AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ವ್ಯಾಲೆಂಟೈನ್ಸ್​ ಡೇ ದಿನ ಫ್ಯಾನ್ಸ್ ಎದುರು ಹೊಸ ಕೋರಿಕೆ ಇಟ್ಟ ರಶ್ಮಿಕಾ ಮಂದಣ್ಣ

ರಶ್ಮಿಕಾಗೆ ಫ್ಯಾನ್ಸ್ ಕಂಡರೆ ಎಲ್ಲಿಲ್ಲದ ಪ್ರೀತಿ. ಅಭಿಮಾನಿಗಳನ್ನು ಅವರು ಸಾಕಷ್ಟು ಗೌರವಿಸುತ್ತಾರೆ. ಯಾರಾದರೂ ಸೆಲ್ಫಿ ಕೇಳಿದರೆ ಇಲ್ಲ ಎಂದು ಹೇಳುವುದಿಲ್ಲ. ಈ ವಿಚಾರದಲ್ಲಿ ಅವರದ್ದು ದೊಡ್ಡ ಮನಸ್ಸು. ಈಗ ರಶ್ಮಿಕಾ ಮಂದಣ್ಣ ಮಿರರ್ ಸೆಲ್ಫಿ ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳ ಎದುರು ಕೋರಿಕೆ ಇಟ್ಟಿದ್ದಾರೆ.

Rashmika Mandanna: ವ್ಯಾಲೆಂಟೈನ್ಸ್​ ಡೇ ದಿನ ಫ್ಯಾನ್ಸ್ ಎದುರು ಹೊಸ ಕೋರಿಕೆ ಇಟ್ಟ ರಶ್ಮಿಕಾ ಮಂದಣ್ಣ
ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on: Feb 14, 2024 | 6:54 AM

Share

ಇಂದು (ಫೆಬ್ರವರಿ 14) ವ್ಯಾಲೆಂಟೈನ್ಸ್ ಡೇ. ಎಲ್ಲಾ ಪ್ರೇಮಿಗಳು ಸಂಭ್ರಮದಿಂದ ಇದನ್ನು ಆಚರಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೇಮಿಗಳ ದಿನಕ್ಕೆ ಶುಭಾಶಯ ಬರುತ್ತಿದೆ. ಅನೇಕರು ತಮ್ಮ ಪ್ರೀತಿ ಪಾತ್ರರರಿಗೆ ಪ್ರೇಮ ನಿವೇದನ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ಹೀಗೆ ವ್ಯಾಲೆಂಟೈನ್ಸ್ ಡೇ ದಿನ ಒಬ್ಬೊಬ್ಬರದ್ದು ಒಂದೊಂದು ಪ್ಲ್ಯಾನ್. ಈ ಬಗ್ಗೆ ರಶ್ಮಿಕಾ ಮಂದಣ್ಣ(Rashmika Mandanna) ಪ್ರಶ್ನೆ ಮಾಡಿದ್ದಾರೆ. ಪ್ರೇಮಿಗಳ ದಿನದಂದು ಯಾರು ಯಾವ ರೀತಿಯ ಯೋಜನೆ ಹಾಕಿಕೊಂಡಿದ್ದೀರಿ ಎಂಬುದನ್ನು ಹೇಳುವಂತೆ ರಶ್ಮಿಕಾ ಕೋರಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದೆ.

ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಅವರು ಅಭಿಮಾನಿಗಳನ್ನು ಸಾಕಷ್ಟು ಗೌರವಿಸುತ್ತಾರೆ. ಯಾರಾದರೂ ಸೆಲ್ಫಿ ಕೇಳಿದರೆ ಇಲ್ಲ ಎಂದು ಹೇಳುವುದಿಲ್ಲ. ಈ ವಿಚಾರದಲ್ಲಿ ಅವರದ್ದು ದೊಡ್ಡ ಮನಸ್ಸು. ಸೋಶಿಯಲ್ ಮೀಡಿಯಾದಲ್ಲೂ ಅಷ್ಟೇ, ಅವರು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಫ್ಯಾನ್ಸ್ ಖುಷಿಗಾಗಿ ಆಗಾಗ ಫೋಟೋ ಹಂಚಿಕೊಳ್ಳುತ್ತಾರೆ. ಈಗ ರಶ್ಮಿಕಾ ಮಂದಣ್ಣ ಮಿರರ್ ಸೆಲ್ಫಿ ಹಂಚಿಕೊಂಡು ಅಭಿಮಾನಿಗಳ ಎದುರು ಪ್ರಶ್ನೆ ಇಟ್ಟಿದ್ದಾರೆ. ಈ ಫೋಟೋ ಹಾಗೂ ಅವರು ಬರೆದ ಸಾಲುಗಳು ಫ್ಯಾನ್ಸ್​ಗೆ ಇಷ್ಟವಾಗಿದೆ.

ರಶ್ಮಿಕಾ ಮಂದಣ್ಣ ಫೋಟೋಗಳನ್ನು ಹಂಚಿಕೊಳ್ಳದೆ ಎರಡು ವಾರಗಳು ಕಳೆದಿವೆ. ಹೀಗಾಗಿ ಅಭಿಮಾನಿಗಳು ಹೊಸ ಫೋಟೋ ಪೋಸ್ಟ್ ಮಾಡುವಂತೆ ಕೋರುತ್ತಿದ್ದರು. ಫೆಬ್ರವರಿ 13ರ ರಾತ್ರಿ ಅವರು ಫೋಟೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಅಭಿಮಾನಿಗಳ ಬಳಿ ಪ್ರೇಮಿಗಳ ದಿನದ ಯೋಜನೆ ತಿಳಿಸಲು ಕೋರಿದ್ದಾರೆ. ಬೇಡದೇ ಇರುವ ಕಮೆಂಟ್​ಗಳನ್ನು ಹಾಕಬೇಡಿ ಎಂದಿರುವ ಅವರು, ಈ ಕಮೆಂಟ್ ಬಾಕ್ಸ್ ಕೇವಲ ನನ್ನ ಫ್ಯಾನ್ಸ್​ಗೆ ಎಂದು ಒತ್ತಿ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಪೋಸ್ಟ್

‘ನನಗೆ ಯಾರೂ ವ್ಯಾಲೆಂಟೈನ್ ಇಲ್ಲ. ನೀವು ಆಗ್ತೀರಾ’ ಎಂದು ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದಾನೆ. ಈ ರೀತಿಯ ಹಲವು ಕಮೆಂಟ್​ಗಳು ಬಂದಿವೆ. ಈ ಕಮೆಂಟ್​ಗಳನ್ನು ಓದುವುದಾಗಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಆದರೆ, ಅವರು ಯಾವ ಕಮೆಂಟ್​​ಗಳಿಗೂ ಉತ್ತರ ನೀಡುವ ಗೋಜಿಗೆ ಹೋಗಿಲ್ಲ.

ಇದನ್ನೂ ಓದಿ: ತಮ್ಮ ಬಗ್ಗೆ ಸುಳ್ಳು ಸುದ್ದಿ ಹರಡಿದವಗೆ ಕ್ಲಾಸ್ ತೆಗೆದುಕೊಂಡ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ಸದ್ಯ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಅನಿಮಲ್’ ಸಿನಿಮಾ ಹಿಟ್ ಆಗಿರುವುದರಿಂದ ಅವರ ಬೇಡಿಕೆ ಹೆಚ್ಚಾಗಿದೆ. ಅವರ ನಟನೆಯ ‘ರೇನ್​ಬೋ’ ಚಿತ್ರದ ಕೆಲಸಗಳು ನಿಂತಿವೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ