AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಾ ಎಷ್ಟು ಅದ್ದೂರಿಯಾಗಿರುತ್ತೆ ನೋಡಿ ರಶ್ಮಿಕಾ ಮದುವೆ; ಸಿದ್ಧತೆಯ ವಿಡಿಯೋ ಲೀಕ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ರಹಸ್ಯ ವಿವಾಹ ಉದಯಪುರದಲ್ಲಿ ನಡೆಯಲಿದೆ. ಈ ಮದುವೆಯ ಸಿದ್ಧತೆಗಳ ವಿಡಿಯೋ ಲೀಕ್ ಆಗಿದ್ದು, ಅದ್ದೂರಿ ಸಿದ್ಧತೆಗಳು ಬಹಿರಂಗವಾಗಿವೆ. ಇವರಿಬ್ಬರ ಪ್ರೀತಿ 'ಗೀತ ಗೋವಿಂದಂ' ಸೆಟ್‌ನಲ್ಲಿ ಶುರುವಾಗಿತ್ತು. ಖಾಸಗಿಯಾಗಿ ನಡೆಯುತ್ತಿರುವ ಈ ವಿವಾಹದ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ರಶ್ಮಿಕಾ ಅವರ ಕನಸಿನ ಮದುವೆಗೆ ತೆರೆಮರೆಯಲ್ಲಿ ದೊಡ್ಡ ಸಿದ್ಧತೆ ನಡೆದಿದೆ.

ಅಬ್ಬಾ ಎಷ್ಟು ಅದ್ದೂರಿಯಾಗಿರುತ್ತೆ ನೋಡಿ ರಶ್ಮಿಕಾ ಮದುವೆ; ಸಿದ್ಧತೆಯ ವಿಡಿಯೋ ಲೀಕ್
ರಶ್ಮಿಕಾ-ವಿಜಯ್ Image Credit source: Instagram
ರಾಜೇಶ್ ದುಗ್ಗುಮನೆ
|

Updated on: Feb 02, 2026 | 10:05 AM

Share

ರಶ್ಮಿಕಾ ಮಂದಣ್ಣ (Rashmika Mandanna) ಅವರು ವಿಜಯ್ ದೇವರಕೊಂಡ ಜೊತೆ ರಾಜಸ್ಥಾನದ ಉದಯಪುರದಲ್ಲಿ ಮದುವೆ ಆಗುತ್ತಿದ್ದಾರೆ. ಈ ವಿಷಯದಲ್ಲಿ ಈ ಜೋಡಿ ಗುಟ್ಟು ಕಾಯ್ದುಕೊಳ್ಳುತ್ತಾ ಬರುತ್ತಿದೆ. ಈಗ ರಶ್ಮಿಕಾ ಮಂದಣ್ಣ ಅವರು ವಿವಾಹ ಆಗೋ ಹೋಟೆಲ್​ನ ಸಿದ್ಧತೆಯ ವಿಡಿಯೋ ಲೀಕ್ ಆಗಿದೆ. ಈ ವಿಡಿಯೋದಲ್ಲಿ ಮದುವೆ ಎಷ್ಟು ಅದ್ದೂರಿಯಾಗಿ ನೆರವೇರಲಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ತುಂಬಾನೇ ಖಾಸಗಿಯಾಗಿ ಈ ವಿವಾಹ ನಡೆಯಲಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಪರಿಚಯ ಆಗಿ ಹಲವು ವರ್ಷಗಳು ಕಳೆದಿವೆ. ‘ಗೀತ ಗೋವಿಂದಂ’ ಸಿನಿಮಾ ಟೈಮ್ ಅಲ್ಲಿ ಸೆಟ್​ ಅಲ್ಲಿ ಇವರ ಪರಿಚಯ ಆಯಿತು. ಆ ಬಳಿಕ ಇಬ್ಬರ ಮಧ್ಯೆ ಸಾಕಷ್ಟು ಒಳ್ಳೆಯ ಬಾಂಡಿಂಗ್ ಬೆಳೆಯಿತು. ಪರಿಚಯ ಪ್ರೀತಿಗೆ ತಿರುಗಿದೆ. ಈಗ ಇವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ವಿಜಯ್ ನಿವಾಸದಲ್ಲಿ ಗುಟ್ಟಾಗಿಯೇ ನಿಶ್ಚಿತಾರ್ಥ ನಡೆದಿತ್ತು. ವಿವಾಹ ಕೂಡ ಸಾಕಷ್ಟು ರಹಸ್ಯವಾಗಿ ನಡೆಯುತ್ತಿದೆ.

View this post on Instagram

A post shared by Tanya ♡ (@tanyaa.yaaa)

ಉದಯಪುರದ ಸಿಟಿ ಪ್ಯಾಲೇಸ್ ಹೋಟೆಲ್ ಅಲ್ಲಿ ಮದುವೆ ನಡೆಯುತ್ತಿದೆ ಎಂದು ವಿಡಿಯೋ ವೈರಲ್ ಮಾಡಲಾಗಿದೆ. ವಿಡಿಯೋದಲ್ಲಿರುವವರು ಹೇಳುವ ಮಾಹಿತಿ ಪ್ರಕಾರ ಫೆಬ್ರವರಿ 2ರಂದೇ ಈ ಮದುವೆ ನಡೆಯಲಿದೆಯಂತೆ. ಫೆಬ್ರವರಿ 26ರಂದು ಇವರ ಮದುವೆ ಎಂದು ಹೇಳಲಾಗಿತ್ತು. ಆದರೆ, ಈಗ ದಿನಾಂಕ ಬದಲಾಯಿತೇ ಎಂಬ ಪ್ರಶ್ನೆಯೂ ಮೂಡಿದೆ. ಮದುವೆ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲದಿರಲಿ ಎಂದು ಕೆಲವೊಮ್ಮೆ ಸೆಲಬ್ರಿಟಿಗಳು ತಪ್ಪು ದಿನಾಂಕ ಸುದ್ದಿಯಾಗುವಂತೆ ನೋಡಿಕೊಳ್ಳುತ್ತಾರೆ. ರಶ್ಮಿಕಾ ಮಂದಣ್ಣ ಕೂಡ ಇದೇ ತಂತ್ರ ಉಪಯೋಗಿಸಿರಬಹುದು ಎಂಬುದು ಅನೇಕರ ವಾದ.

ಇದನ್ನೂ ಓದಿ: ಮದುವೆಗೂ ಮುನ್ನ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಅವರು ಇಂದೇ ಮದುವೆ ಆದರೆ, ಸಂಜೆ ವೇಳೆ ಅವರ ವಿವಾಹದ ಫೋಟೋಗಳು ಅಪ್​​ಲೋಡ್ ಆಗಬಹುದು. ಮದುವೆ ವಿಷಯದಲ್ಲಿ ರಶ್ಮಿಕಾ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಆ ಕನಸು ಈಗ ಈಡೇರುತ್ತಿದೆ. ವಿವಾಹ ಸಾಕಷ್ಟು ಖಾಸಗಿಯಾಗಿ ನಡೆಯುತ್ತಿದ್ದು, ಫೋಟೋಗಳು ವೈರಲ್ ಆಗದಂತೆ ನೋಡಿಕೊಳ್ಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.