ವಿಎಫ್ಎಕ್ಸ್ ಮಶಿನ್, 86 ಕ್ಯಾಮೆರಾಗಳ ಮಧ್ಯೆ ಶೂಟ್ ಮಾಡಿದ ಯಶ್
Ramayana Movie: ಇಂದಿರಾ ಕೃಷ್ಣ ಅವರು ರಾಮಾಯಣ ಚಿತ್ರದಲ್ಲಿ ಕೌಸಲ್ಯಾ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ 86 ಕ್ಯಾಮೆರಾಗಳು ಮತ್ತು ಅತ್ಯಾಧುನಿಕ ವಿಎಫ್ಎಕ್ಸ್ ತಂತ್ರಜ್ಞಾನ ಬಳಸಲಾಗಿದೆ. ಚಿತ್ರೀಕರಣದ ಅನುಭವವನ್ನು ಹಂಚಿಕೊಂಡ ಇಂದಿರಾ ಅವರು, ವಿಎಫ್ಎಕ್ಸ್ಗಾಗಿ ತಮ್ಮ ದೇಹದ ಅಳತೆ ತೆಗೆದುಕೊಳ್ಳಲಾಗಿದ್ದ ವಿಷಯವನ್ನು ತಿಳಿಸಿದ್ದಾರೆ.

ದಿನಗಳು ಕಳೆದಂತೆ ಸಿನಿಮಾ ನಿರ್ಮಾಣದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ. ಆಧುನಿಕ ಕ್ಯಾಮೆರಾಗಳ ಬಳಕೆ ಮೂಲಕ ಎಲ್ಲರನ್ನೂ ಬೆರಗು ಗೊಳಿಸಲಾಗುತ್ತಿದೆ. ಈಗ ಮುಂಬರುವ ‘ರಾಮಾಯಣ’ (Ramayana Movie) ಅಂಥದ್ದೇ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ನಿರ್ದೇಶಕ ನಿತೇಶ್ ತಿವಾರಿ ಅವರು ಶೂಟಿಂಗ್ಗೆ ಬರೋಬ್ಬರಿ 86 ಕ್ಯಾಮೆರಾಗಳನ್ನು ಬಳಕೆ ಮಾಡಿದ್ದಾರೆ. ಜೊತೆಗೆ ವಿಎಫ್ಎಕ್ಸ್ ಮಶಿನ್ಗಳನ್ನು ಕೂಡ ಇಟ್ಟಿದ್ದರು ಎಂದು ವರದಿ ಆಗಿದೆ.
ಇಂದಿರಾ ಕೃಷ್ಣ ಅವರು ‘ರಾಮಯಣ’ ಸಿನಿಮಾದಲ್ಲಿ ಕೌಸಲ್ಯಾ ಪಾತ್ರ ಮಾಡಿದ್ದಾರೆ. ರಾಮನ ತಾಯಿಯ ಪಾತ್ರ ಇದಾಗಿದ್ದು, ಅವರಿಗೆ ಈ ವಿಚಾರದಲ್ಲಿ ಖುಷಿ ಇದೆ. ಅವರು ಸಿನಿಮಾದ ಆಧುನಿಕತೆ ಬಗ್ಗೆ ಮಾತನಾಡಿದ್ದು ಎಲ್ಲರೂ ಅಚ್ಚರಿಗೊಂಡಿದ್ದಾರೆ. ನಿರ್ಮಾಣ ಸಂಸ್ಥೆ ಪ್ರೈಮ್ ಫೋಕಸ್ ಅವರ ದೂರದೃಷ್ಟಿಯನ್ನು ಇಂದಿರಾ ಕೃಷ್ಣ ಅವರು ಹೊಗಳಿದ್ದಾರೆ.
‘ನಾನು ಬಾಡಿ ಅಳತೆ ನೀಡಲು ತೆರಳಿದ್ದೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಇಂಟರ್ಸ್ಟೆಲ್ಲರ್’ ಸಿನಿಮಾದಲ್ಲಿ ಬಳಕೆ ಆದ ವಿಎಫ್ಎಕ್ಸ್ ಮಶಿನ್ ಇಲ್ಲಿಯೂ ಇರುತ್ತದೆ ಎಂದು ನಿರ್ದೇಶಕರು ಹೇಳಿದರು. ಅಲ್ಲದೆ, 86 ಕಡೆಗಳಲ್ಲಿ ಕ್ಯಾಮೆರಾಗಳನ್ನು ಇಡಲಾಗಿತ್ತು. ಒಮ್ಮೆಲೇ ಆ ಎಲ್ಲಾ ಕ್ಯಾಮೆರಾಗಳು ನನ್ನನ್ನು ಸೆರೆ ಹಿಡಿದವು. ಇದರಿಂದ ನಾನು ಶಾಕ್ ಆದೆ ಎಂದಿದ್ದಾರೆ’ ಅವರು.
‘ನನ್ನ ಬಾಡಿಯ ಅಳತೆಯನ್ನು ತೆಗೆದುಕೊಂಡಿದ್ದು ಅವರು ಕಾಸ್ಟ್ಯೂಮ್ ಡಿಸೈನ್ಗೆ ಮಾತ್ರ ಆಗಿರಲಿಲ್ಲ. ವಿಎಫ್ಎಕ್ಸ್ ಉದ್ದೇಶದಿಂದಲೂ ಆಗಿತ್ತು. ನನಗೆ ಇದನ್ನು ಕೇಳಿ ಶಾಕ್ ಆಯಿತು. ಕೌಸಲ್ಯ ಹೇಗೆ ಕೂರಬೇಕು, ಹೇಗೆ ನಿಲ್ಲಬೇಕು ಎಂಬುದನ್ನು ಮೊದಲೇ ಪ್ಲ್ಯಾನ್ ಮಾಡಿರಲಾಗುತ್ತದೆ. ಇಲ್ಲಿ ಡ್ರಾಮಾ ಡೈಲಾಗ್ಗೆ ಅವಕಾಶ ಇಲ್ಲ’ ಎಂದಿದ್ದಾರೆ ಅವರು.
ಇಂದಿರಾ ಕೃಷ್ಣನ್ ಅವರು ಈ ಮೊದಲು ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಚಿತ್ರದಲ್ಲಿ ನಟಿಸಿದ್ದರು. ರಶ್ಮಿಕಾ ಮಂದಣ್ಣ ಅವರ ತಾಯಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಈಗ ಅವರಿಗೆ ‘ರಾಮಾಯಣ’ ಸಿನಿಮಾ ಮಾಡುವ ಅವಕಾಶ ಸಿಕ್ಕಿದ್ದು, ಖುಷಿಯಾಗಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಫಸ್ಟ್ ಲುಕ್ ಪವರ್; ನಿರ್ಮಾಣ ಸಂಸ್ಥೆಗೆ ಸಾವಿರ ಕೋಟಿ ಲಾಭ
‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಅರುಣ್ ಗೋವಿಲ್ ದಶರಥನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 2026ರ ದೀಪಾವಳಿಗೆ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:33 am, Thu, 10 July 25








