AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ ಹಿಡಿದ ವಾಟರ್ ಕ್ಯಾನ್ ಬಿಸ್ನೆಸ್ ಬಿಟ್ಟಿದ್ದ ರಿಷಬ್ ಶೆಟ್ಟಿ; ಇದಕ್ಕಿದೆ ಕಾರಣ

Rishab Shetty Birthday: ರಿಷಬ್ ಶೆಟ್ಟಿ ಅವರು ಯಶಸ್ವಿ ಉದ್ಯಮಿಗಳಾಗಿದ್ದರು. ಆದರೆ ಸಿನಿಮಾ ರಂಗದ ಬಗ್ಗೆ ಅವರ ಆಸಕ್ತಿಯು ಅವರನ್ನು ಈ ಕ್ಷೇತ್ರಕ್ಕೆ ತಂದಿತು. ಅವರು ನಿರ್ಮಾಣ ಮತ್ತು ವಾಟರ್ ಕ್ಯಾನ್ ವ್ಯವಹಾರಗಳಲ್ಲಿ ಯಶಸ್ಸನ್ನು ಕಂಡರು. ಆದರೆ ತಮ್ಮ ಸಿನಿಮಾ ಕನಸನ್ನು ಈಡೇರಿಸಲು ಅವುಗಳನ್ನು ತ್ಯಜಿಸಿದರು. 'ಕಾಂತಾರ' ಚಿತ್ರ ಅವರ ವೃತ್ತಿ ಜೀವನದಲ್ಲಿ ಮಹತ್ವದ ತಿರುವು ತಂದಿದೆ ಮತ್ತು ಅವರನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.

ಕೈ ಹಿಡಿದ ವಾಟರ್ ಕ್ಯಾನ್ ಬಿಸ್ನೆಸ್ ಬಿಟ್ಟಿದ್ದ ರಿಷಬ್ ಶೆಟ್ಟಿ; ಇದಕ್ಕಿದೆ ಕಾರಣ
ರಿಷಬ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jul 07, 2025 | 10:42 AM

Share

ರಿಷಬ್ ಶೆಟ್ಟಿ ಅವರು ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ‘ಕಾಂತಾರ’ ಚಿತ್ರವು (Kantara Movie) ಅವರನ್ನು ಹಾಗೂ ಅವರ ವೃತ್ತಿ ಜೀವನವನ್ನು ಬದಲಾಯಿಸಿದೆ. ಇಷ್ಟೆಲ್ಲ ಹೆಸರು ಮಾಡುವುದಕ್ಕೂ ಮೊದಲು ರಿಷಬ್ ಅವರು ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದರು. ಈಗ ಅವರು ಯಶಸ್ಸಿನ ತುದಿಯಲ್ಲಿ ಇದ್ದಾರೆ. ಅವರು ಹಲವು ಉದ್ಯಮಗಳನ್ನು ಕೂಡ ಮಾಡಿದ್ದರು. ಕೆಲವರು ಅವರಿಗೆ ಯಶಸ್ಸು ತಂದುಕೊಟ್ಟಿತು. ಆದರೂ ಅದನ್ನು ಅವರು ತ್ಯಜಿಸಿದ್ದರು. ಇದಕ್ಕೆ ಕಾರಣ ಸಿನಿಮಾ ರಂಗದ ಮೇಲಿರುವ ಒಲವು. ಇಂದು (ಜುಲೈ 7) ಜನ್ಮದಿನ. ಈ ವೇಳೆ ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳೋಣ.

ರಿಷಬ್ ಶೆಟ್ಟಿ ಅವರು ಬಣ್ಣದ ಲೋಕದಲ್ಲಿ ಮಿಂಚಬೇಕು ಎಂದು ಮೊದಲೇ ನಿರ್ಧರಿಸಿ ಆಗಿತ್ತು. ಆದರೆ, ಇದಕ್ಕೆ ಅವರಿಗೆ ನೇರವಾಗಿ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ, ಹಲವು ಸೈಡ್ ಬಿಸ್ನೆಸ್​ಗಳನ್ನು ರಿಷಬ್ ಮಾಡಿದ್ದರು. ಕನ್​ಸ್ಟ್ರಕ್ಷನ್ ಬಿಸ್ನೆಸ್, ವಾಟರ್ ಕ್ಯಾನ್ ಬಿಸ್ನೆಸ್ ಗಳನ್ನು ಮಾಡಿದ್ದರು. ಎರಡೂ ಉದ್ಯಮಗಳು ಅವರಿಗೆ ಯಶಸ್ಸು ಕೊಟ್ಟಿದ್ದವು.

ವಾಟರ್ ಬಿಸ್ನೆಸ್ ರಿಷಬ್ ಅವರಿಗೆ ಕೈ ಹಿಡಿದಿತ್ತು. ಆದರೆ, ಸಿನಿಮಾ ರಂಗಕ್ಕೆ ಹೋಗಬೇಕು ಎಂಬ ಹಠ, ಒಂದೊಮ್ಮೆ ಬಿಸ್ನೆಸ್​ನಲ್ಲಿ ಯಶಸ್ಸು ಸಿಕ್ಕರೆ ಅಲ್ಲಿಯೇ ಇದ್ದು ಬಿಡಬೇಕಾಗುತ್ತದೆ ಎಂಬ ಭಯಕ್ಕೆ ರಿಷಬ್ ಅವರು ಅದನ್ನು ಮಾರಿಯೇ ಬಿಟ್ಟರು. ಆ ಬಳಿಕ ಹಂತ ಹಂತವಾಗಿ ಯಶಸ್ಸು ಕಂಡರು.

ಇದನ್ನೂ ಓದಿ
Image
‘ನನಗೆ ಗಾಯತ್ರಿ ಮಂತ್ರ, ಹನುಮಾನ್ ಚಾಲೀಸ್ ಕೇಳೋದು ಇಷ್ಟ’; ಮುಸ್ಲಿಂ ನಟಿ
Image
‘ಬಂಧನ’ ಸಿನಿಮಾ ತಡೆಯಲು ಬ್ಲೇಡ್ ಹೊಡೆದು, ಖಾರದ ಪುಡಿ ಎರಚಿದ್ದರು
Image
‘ಟಾಕ್ಸಿಕ್’ ಚಿತ್ರದಿಂದ ರವಿ ಬಸ್ರೂರು ಔಟ್? ರಾಕ್​ಸ್ಟಾರ್​ಗೆ ಮಣೆ?  
Image
ಮತ್ತೊಂದು ‘ಅನಿಮಲ್’; ‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ರಕ್ಕಸ ಅವತಾರ

‘ಗೋಲ್ಡನ್ ಗ್ಯಾಂಗ್’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾಗ ‘ಮಿನರಲ್ ವಾಟರ್ ರೀತಿಯೇ ಕನ್​ಸ್ಟ್ರಕ್ಷನ್ ಬಿಸ್ನೆಸ್ ದುಡ್ಡು ಕೊಟ್ಟಿತ್ತು’ ಎಂದು ರಿಷಬ್ ಹೇಳಿದ್ದರು. ಆದರೆ, ರಿಷಬ್ ಶೆಟ್ಟಿ ಅವರು ಉದ್ಯಮದಲ್ಲಿ ಯಶಸ್ಸು ಕಂಡ ಹೊರತಾಗಿಯೂ ಇವೆಲ್ಲವನ್ನೂ ಬಿಟ್ಟು ಸಿನಿಮಾ ರಂಗಕ್ಕೆ ಬಂದರು. ಅವರು ಎಲ್ಲವನ್ನೂ ಮಾರಿ ನಟಿಸೋಕೆ, ನಿರ್ದೇಶಿಸೋಕೆ ಆರಂಭಿಸಿದರು.

ಇದನ್ನೂ ಓದಿ: ರಿಷಬ್ ಶೆಟ್ಟಿ ಜನ್ಮದಿನಕ್ಕೆ ‘ಕಾಂತಾರ: ಚಾಪ್ಟರ್ 1’ ಚಿತ್ರದ ಕಡೆಯಿಂದ ಬಿಗ್ ಅಪ್​ಡೇಟ್​

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಅವರ ಬರ್ತ್​ಡೇ ಪ್ರಯುಕ್ತ ಬಿಡುಗಡೆ ಕಂಡಿದೆ. ಈ ಚಿತ್ರವು ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ ಎಂಬದನ್ನು ತಂಡ ಖಚಿತಪಡಿಸಿದೆ. ಇದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. ಸಿನಿಮಾ ತಂಡದ ಸೆಟ್​ನಲ್ಲಿ ಹಲವು ಅವಘಡಗಳು ಸಂಭವಿಸಿದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!