ಸಿನಿಮಾದಲ್ಲಿ ಬೋಲ್ಡ್ ದೃಶ್ಯದಲ್ಲಿ ನಟಿಸಿ ಗಮನ ಸೆಳೆದ ದಕ್ಷಿಣದ ನಟಿಯರಿವರು..  

ಕೆಲವು ನಟಿಯರು ಬೋಲ್ಡ್ ಅವತಾರ ತಾಳಿದವರಿದ್ದಾರೆ. ನಟಿ ಸಮಂತಾ, ತಮನ್ನಾ ಭಾಟಿಯಾ ಸೇರಿದಂತೆ ಅನೇಕರು ಈ ಸಾಲಿನಲ್ಲಿದ್ದಾರೆ. ಈ ರೀತಿ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಳ್ಳೋಕೆ ಕೆಲವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಸಿನಿಮಾದಲ್ಲಿ ಬೋಲ್ಡ್ ದೃಶ್ಯದಲ್ಲಿ ನಟಿಸಿ ಗಮನ ಸೆಳೆದ ದಕ್ಷಿಣದ ನಟಿಯರಿವರು..  
ರಶ್ಮಿಕಾ-ನಯನತಾರಾ-ಅನುಷ್ಕಾ-ಪ್ರಿಯಾಮಣಿ
Edited By:

Updated on: Sep 06, 2023 | 8:24 AM

ಬಾಲಿವುಡ್​ಗೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಡಿವಂತಿಕೆ ಹೆಚ್ಚಿದೆ. ಇಲ್ಲಿನ ನಟಿಯರು ಹಾಟ್ ಅವತಾರ ತಾಳೋಕೆ ಹಿಂದೇಟು ಹಾಕುತ್ತಾರೆ. ಬಿಕಿನಿ ಧರಿಸಿ ಮಿಂಚೋಕೆ ನೋ ಎನ್ನುತ್ತಾರೆ. ಇದರ ಮಧ್ಯೆಯೂ ಕೆಲವರು ಬೋಲ್ಡ್ ಅವತಾರ ತಾಳಿದವರಿದ್ದಾರೆ. ನಟಿ ಸಮಂತಾ (Samantha Ruth Prabhu), ತಮನ್ನಾ ಭಾಟಿಯಾ ಸೇರಿದಂತೆ ಅನೇಕರು ಈ ಸಾಲಿನಲ್ಲಿದ್ದಾರೆ. ಈ ರೀತಿ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಳ್ಳೋಕೆ ಕೆಲವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಶ್ರಿಯಾ ಶರಣ್

ಶ್ರಿಯಾ ಶರಣ್ ಕನ್ನಡದ ಪ್ರೇಕ್ಷಕರಿಗೂ ಚಿರಪರಿಚಿತರು. ಇತ್ತೀಚೆಗೆ ರಿಲೀಸ್ ಆದ ‘ಕಬ್ಜ’ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಅವರು ಮಿಂಚಿದ್ದರು. ಶ್ರಿಯಾ ಅವರು ಬೋಲ್ಡ್ ಅವತಾರ ತಾಳಿದ್ದರು. ಅವರು ಹಿಂದಿ ಚಿತ್ರವೊಂದರಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿ ನಟಿಸಿದ್ದರು.

ಶ್ರುತಿ ಹಾಸನ್

ನಟಿ ಶ್ರುತಿ ಹಾಸನ್ ಅವರು ‘ಸಲಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸೋಕೆ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಬೋಲ್ಡ್ ದೃಶ್ಯಗಳಲ್ಲಿ ನಟಿಸೋಕೆ ಶ್ರುತಿ ಹಾಸನ್​ಗೆ ಯಾವುದೇ ಹಿಂಜರಿಕೆ ಇಲ್ಲ. ‘ಡಿ ಡೇ’ ಸಿನಿಮಾದಲ್ಲಿ ಶ್ರುತಿ ಹಾಸನ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ನಟನೆಗೆ ಅವರಿಗೆ ಐಫಾ ಅವಾರ್ಡ್ ಕೂಡ ಸಿಕ್ಕಿತ್ತು. ಧನುಷ್ ನಟನೆಯ ‘3’ ಸಿನಿಮಾದಲ್ಲಿನ ಅವರ ನಟನೆಯೂ ಗಮನ ಸೆಳೆದಿತ್ತು.

ಮಾಳವಿಕಾ ಮೋಹನನ್

ಮಾಳವಿಕಾ ಮೋಹನನ್ ಅವರು ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಅವರು ಕೆಲವು ಸಿನಿಮಾಗಳಲ್ಲಿ ಬೋಲ್ಡ್ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ.

ಸಮಂತಾ ರುತ್ ಪ್ರಭು

ನಟಿ ಸಮಂತಾ ರುಥ್ ಪ್ರಭು ಅವರು ಬೋಲ್ಡ್ ಸಿನಿಮಾ ಮೂಲಕ ಸುದ್ದಿ ಆಗಿದ್ದು ಕಡಿಮೆ. ಆದರೆ, ಅವರ ನಟನೆಯ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್​ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಕಾರಣದಿಂದಲೇ ನಾಗ ಚೈತನ್ಯ ಹಾಗೂ ಸಮಂತಾ ಮಧ್ಯೆ ವಿಚ್ಛೇದನ ಉಂಟಾಯಿತು ಎನ್ನುವ ಮಾತು ಕೂಡ ಇದೆ. ಆದರೆ, ಇದನ್ನು ಯಾರೂ ಅಧಿಕೃತ ಮಾಡಿಲ್ಲ. ‘ಪುಷ್ಪ 2’ ಚಿತ್ರದ ‘ಊ ಅಂಟಾವ ಮಾವ..’ ಹಾಡಿನಲ್ಲಿ ಭರ್ಜರಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

ನಯನತಾರಾ

ನಯನತಾರಾ ಈಗ ಕುಟುಂಬದ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ನಯನತಾರಾ ‘ವಲ್ಲವನ್’ ಸಿನಿಮಾದಲ್ಲಿ ಸಿಂಬು ಜೊತೆ ನಟಿಸಿದ್ದರು. ಈ ಚಿತ್ರದಲ್ಲಿ ಅವರು ಬೋಲ್ಡ್ ಪಾತ್ರ ಮಾಡಿ ಗಮನ ಸೆಳೆದರು.

ಅನುಷ್ಕಾ ಶೆಟ್ಟಿ

ನಟಿ ಅನುಷ್ಕಾ ಶೆಟ್ಟಿ ‘ಬಾಹುಬಲಿ 2’ ಚಿತ್ರದಿಂದ ಖ್ಯಾತಿ ಹೆಚ್ಚಿಸಿಕೊಂಡರು. ಇವರಿಗೆ ಈಗಲೂ ಬೇಡಿಕೆ ಇದೆ. ಆದರೆ, ಮೊದಲಿನಷ್ಟು ಸಿನಿಮಾ ಮಾಡುತ್ತಿಲ್ಲ. ಇವರು ರವಿ ತೇಜಾ ಜೊತೆ ‘ವಿಕ್ರಮಾರ್ಕುಡು’  ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಇಬ್ಬರ ಇಂಟಿಮೇಟ್ ದೃಶ್ಯ ಗಮನ ಸೆಳೆದಿತ್ತು.

ಪ್ರಿಯಾಮಣಿ

ನಟಿ ಪ್ರಿಯಾಮಣಿ ಅವರು ದಕ್ಷಿಣ ಭಾರತ ಹಾಗೂ ಬಾಲಿವುಡ್​ನಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಹಲವು ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕಿ ಅವರು ಗಮನ ಸೆಳೆದಿದ್ದಾರೆ. ಅವರು ಕನ್ನಡ ಚಿತ್ರಗಳಲ್ಲೂ ನಟಿಸಿದ್ದರು. ಅವರು ‘ದಿ ಫ್ಯಾಮಿಲಿ ಮ್ಯಾನ್’ ವೆಬ್​ ಸೀರಿಸ್ ನಟನೆಗೆ ಸುದ್ದಿ ಆದರು.

ತಮನ್ನಾ ಭಾಟಿ

ನಟಿ ತಮನ್ನಾ ಭಾಟಿಯಾ ಅವರು ಕಳೆದ ಕೆಲ ವರ್ಷಗಳಿಂದ ನೋ ಕಿಸ್ ಪಾಲಿಸಿಯನ್ನು ಪಾಲಿಸಿಕೊಂಡು ಬರುತ್ತಿದ್ದರು. ಆದರೆ, ಅವರು ಇತ್ತೀಚೆಗೆ ಬೋಲ್ಡ್ ಅವತಾರ ತಾಳಿದರು. ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಂಡರು ತಮನ್ನಾ. ವಿಜಯ್ ವರ್ಮಾ ಜೊತೆ ಲಿಪ್ ಲಾಕ್ ಕೂಡ ಮಾಡಿದರು. ಈಗ ಇವರ ಮಧ್ಯೆ ಪ್ರೀತಿ ಮೂಡಿದೆ. ಇವರು ಹಾಯಾಗಿ ಸುತ್ತಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನ ಈ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದ ದಕ್ಷಿಣ ಭಾರತದ ಸ್ಟಾರ್​ ಕಲಾವಿದರಿವರು

ರಚಿತಾ ರಾಮ್

ನಟಿ ರಚಿತಾ ರಾಮ್ ಅವರು ಕನ್ನಡದ ಬೇಡಿಕೆಯೆ ನಟಿ. ಅವರು ‘ಐ ಲವ್​ ಯೂ’ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ದೃಶ್ಯ ಸಾಕಷ್ಟು ವೈರಲ್ ಆಗಿತ್ತು. ಸಿನಿಮಾದಲ್ಲಿ ಅಗತ್ಯ ಇರುವ ಕಾರಣದಿಂದ ತಾವು ಈ ಪಾತ್ರ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದರು.

ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. ಅವರು ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

 

Published On - 8:18 am, Wed, 6 September 23