ಮಲಯಾಳಂ ನಿರ್ದೇಶಕನ ವಿರುದ್ಧ ನಟಿಯಿಂದ ಅತ್ಯಾಚಾರ ಪ್ರಕರಣ ದಾಖಲು

|

Updated on: May 29, 2024 | 5:40 PM

ಪ್ರಿಯಾ ಪ್ರಕಾಶ್ ವಾರಿಯರ್ ಅನ್ನು ಸ್ಟಾರ್ ಅನ್ನಾಗಿ ಮಾಡಿದ ‘ಒರು ಅಡಾರ್ ಲವ್’ ಸಿನಿಮಾ ನಿರ್ದೇಶಕ ಓಮರ್ ಲುಲು ವಿರುದ್ಧ ಯುವನಟಿಯೊಬ್ಬರು ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಆರೋಪಗಳಿಗೆ ಪ್ರತಿಕ್ರಿಯೆಯನ್ನು ನಿರ್ದೇಶಕ ನೀಡಿದ್ದಾರೆ.

ಮಲಯಾಳಂ ನಿರ್ದೇಶಕನ ವಿರುದ್ಧ ನಟಿಯಿಂದ ಅತ್ಯಾಚಾರ ಪ್ರಕರಣ ದಾಖಲು
Follow us on

ಒರು ಅಡಾರ್ ಲವ್’ (Oru Adar Love) ಸೇರಿದಂತೆ ಇನ್ನೂ ಕೆಲವು ಹಿಟ್ ಸಿನಿಮಾಗಳನ್ನು ನೀಡಿರುವ ಮಲಯಾಳಂ ನಿರ್ದೇಶಕ ಒಮರ್ ಲುಲು ವಿರುದ್ಧ ನಟಿಯೊಬ್ಬರು ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಎರ್ನಾಕುಲಂ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುವನಟಿ, ನಿರ್ದೇಶಕ ಒಮರ್ ವಿರುದ್ಧ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ. ಪ್ರಕರಣವನ್ನು ಇದೀಗ ನಿಡುಂಬಸ್ಸೇರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ನಿರ್ದೇಶಕ ಒಮರ್ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಜಾರಿಯಲ್ಲಿದೆ.

ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ನನ್ನ ವಿರುದ್ಧ ಹಲವು ಬಾರಿ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಮಾಡಲಾಗಿದೆ ಎಂದು ಯುವನಟಿ ನಿರ್ದೇಶಕ ಒಮರ್ ವಿರುದ್ಧ ಆರೋಪ ಮಾಡಿದ್ದಾರೆ. ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ನಿರ್ದೇಶಕ ಒಮರ್ ಲುಲು, ‘ಇದು ಬ್ಲಾಕ್ ಮೇಲ್ ಮಾಡುವ ತಂತ್ರವಷ್ಟೆ. ಆರೋಪ ಮಾಡಿ ನನ್ನ ಘನತೆ ಹಾಳು ಮಾಡುವ ಹಾಗೂ ನನ್ನಿಂದ ಹಣ ವಸೂಲಿ ಮಾಡುವುದು ಆ ನಟಿಯ ಉದ್ದೇಶ. ನನ್ನ ಈ ಹಿಂದಿನ ಸಿನಿಮಾದಲ್ಲಿ ಆ ನಟಿ ನಟಿಸಿದ್ದರು. ಈಗ ನಾನು ಹೊಸ ಸಿನಿಮಾ ಮಾಡುತ್ತಿದ್ದೇನೆ ಅದರ ಬೆನ್ನಲ್ಲೆ ಆ ನಟಿ ದೂರು ನೀಡಿದ್ದಾಳೆ. ಆಕೆಗೆ ನನ್ನ ಹೊಸ ಸಿನಿಮಾದಲ್ಲಿ ಅವಕಾಶ ಕೊಟ್ಟಿಲ್ಲವೆಂಬ ಕೋಪಕ್ಕೆ ಹೀಗೆ ಮಾಡಿದ್ದಾಳೆ’ ಎಂದಿದ್ದಾರೆ ನಿರ್ದೇಶಕ ಒಮರ್.

ಇದನ್ನೂ ಓದಿ:ಮಲಯಾಳಂ ಸೂಪರ್ ಸ್ಟಾರ್​ ಮೋಹನ್​ಲಾಲ್​ಗೆ ಟಾಸ್ಕ್ ಕೊಟ್ಟ ಕಮಲ್ ಹಾಸನ್

ಮನೋರಮಾಗೆ ನೀಡಿರುವ ಹೇಳಿಕೆಯಂತೆ, ‘ಆ ಯುವನಟಿ ಹಾಗೂ ನಾನು ಒಳ್ಳೆಯ ಗೆಳೆಯರಾಗಿದ್ದೆವು. ಕೆಲವು ಪ್ರವಾಸಗಳಿಗಳಿಗೂ ಒಟ್ಟಿಗೆ ಹೋಗಿದ್ದೆವು. ಆದರೆ ಇಬ್ಬರ ನಡುವೆ ಮನಸ್ಥಾಪ ಉಂಟಾಗಿ ಕಳೆದ ಆರು ತಿಂಗಳಿನಿಂದಲೂ ಒಬ್ಬರಿಗೊಬ್ಬರು ಸಂಪರ್ಕದಲ್ಲಿಲ್ಲ. ಈಗ ನಾನು ಹೊಸ ಸಿನಿಮಾ ಪ್ರಾರಂಭ ಮಾಡಿದ್ದೇನೆ. ಆ ನಟಿಗೆ ನನ್ನ ಸಿನಿಮಾದಲ್ಲಿ ಅವಕಾಶ ಕೊಟ್ಟಿಲ್ಲವಾದ್ದರಿಂದ ಈಗ ಈ ದೂರು ದಾಖಲಿಸಿದ್ದಾಳೆ ಎಂದಿದ್ದಾರೆ.

ನಿರ್ದೇಶಕ ಓಮರ್ ಲುಲು, ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿದ್ದ ‘ಒರು ಅಡಾರ್ ಲವ್’ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾದ ಪ್ರಿಯಾ ಪ್ರಕಾಶ್ ವಾರಿಯರ್​ರ ಒಂದು ದೃಶ್ಯ ಭಾರಿ ವೈರಲ್ ಆಗಿ, ಪ್ರಿಯಾ ರಾತ್ರೋ ರಾತ್ರಿ ಸ್ಟಾರ್ ಆಗಿದ್ದರು. ಆ ಸಿನಿಮಾದ ಬಳಿಕ ‘ಧಮಾಕಾ’ ಹೆಸರಿನ ಸಿನಿಮಾ ಮಾಡಿದ್ದರು. ಅದಾದ ಬಳಿಕ ‘ನಲ್ಲ ಸಮಯಂ’ ಹೆಸರಿನ ಸಿನಿಮಾ ಮಾಡಿದ್ದರು. ಈ ಸಿನಿಮಾನಲ್ಲಿ ಈಗ ದೂರು ನೀಡಿರುವ ನಟಿ ಸಹ ನಟಿಸಿದ್ದರು ಎನ್ನಲಾಗುತ್ತಿದೆ. ‘ನಲ್ಲ ಸಮಯಂ’ ಸಿನಿಮಾನಲ್ಲಿ ಡ್ರಗ್ಸ್ ಬಳಕೆ ಹಾಗೂ ಮದ್ಯ ಸೇವನೆಯನ್ನು ಗ್ಲೋರಿಫೈ ಮಾಡಿದ್ದಾರೆಂಬ ಆರೋಪ ನಿರ್ದೇಶಕರ ಮೇಲೆ ಕೇಳಿ ಬಂದಿತ್ತು. ಇತ್ತೀಚೆಗೆ ‘ಪವರ್ ಸ್ಟಾರ್’ ಸಿನಿಮಾ ಮಾಡುವುದಾಗಿ ಓಮರ್ ಘೋಷಣೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ