
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (Vijay Devarakonda) ಪ್ರೀತಿಯಲ್ಲಿ ಇದ್ದಾರೆ ಎಂಬ ಅನುಮಾನ ಅಭಿಮಾನಿಗಳಿಗೆ ಮೊದಲಿನಿಂದಲೂ ಇದೆ. ಈ ವಿಚಾರವನ್ನು ಅವರು ಖಚಿತಪಡಿಸಿಲ್ಲ. ಆದರೆ, ಅವರ ಸುತ್ತಾಟದಿಂದ ಈ ವಿಚಾರ ಅಭಿಮಾನಿಗಳಿಗೆ ಸ್ಪಷ್ಟವಾಗುತ್ತಿದೆ. ಈಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಂದೇ ಕಾರಲ್ಲಿ ಸುತ್ತಾಟ ನಡೆಸಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ‘ಕುಬೇರ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಜೂನ್ 20ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಪ್ರಚಾರದಲ್ಲಿ ಇಡೀ ತಂಡ ಬ್ಯುಸಿ ಇದೆ. ಇದರ ಭಾಗವಾಗಿ ರಶ್ಮಿಕಾ ಅವರು ಮುಂಬೈಗೆ ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ವಿಜಯ್ ಕೂಡ ಅಲ್ಲಿಯೇ ಇದ್ದರು. ಇಬ್ಬರೂ ವಿಮಾನ ನಿಲ್ದಾಣದಿಂದ ಹೊರ ಬಂದು ಕಾರಿನಲ್ಲಿ ಒಟ್ಟಾಗಿ ತೆರಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವೇಳೆ ಇಬ್ಬರೂ ಮುಖವನ್ನು ಮುಚ್ಚಿಕೊಂಡಿದ್ದರು.
ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸದ್ಯ ತಮ್ಮದೇ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇವರು ಈವರೆಗೆ ಪ್ರೀತಿ ವಿಚಾರವನ್ನು ಒಪ್ಪಿಕೊಂಡಿಲ್ಲ. ಇವರು ಮುಂದೊಂದು ದಿನ ನಿಶ್ಚಿತಾರ್ಥ ಘೋಷಣೆ ಮಾಡಿದರೂ ಅಚ್ಚರಿ ಏನಿಲ್ಲ ಎಂಬುದು ಅನೇಕರ ಅಭಿಪ್ರಾಯ.
ರಶ್ಮಿಕಾ ಹಾಗೂ ವಿಜಯ್ ಅನೇಕ ಕಡೆಗಳಲ್ಲಿ ಒಟ್ಟಾಗಿ ಸುತ್ತಾಟ ನಡೆಸುತ್ತಾರೆ. ಆದರೆ, ಇವರು ಒಟ್ಟಿಗೆ ಇರೋ ಫೋಟೋನ ಪೋಸ್ಟ್ ಮಾಡಿಲ್ಲ. ಆದರೆ, ವೆಕೇಶನ್ ವೇಳೆ ತೆಗೆದುಕೊಂಡ ಫೋಟೋ ಪೋಸ್ಟ್ ಮಾಡುವಾಗ ಹಿಂದಿರೋ ಬ್ಯಾಕ್ಗ್ರೌಂಡ್ ಮೂಲಕ ಇಬ್ಬರೂ ಒಟ್ಟಿಗೆ ಇದ್ದ ವಿಚಾರ ಗೊತ್ತಾಗುತ್ತದೆ.
ಇದನ್ನೂ ಓದಿ: ಸಲ್ಮಾನ್-ರಶ್ಮಿಕಾ ಸಿನಿಮಾದಿಂದ 91 ಕೋಟಿ ನಷ್ಟ, ತನಿಖೆಯಿಂದ ಗೊತ್ತಾಯ್ತು ಹಲವು ವಿಷಯ
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಈವೆಂಟ್ ಒಂದರಲ್ಲಿ ಭಾಗಿ ಆಗಿದ್ದರು. ಅವರಿಗೆ ವಿಜಯ್ ಅವರಲ್ಲಿ ಯಾವ ವಿಷಯ ಇಷ್ಟ ಎಂದು ಕೇಳಿದಾಗ ‘ಎಲ್ಲಾ ವಿಚಾರಗಳೂ ಇಷ್ಟ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಸದ್ಯ ರಶ್ಮಿಕಾಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಹೀಗಾಗಿ, ಅವರು ಸದ್ಯಕ್ಕಂತೂ ವಿವಾಹ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ. ‘ಕುಬೇರ’ ಜೂನ್ 20ಕ್ಕೆ ರಿಲೀಸ್ ಆಗುತ್ತಿದೆ. ಇದು ತಮಿಳು ಸಿನಿಮಾ. ಈ ಚಿತ್ರಕ್ಕೆ ಧನುಷ್ ಹೀರೋ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.