ಒಂದೆಡೆ ರಶ್ಮಿಕಾ ಮಂದಣ್ಣ (Rashmika Mandanna) ಅವರು ಯಶಸ್ಸಿನ ಉತ್ತುಂಗಕ್ಕೆ ಏರುತ್ತಿದ್ದಾರೆ. ಇನ್ನೊಂದೆಡೆ ಅವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಒಂದಷ್ಟು ತಿಂಗಳ ಹಿಂದೆ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ (Deepfake) ವಿಡಿಯೋ ಮಾಡಲಾಗಿತ್ತು. ಆ ಮೂಲಕ ಅವರ ಹೆಸರಿಗೆ ಮಸಿ ಬಳಿಯುವ ಯತ್ನ ನಡೆದಿತ್ತು. ಈಗ ಮತ್ತೆ ಅವರ ಡೀಪ್ಫೇಕ್ ವಿಡಿಯೋ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಅವರು ಕೆಂಪು ಬಣ್ಣದ ಬಿಕಿನಿ ಧರಿಸಿ ಜಲಪಾತದ ಎದುರು ಹಾಟ್ ಆಗಿ ಕಾಣಿಸಿಕೊಂಡ ರೀತಿಯಲ್ಲಿ ಡೀಪ್ಫೇಕ್ (Rashmika Mandanna Deepfake Video) ಮಾಡಲಾಗಿದೆ. ಇದನ್ನು ನೋಡಿ ಅವರ ಫ್ಯಾನ್ಸ್ ಗರಂ ಆಗಿದ್ದಾರೆ.
ಸೋಶಿಯಲ್ ಮೀಡಿಯಾ ಜಮಾನಾ ಇದು. ಕ್ಷಣಾರ್ಧದಲ್ಲಿ ಎಲ್ಲವೂ ವೈರಲ್ ಆಗುತ್ತವೆ. ಗಾಳಿಸುದ್ದಿಗಳು ಬಹಳ ಬೇಗ ಹರಡುತ್ತವೆ. ಫೇಕ್ ನ್ಯೂಸ್ಗಳು, ನಕಲಿ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತವೆ. ಅವುಗಳ ಸತ್ಯಾಸತ್ಯತೆ ತಿಳಿಯುವುದಕ್ಕೂ ಮುನ್ನವೇ ಜನರು ಒಂದು ನಿರ್ಧಾರಕ್ಕೆ ಬಂದಿರುತ್ತಾರೆ. ಕಮೆಂಟ್ ಮೂಲಕ ಟ್ರೋಲ್ ಮಾಡಲು ಆರಂಭಿಸುತ್ತಾರೆ. ಇದರಿಂದ ನಟಿಯರಿಗೆ ತೊಂದರೆ ಆಗುತ್ತಿದೆ.
ಇದನ್ನೂ ಓದಿ: ಡೀಪ್ಫೇಕ್ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ಧ್ವನಿ ಎತ್ತಿದ್ದೇಕೆ? ನಟಿಯೇ ಕೊಟ್ಟರು ಉತ್ತರ
ಬಿಕಿನಿ ಧರಿಸಿದ ರೂಪದರ್ಶಿಯೊಬ್ಬರು ಜಲಪಾತದ ಎದುರು ನಿಂತು ಹಾಟ್ ಆಗಿ ವಿಡಿಯೋ ಮಾಡಿದ್ದಾರೆ. ಆ ವಿಡಿಯೋಗೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಮಾರ್ಫ್ ಮಾಡಿ ಹರಿಬಿಡಲಾಗಿದೆ. ಇದು ಡೀಪ್ಫೇಕ್ ಹೌದೋ ಅಲ್ಲವೋ ಎಂಬುದು ಪರಿಶೀಲಿಸುವುದಕ್ಕೂ ಮುನ್ನವೇ ಈ ವಿಡಿಯೋ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಇಂಥ ವಿಡಿಯೋಗಳನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ.
ಈ ಮೊದಲು ಡೀಪ್ಫೇಕ್ ಸಮಸ್ಯೆ ಎದುರಾದಾಗ ರಶ್ಮಿಕಾ ಮಂದಣ್ಣ ಅವರು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರಕರಣ ಕೂಡ ದಾಖಲಾಗಿತ್ತು. ಇಂಥ ಕೃತ್ಯ ಎಸಗಿದ ಕಿಡಿಗೇಡಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಆ ಮೂಲಕ ಎಚ್ಚರಿಕೆ ಸಂದೇಶ ನೀಡಲಾಗಿತ್ತು. ಹಾಗಿದ್ದರೂ ಕೂಡ ಕಿಡಿಗೇಡಿಗಳು ಡೀಪ್ಫೇಕ್ ಮಾಡುವುದನ್ನು ನಿಲ್ಲಿಸಿಲ್ಲ. ಈಗ ಮತ್ತೆ ಈ ಕೃತ್ಯ ಮಾಡಿದರು ಯಾರು ಎಂಬುದನ್ನು ಪತ್ತೆಹಚ್ಚಬೇಕಿದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ರಶ್ಮಿಕಾ ಮಂದಣ್ಣ ಅವರಿಗೆ ಈಗ ಕೈ ತುಂಬ ಆಫರ್ಗಳಿವೆ. ‘ಅನಿಮಲ್’ ಸಿನಿಮಾ ಸೂಪರ್ ಹಿಟ್ ಆದ ನಂತರ ಅವರ ಡಿಮ್ಯಾಂಡ್ ಹೆಚ್ಚಾಗಿದೆ. ‘ಪುಷ್ಪ 2’ ಸಿನಿಮಾ ಆಗಸ್ಟ್ 15ರಂದು ತೆರೆಕಾಣಲಿದೆ. ಆ ಚಿತ್ರದಲ್ಲಿ ಅವರು ಅಲ್ಲು ಅರ್ಜುನ್ ಜೊತೆ ನಟಿಸಿದ್ದಾರೆ. ‘ಸಿಕಂದರ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.