ಉದಯಪುರ ಫೈಲ್ಸ್: ಸಿನಿಮಾ ನಿಷೇಧಕ್ಕೆ ಕೋರ್ಟ್ ನಿರಾಕರಣೆ
Udaipur Files: ‘ಉದಯಪುರ ಫೈಲ್ಸ್: ಕನ್ಹಯ್ಯಲಾಲ್ ಟೈಲರ್ ಮರ್ಡರ್’ ಸಿನಿಮಾ ಕನ್ಹಯ್ಯ ಲಾಲ್ ಕೊಲೆಯ ಕುರಿತಾದ ಕತೆ ಒಳಗೊಂಡಿದೆ. ಸಿನಿಮಾ ಜುಲೈ 11 ಕ್ಕೆ ಬಿಡುಗಡೆ ಆಗಲಿದೆ. ಆದರೆ ಸಿನಿಮಾ ಬಿಡುಗಡೆಗೆ ತಡೆ ನೀಡಬೇಕೆಂದು ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದೆಹಲಿ ಹೈಕೋರ್ಟ್ನಲ್ಲಿ ದಾಖಲಾಗಿದ್ದವು. ಸಿನಿಮಾ ಬಿಡುಗಡೆಗೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿದೆ.

ಇತ್ತೀಚೆಗೆ ಧಾರ್ಮಿಕ ಸೂಕ್ಷ್ಮ ಅಥವಾ ರಾಜಕೀಯ ಸೂಕ್ಷ್ಮ ವಿಷಯಗಳ ಬಗ್ಗೆ ಸಿನಿಮಾ ಮಾಡುವ ಟ್ರೆಂಡ್ ಹೆಚ್ಚಾಗಿದೆ. ‘ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಫೈಲ್ಸ್’, ‘ವ್ಯಾಕ್ಸಿನ್ ವಾರ್’, ‘ಆಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್’ ಈಗ ‘ಬಂಗಾಳ್ ಫೈಲ್ಸ್’ ಈ ರೀತಿಯ ಇನ್ನೂ ಹಲವಾರು ಸಿನಿಮಾಗಳು ಈಗಾಗಲೇ ನಿರ್ಮಾಣವಾಗಿ ಬಿಡುಗಡೆ ಆಗಿವೆ. ಈ ರೀತಿಯ ಸಿನಿಮಾಗಳು ಬಿಡುಗಡೆ ಆದಾಗಲೆಲ್ಲ ವಿವಾದಗಳು ಭುಗಿಲೇಳುವುದು ಖಾತ್ರಿ. ಇದೀಗ ಇದೇ ಮಾದರಿಯ ‘ಉದಯಪುರ ಫೈಲ್ಸ್’ ಹೆಸರಿನ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಕೆಲವರು ಸಿನಿಮಾ ನಿಷೇಧಕ್ಕೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಸಿನಿಮಾ ನಿಷೇಧಕ್ಕೆ ನ್ಯಾಯಾಲಯ ನಕಾರ ಹೇಳಿದೆ.
‘ಉದಯಪುರ ಫೈಲ್ಸ್: ಕನ್ಹಯ್ಯಲಾಲ್ ಟೈಲರ್ ಮರ್ಡರ್’ ಸಿನಿಮಾ ಕನ್ಹಯ್ಯ ಲಾಲ್ ಕೊಲೆಯ ಕುರಿತಾದ ಕತೆ ಒಳಗೊಂಡಿದೆ. ಸಿನಿಮಾ ಜುಲೈ 11 ಕ್ಕೆ ಬಿಡುಗಡೆ ಆಗಲಿದೆ. ಆದರೆ ಸಿನಿಮಾ ಬಿಡುಗಡೆಗೆ ತಡೆ ನೀಡಬೇಕೆಂದು ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದೆಹಲಿ ಹೈಕೋರ್ಟ್ನಲ್ಲಿ ದಾಖಲಾಗಿದ್ದವು. ವಿಚಾರಣೆ ನಡೆಸಿದ ನ್ಯಾಯಾಲಯವು ಸಿನಿಮಾ ಬಿಡುಗಡೆಗೆ ತಡೆ ನೀಡಲಾಗದು ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಸಿನಿಮಾ ಬಿಡುಗಡೆ ಆಗಲಿ, ಆ ನಂತರ ವಿಚಾರಣೆ ಮುಂದುವರೆಯಲಿ ಎಂದಿದೆ. ಸಿನಿಮಾ ನೋಡಿದ ಜನ ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ ಎಂದು ಸಹ ನ್ಯಾಯಾಲಯ ಹೇಳಿದೆ.
ಮಾತ್ರವಲ್ಲದೆ, ಸಿನಿಮಾ ನಿರ್ಮಾಪಕರಿಗೆ ಸೂಚನೆ ನೀಡಿರುವ ಹೈಕೋರ್ಟ್, ‘ಉದಯಪುರ ಫೈಲ್ಸ್’ ಸಿನಿಮಾವನ್ನು ವಿರೋಧಿಸುತ್ತಿರುವವರಿಗಾಗಿ ಆದಷ್ಟು ಬೇಗ ವಿಶೇಷ ಪ್ರದರ್ಶನ ಆಯೋಜಿಸಿ ಸಿನಿಮಾ ತೋರಿಸಿ ಎಂದು ಸಹ ಹೇಳಿದೆ. ಸುಪ್ರೀಂಕೋರ್ಟ್ನಲ್ಲಿ ಸಹ ಇದೇ ಸಿನಿಮಾ ವಿಷಯವಾಗಿ ವಿಚಾರಣೆ ನಡೆದಿದ್ದು, ಸಿನಿಮಾ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ:ಬಾಲಿವುಡ್ಗೆ ಹೋಲಿಸಿದರೆ ಸ್ಯಾಂಡಲ್ವುಡ್ನಲ್ಲಿ ಕೆಲಸ ಮಾಡೋದು ಸುಲಭ ಎಂದ ರಶ್ಮಿಕಾ ಮಂದಣ್ಣ
ಜಾಮಿಯತ್ ಉಲಾಮ ಇ ಹಿಂದ್ ನ ಅಧ್ಯಕ್ಷ ಮೌಲಾನಾ ಅರ್ಷದ್ ಮದಾನಿ ಸಿನಿಮಾ ನಿಷೇಧಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ಈ ಸಿನಿಮಾನಲ್ಲಿ ಮೊಹಮ್ಮದ್ ಪೈಗಂಬರರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದರು. ಆದರೆ ಆರೋಪವನ್ನು ತಳ್ಳಿ ಹಾಕಿರುವ ನ್ಯಾಯಾಲಯ, ಸಿಬಿಎಫ್ಸಿ ಎಲ್ಲವನ್ನೂ ಪರಿಶೀಲಿಸಿ ಸಿನಿಮಾ ಬಿಡುಗಡೆಗೆ ಅನುಮತಿ ನೀಡಿದೆ ಎಂದು ಹೇಳಿದೆ.
ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಟ್ರೈಲರ್ನಲ್ಲಿ ಧರ್ಮ, ಹಿಂದೂ-ಮುಸ್ಲಿಂ, ಮಂದಿರ-ಮಸೀದಿ ಕುರಿತಾದ ಹಲವಾರು ಸಂಭಾಷಣೆಗಳಿವೆ. ಟ್ರೈಲರ್ನಲ್ಲಿ ಬಿಜೆಪಿಯ ಮಾಜಿ ಮುಖಂಡ ನೂಪುರ್ ಶರ್ಮಾ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಸಹ ಬಳಸಿಕೊಳ್ಳಲಾಗಿದೆ. ಸಿನಿಮಾ ಬಿಡುಗಡೆಗೆ ವಿರೋಧಿಸಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ‘ಸಿನಿಮಾದ ಒಟ್ಟು ಉದ್ದೇಶವೇ ಹಿಂಸೆಗೆ ಉತ್ತೇಜನ ನೀಡುವುದಾಗಿದೆ, ಅದು ಅವರು ಬಿಡುಗಡೆ ಮಾಡಿರುವ ಟ್ರೈಲರ್ನಲ್ಲೂ ಗೊತ್ತಾಗುತ್ತಿದೆ’ ಎಂದಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




