ಬಿಡುಡಗೆ ಆಗುತ್ತಿದೆ ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಸಿನಿಮಾ, ನಿರೀಕ್ಷೆ ದುಪ್ಪಟ್ಟು
Rashmika Mandanna: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಅವರ ನಟನೆಯ ಕಳೆದ ಮೂರು ಸಿನಿಮಾಗಳು ಬ್ಲಾಕ್ ಬಸ್ಟರ್ ಸಿನಿಮಾಗಳಾಗಿವೆ. ಇದೀಗ ರಶ್ಮಿಕಾ ನಟನೆಯ ಹೊಸದೊಂದು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, ಆ ಸಿನಿಮಾದ ಬಗ್ಗೆಯೂ ದೊಡ್ಡ ಮಟ್ಟದ ನಿರೀಕ್ಷೆಗಳಿವೆ.

ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ (Rashmika Mandanna) ಮುಟ್ಟಿಗೆದ್ದಲ್ಲ ಚಿನ್ನವಾಗುತ್ತಿದೆ. ರಶ್ಮಿಕಾ ಮಂದಣ್ಣ ನಟಿಸಿ, ಬಿಡುಗಡೆ ಆಗಿರುವ ಕಳೆದ ಮೂರು ಸಿನಿಮಾಗಳು ಸಹ ಬ್ಲಾಕ್ ಬಸ್ಟರ್ ಆಗಿವೆ. ಮೊದಲಿಗೆ ಬಿಡುಗಡೆ ಆದ ‘ಅನಿಮಲ್’ ಸುಮಾರು 1000 ಕೋಟಿ ಗಳಿಕೆ ಮಾಡಿತು. ಅದರ ಬಳಿಕ ಬಿಡುಗಡೆ ಆದ ‘ಪುಷ್ಪ 2’ ಸಿನಿಮಾ ಸುಮಾರು 2000 ಕೋಟಿ ರೂಪಾಯಿ ಗಳಿಕೆ ಮಾಡಿತು. ಇತ್ತೀಚೆಗೆ ಬಿಡುಗಡೆ ಆದ ‘ಛಾವಾ’ ಸಿನಿಮಾ ಸಹ 1000 ಕೋಟಿ ಗಳಿಕೆಯತ್ತ ವೇಗದಿಂದ ಮುನ್ನುಗ್ಗುತ್ತಿದೆ. ಇದರ ನಡುವೆ ರಶ್ಮಿಕಾ ನಟನೆಯ ಮತ್ತೊಂದು ಸಿನಿಮಾ ತೆರೆಗೆ ಬರುತ್ತಿದೆ.
ರಶ್ಮಿಕಾ ಮಂದಣ್ಣ ನಟನೆಯ ಹೊಸ ತಮಿಳು-ತೆಲುಗು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ರಶ್ಮಿಕಾ, ತಮಿಳಿನ ಸ್ಟಾರ್ ನಟ ಧನುಶ್ ಜೊತೆಗೆ ಮೊದಲ ಬಾರಿ ನಟಿಸಿರುವ ‘ಕುಬೇರ’ ಸಿನಿಮಾದ ಬಿಡುಗಡೆ ದಿನಾಂಕ ಇಂದು ಘೋಷಣೆ ಆಗಿದೆ. ‘ಕುಬೇರ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಧನುಶ್ ಜೊತೆಗೆ ತೆಲುಗಿನ ಸ್ಟಾರ್ ನಟ ನಾಗಾರ್ಜುನ ಸಹ ನಟಿಸಿದ್ದು, ಈ ಸಿನಿಮಾ ಜೂನ್ 20ಕ್ಕೆ ತೆರೆಗೆ ಬರಲಿದೆ.
ರಶ್ಮಿಕಾ, ಧನುಶ್ ನಟಿಸಿರುವ ‘ಕುಬೇರ’ ಸಿನಿಮಾವನ್ನು ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ‘ಆನಂದ್’, ‘ಗೋಧಾವರಿ’, ‘ಹ್ಯಾಪಿಡೇಸ್’, ‘ಲೀಡರ್’, ‘ಫಿದಾ’, ‘ಲವ್ ಸ್ಟೋರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಇವರು ಇದೀಗ ಮೊದಲ ಬಾರಿಗೆ ದೊಡ್ಡ ಸ್ಟಾರ್ ನಟನ ಸಿನಿಮಾ ಒಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಇದೇ ಮೊದಲ ಬಾರಿಗೆ ಬಹುಭಾಷೆಯಲ್ಲಿ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ:ಅಯ್ಯೋ ಪಾಪ, ಮಾಸ್ಟರ್ ಆನಂದ್ಗೆ ಏನಾಯ್ತು?
ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿರುವ ಸಮಯದಲ್ಲಿ ಪ್ರತಿಭಾವಂತ ನಟರು, ನಿರ್ದೇಶಕರನ್ನು ಒಳಗೊಂಡಿರುವ ‘ಕುಬೇರ’ ಸಿನಿಮಾ ಸಹ ದೊಡ್ಡ ಯಶಸ್ಸನ್ನೇ ಗಳಿಸಲಿದೆ ಎಂಬ ನಿರೀಕ್ಷೆ ಸಿನಿಮಾ ಪ್ರೇಮಿಗಳದ್ದು. ‘ಕುಬೇರ’ ಸಿನಿಮಾದ ಹೊರತಾಗಿ ರಶ್ಮಿಕಾ ಮಂದಣ್ಣ ಸಲ್ಮಾನ್ ಖಾನ್ ಜೊತೆಗೆ ನಟಿಸಿರುವ ‘ಸಿಖಂಧರ್’ ಸಿನಿಮಾದ ಬಿಡುಗಡೆ ದಿನಾಂಕ ಸಹ ಇಂದೇ ಘೋಷಣೆಯಾಗಿದ್ದು, ಆ ಸಿನಿಮಾ ಇದೇ ವರ್ಷದ ಈದ್ ಹಬ್ಬಕ್ಕೆ ಬಿಡುಗಡೆ ಆಗಲಿದೆ.
ಇವುಗಳ ಹೊರತಾಗಿ ರಶ್ಮಿಕಾ ಮಂದಣ್ಣ ಕೈಯಲ್ಲಿ ತೆಲುಗಿನ ‘ಗರ್ಲ್ಫ್ರೆಂಡ್’, ಹಿಂದಿಯ ಎರಡು ಹೊಸ ಸಿನಿಮಾ, ವಿಜಯ್ ದೇವರಕೊಂಡ ಜೊತೆಗೆ ‘ಗೀತ ಗೋವಿಂದಂ 2’ ಸಿನಿಮಾ ಇನ್ನೂ ಕೆಲ ಸಿನಿಮಾಗಳಿವೆ. ಒಟ್ಟಾರೆ ಈ ವರ್ಷ ಪೂರ್ತಿ ರಶ್ಮಿಕಾ ಮಂದಣ್ಣ ಭಾರಿ ಬ್ಯುಸಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




