‘ಕೆಡಿ’ ಸಿನಿಮಾ ಟೀಸರ್ ಬಿಡುಗಡೆ ದಿನಾಂಕ ಘೋಷಣೆ
Dhruva Sarja: ಧ್ರುವ ಸರ್ಜಾ ನಟಿಸಿ ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’ ಸಿನಿಮಾ, ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾದ ನಿರ್ಮಾಣ ಮಾಡಲಾಗಿದ್ದು, ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಇದೀಗ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.

ನಟ ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಸಿನಿಮಾ ಸೆಟ್ಟೇರುವ ಮುನ್ನ, ಚಿತ್ರೀಕರಣದ ಸಮಯದಲ್ಲಿ ಸಖತ್ ಸದ್ದು ಮಾಡಿತ್ತು. ಆದರೆ ಕಳೆದ ಕೆಲ ವಾರಗಳಿಂದ ಸಿನಿಮಾದ ಬಗ್ಗೆ ಯಾವುದೇ ಅಪ್ಡೇಟ್ ಹೊರಬಿದ್ದಿಲ್ಲ. ಇದೀಗ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಎರಡು ಭಿನ್ನ ದಿನಾಂಕಗಳನ್ನು ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಎರಡು ಪ್ರತ್ಯೇಕ ನಗರಗಳಲ್ಲಿ ಹಮ್ಮಿಕೊಳ್ಳಲಾಗಿದೆ.
‘ಕೆಡಿ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾದ ಟೀಸರ್ ಜುಲೈ 10 ರಂದು ಮುಂಬೈನಲ್ಲಿ ಬಿಡುಗಡೆ ಆಗಲಿದೆ. ಮುಂಬೈನಲ್ಲಿ ಇದಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜನೆ ಮಾಡಿದೆ. ‘ಮುಂಬೈ ರೆಡ್ ಅಲರ್ಟ್’ ಹೆಸರಿನಲ್ಲಿ ಇದಕ್ಕಾಗಿ ವಿಶೇಷ ಪೋಸ್ಟರ್ಗಳನ್ನು ರೆಡಿ ಮಾಡಿ ಪ್ರಚಾರ ಮಾಡಿದೆ ಚಿತ್ರತಂಡ.
ಇನ್ನು ಜುಲೈ 12 ರಂದು ಬೆಂಗಳೂರಿನಲ್ಲಿ ‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿಶೇಷವಾಗಿ ಕನ್ನಡ ಟೀಸರ್ ಬಿಡುಗಡೆ ಆಗಲಿದೆ. ಧ್ರುವ ಸರ್ಜಾ ನಟನೆಯ ಈ ಹಿಂದಿನ ಸಿನಿಮಾ ‘ಮಾರ್ಟಿನ್’ ನಾನಾ ವಿವಾದಗಳ ಬಳಿಕ ಬಿಡುಗಡೆ ಆದರೂ ಹೆಚ್ಚಿನ ಕಮಾಲ್ ಅನ್ನೇನೂ ಮಾಡಲಿಲ್ಲ. ಇದೀಗ ಅವರ ನಿರೀಕ್ಷೆ ಎಲ್ಲ ‘ಕೆಡಿ’ ಸಿನಿಮಾದ ಮೇಲೆ ಇದೆ.
ಇದನ್ನೂ ಓದಿ:ಧ್ರುವ ಸರ್ಜಾ ರೀತಿ ಪೊಗರು ತೋರಿಸಿದ ಧನರಾಜ್ ಆಚಾರ್
‘ಕೆಡಿ’ ಸಿನಿಮಾವು ಬೆಂಗಳೂರಿನ ಅಂಡರ್ಲವರ್ಲ್ಡ್ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಧ್ರುವ ಸರ್ಜಾ ಎದುರು ವಿಲನ್ ಆಗಿ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ನಟಿಸಿದ್ದಾರೆ. ಸಿನಿಮಾನಲ್ಲಿ ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಇನ್ನೂ ಕೆಲವು ಪ್ರಮುಖ ನಟರು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಸಿನಿಮಾದ ವಿಶೇಷ ಹಾಡಿನಲ್ಲಿ ನೋರಾ ಫತೇಹಿ ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾದ ಮತ್ತೊಂದು ವಿಶೇಷ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಿರ್ದೇಶನ ಮಾಡಿರುವುದು ಪ್ರೇಮ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ