ನಟಿ ರಶ್ಮಿಕಾ ಮಂದಣ್ಣರ (Rashmika Mandanna) ವೃತ್ತಿಯ ಗ್ರಾಫು ವರ್ಷದಿಂದ ವರ್ಷಕ್ಕೆ ಏರುತ್ತಲೇ ಸಾಗುತ್ತಿದೆ. ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣ ಟಾಲಿವುಡ್ನ ಟಾಪ್ ನಟಿ ಎನಿಸಿಕೊಂಡು ಈಗ ಬಾಲಿವುಡ್ನಲ್ಲಿಯೂ ಹವಾ ಎಬ್ಬಿಸಿದ್ದಾರೆ. ಬಾಲಿವುಡ್ನ ಸ್ಟಾರ್ ನಟರುಗಳೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಗೌರವವೊಂದಕ್ಕೆ ರಶ್ಮಿಕಾ ಮಂದಣ್ಣ ಭಾಜನರಾಗಿದ್ದಾರೆ. ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಸೇರ್ಪಡೆಗೊಂಡಿದೆ.
ಅಂತರಾಷ್ಟ್ರೀಯ ಮನ್ನಣೆಯುಳ್ಳ ಫೋರ್ಬ್ಸ್ ಪ್ರತಿವರ್ಷದಂತೆ ಈ ವರ್ಷವೂ ಭಾರತದ ಸಾಧಕರ ಪಟ್ಟಿ ಬಿಡುಗಡೆ ಮಾಡಿದ್ದು ಆ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಸಹ ಸ್ಥಾನ ಪಡೆದುಕೊಂಡಿದ್ದಾರೆ. ಫೋರ್ಬ್ಸ್ ಇಂಡಿಯಾ ಕಳೆದ ವರ್ಷ ಭಾರತದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 30 ವರ್ಷದ ಒಳಗಿನ 30 ಜನರ ಪಟ್ಟಿಯನ್ನು (30 ಅಂಡರ್ 30) ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮನೊರಂಜನಾ ಕ್ಷೇತ್ರದಲ್ಲಿ ರಶ್ಮಿಕಾ ಮಂದಣ್ಣರ ಹೆಸರಿದೆ.
27 ವರ್ಷದ ರಶ್ಮಿಕಾ ಮಂದಣ್ಣ ಮನೊರಂಜನಾ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಗುರುತಿಸಿ ಫೋರ್ಬ್ಸ್ ಇಂಡಿಯಾ ಭಾರತದ 30ರ ವಯಸ್ಸಿನ ಒಳಗಿನ ಸಾಧಕರಲ್ಲಿ ಒಬ್ಬರೆಂದು ರಶ್ಮಿಕಾ ಮಂದಣ್ಣರನ್ನು ಗುರುತಿಸಿದೆ. ರಶ್ಮಿಕಾ ಮಾತ್ರವೇ ಅಲ್ಲದೆ ನಟಿ ರಾಧಿಕಾ ಮದನ್ ಅವರ ಹೆಸರೂ ಸಹ ಮನೊರಂಜನಾ ಕ್ಷೇತ್ರದ ಸಾಧನೆಯ ಪಟ್ಟಿಯಲ್ಲಿದೆ. ಸಂಗೀತ ಕ್ಷೇತ್ರದಲ್ಲಿ ಅದಿತಿ ಸೈಗಲ್ ಅಲಿಯಾಸ್ ಡಾಟ್ ಹೆಸರು ಇದೆ. ಇವರು ‘ದಿ ಆರ್ಚೀಸ್’ ಸಿನಿಮಾದಲ್ಲಿಯೂ ನಟಿಸಿದ್ದರು.
ಇದನ್ನೂ ಓದಿ:ತಮ್ಮ ಬಗ್ಗೆ ಸುಳ್ಳು ಸುದ್ದಿ ಹರಡಿದವಗೆ ಕ್ಲಾಸ್ ತೆಗೆದುಕೊಂಡ ರಶ್ಮಿಕಾ ಮಂದಣ್ಣ
ಕೃಷಿ ತಂತ್ರಜ್ಞಾನ, ಕಲೆ, ಉದ್ಯಮ, ಪರಿಸರ ಸಂರಕ್ಷಣೆ, ಫ್ಯಾಷನ್, ಸಂಗೀತ, ಕಂಟೆಂಟ್ ಕ್ರಿಯೇಷನ್, ಶಿಕ್ಷಣ, ಕ್ರೀಡೆ, ಉತ್ಪಾದನೆ, ಮಾರುಕಟ್ಟೆ, ಸಮಾಜ ಸೇವೆ, ಆರೋಗ್ಯ ಸೇವೆ, ಹಣಕಾಸು ಇನ್ನೂ ಕೆಲವು ಕ್ಷೇತ್ರಗಳಲ್ಲಿ ಮಿಂಚುತ್ತಿರುವ 30ಕ್ಕಿಂತಲೂ ಕಡಿಮೆ ವಯಸ್ಸಿನ ಸಾಧಕರನ್ನು ಗುರುತಿಸಿ ಪಟ್ಟಿಯಲ್ಲಿ ಸೇರಿಸಿದೆ ಫೋರ್ಬ್ಸ್ ಇಂಡಿಯಾ.
ರಶ್ಮಿಕಾ ಮಂದಣ್ಣ ಪ್ರಸ್ತುತ ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಪುಷ್ಪ 2, ಗರ್ಲ್ಫ್ರೆಂಡ್ ಸಿನಿಮಾಗಳ ಜೊತೆಗೆ ವಿಜಯ್ ದೇವರಕೊಂಡ ಜೊತೆಗೆ ‘ಗೀತಾ ಗೋವಿಂದಮ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ನಲ್ಲಿ ಟೈಗರ್ ಶ್ರಾಫ್ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ತಮಿಳಿನಲ್ಲಿಯೂ ಸಹ ಸ್ಟಾರ್ ನಟರೊಬ್ಬರ ಸಿನಿಮಾಕ್ಕೆ ಎಸ್ ಹೇಳಿದ್ದಾರೆ. ರಶ್ಮಿಕಾ ಮಲಯಾಳಂ ಚಿತ್ರರಂಗಕ್ಕೂ ಕಾಲಿಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ