತಂಡದ ಜೊತೆ ಮಾತನಾಡಬೇಕು. ಎಷ್ಟು ಗಂಟೆ ಶೂಟ್ ಇರುತ್ತದೆ, ಯಾವ ಸಂದರ್ಭದಲ್ಲಿ ಶೂಟ್ ಮಾಡಲಾಗುತ್ತದೆ ಎಂಬುದನ್ನು ಚರ್ಚಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.
‘ಕೆಲವೊಮ್ಮೆ ಬೆಳಿಗ್ಗೆ 9ಕ್ಕೆ ಶೂಟ್ ಶುರುವಾಗಿ 9ಕ್ಕೆ ಮುಗಿಯಬೇಕಿರುತ್ತದೆ. ಆದರೆ, ಮುಂದಿನ ದಿನದವರೆಗೂ ಅದು ಸಾಗುತ್ತದೆ. ಈ ಮೂಲಕ ಅದು 36 ಗಂಟೆ, 48 ಗಂಟೆ ನಿದ್ದೆ ಇಲ್ಲದೆ ಕೆಲಸ ಮಾಡಿದಂತಾಗುತ್ತದೆ. ಸಿನಿಮಾ ಶೂಟ್ನಲ್ಲಿ ಈ ರೀತಿ ಆಗೋದು ಕಾಮನ್’ ಎಂದಿದ್ದಾರೆ ರಶ್ಮಿಕಾ.
ಇದನ್ನೂ ಓದಿ: ಮತ್ತೊಂದು ತೆಲುಗು ಸಿನಿಮಾ ಅವಕಾಶ ಕಳೆದುಕೊಂಡರೇ ದೀಪಿಕಾ ಪಡುಕೋಣೆ
‘ಕೆಲಸ ಮಾಡುವ ವಿಚಾರದಲ್ಲಿ ಎಲ್ಲರಿಗೂ ವಿವಿಧ ಅಭಿಪ್ರಾಯಗಳಿವೆ. ಅದು ಸರಿಯಾಗಿದೆ. ನೀವು ಹೋಗಿ ನಿಮ್ಮ ನಿರ್ದೇಶಕರಿಗೆ, ಇದು ನಾನು ಕೆಲಸ ಮಾಡಲು ಬಯಸುವ ಸಮಯದ ಚೌಕಟ್ಟು. ನಾವು ಇದನ್ನು ಮಾಡಬಹುದೇ’ ಎಂದು ಕೇಳಿದ್ದು ನ್ಯಾಯ. ಇದು ಅವರಿಗೆ ಬಿಟ್ಟಿದ್ದು. ಆದರೆ, ಚಿತ್ರರಂಗದಲ್ಲಿ 2-3 ದಿನ ನಿದ್ದೆ ಇಲ್ಲದೆ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.