‘29 ವರ್ಷ ಆಗ್ತಿದೆ ಅಂತ ನಂಬೋಕಾಗಲ್ಲ’: ರಶ್ಮಿಕಾ ಮಂದಣ್ಣ ಬರ್ತ್​ಡೇ ಈ ವರ್ಷ ಸಖತ್ ಜೋರು

29ನೇ ವರ್ಷದ ಬರ್ತ್​ಡೇ ಆಚರಣೆ ಮಾಡಿಕೊಳ್ಳಲು ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಎಗ್ಸೈಟ್ ಆಗಿದ್ದಾರೆ. ಈ ಬಗ್ಗೆ 3 ದಿನ ಮುಂಚಿತವಾಗಿಯೇ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಬಹುಭಾಷೆಯ ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ರಶ್ಮಿಕಾ ಅವರಿಗೆ ಈಗಲೇ ಅಭಿಮಾನಿಗಳು ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ.

‘29 ವರ್ಷ ಆಗ್ತಿದೆ ಅಂತ ನಂಬೋಕಾಗಲ್ಲ’: ರಶ್ಮಿಕಾ ಮಂದಣ್ಣ ಬರ್ತ್​ಡೇ ಈ ವರ್ಷ ಸಖತ್ ಜೋರು
Rashmika

Updated on: Apr 02, 2025 | 10:06 PM

ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ಗುರುತಿಸಿಕೊಂಡಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಅವರಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ‘ಕಿರಿಕ್ ಪಾರ್ಟಿ’ (Kirik Party) ಸಿನಿಮಾದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಬಾಲಿವುಡ್​ನಲ್ಲಿ ಈಗ ಮಿಂಚುತ್ತಿದ್ದಾರೆ. ಸ್ಟಾರ್​ ಹೀರೋಗಳ ಪಾಲಿಗೆ ರಶ್ಮಿಕಾ ಮಂದಣ್ಣ ಅವರು ಲಕ್ಕಿ ಹೀರೋಯಿನ್ ಆಗಿದ್ದಾರೆ. 20ನೇ ವಯಸ್ಸಿನಲ್ಲಿ ಹೀರೋಯಿನ್ ಆದ ರಶ್ಮಿಕಾ ಈಗ 29ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಈ ವರ್ಷ ಬರ್ತ್​ಡೇ (Rashmika Mandanna Birthday) ಆಚರಣೆ ಮಾಡಿಕೊಳ್ಳಲು ಅವರು ಹೆಚ್ಚು ಉತ್ಸುಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

‘ನನ್ನ ಬರ್ತ್​ಡೇ ತಿಂಗಳು ಬಂದಿದೆ. ನಾನು ತುಂಬ ಎಗ್ಸೈಟ್ ಆಗಿದ್ದೇನೆ. ವಯಸ್ಸು ಆದಂತೆಲ್ಲ ನಿಮಗೆ ಹುಟ್ಟುಹಬ್ಬ ಆಚರಣೆ ಮಾಡುವ ಆಸಕ್ತಿ ಕಡಿಮೆ ಆಗುತ್ತದೆ ಎಂಬುದನ್ನು ನಾನು ಕೇಳಿದ್ದೇನೆ. ಆದರೆ ನನ್ನ ವಿಚಾರದಲ್ಲಿ ಹಾಗಿಲ್ಲ. ವಯಸ್ಸು ಜಾಸ್ತಿ ಆದಂತೆಲ್ಲ ನನಗೆ ಬರ್ತ್​ಡೇ ಆಚರಣೆ ಮಾಡುವ ಉತ್ಸಾಹ ಜಾಸ್ತಿ ಆಗುತ್ತಿದೆ’ ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ.

‘ನಾನು ಈಗ 29ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ ಅಂತ ನಂಬೋಕೆ ಆಗುತ್ತಿಲ್ಲ. ಖುಷಿಯಾಗಿ, ಆರೋಗ್ಯಕರವಾಗಿ, ಸುರಕ್ಷಿತವಾಗಿ ಇನ್ನೊಂದು ವರ್ಷ ಕಳೆದಿದ್ದೇನೆ. ಇದು ಸೆಲೆಬ್ರೇಟ್ ಮಾಡುವ ಸಮಯ’ ಎಂದು ರಶ್ಮಿಕಾ ಮಂದಣ್ಣ ಅವರು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಈಗಾಗಲೇ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಆರಂಭಿದ್ದಾರೆ.

ಇದನ್ನೂ ಓದಿ
‘ನನ್ನ ತಂಗಿಗೆ ಸವಲತ್ತು ಸಿಗಬಾರದು’; ರಶ್ಮಿಕಾ ಮಂದಣ್ಣ ಹೀಗೆ ಅಂದಿದ್ಯಾಕೆ?
ರಶ್ಮಿಕಾ ಮಂದಣ್ಣ ಹಿಂಗೆಲ್ಲ ಮಾಡಿದರೂ ಕ್ಯೂಟ್ ಅಂತಾರೆ ಅಭಿಮಾನಿಗಳು
‘ನಾನು ಹೈದರಾಬಾದ್​ನವಳು’ ಎಂದು ಹೆಮ್ಮೆಯಿಂದ ಹೇಳಿದ ರಶ್ಮಿಕಾ
‘ಎಲ್ಲರಿಗೂ ಆ ವಿಚಾರ ಗೊತ್ತಿದೆ’; ಮದುವೆ ಬಗ್ಗೆ ನೇರವಾಗಿ ಮಾತನಾಡಿದ ರಶ್ಮಿಕಾ

ಏಪ್ರಿಲ್ 5ರಂದು ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬ. ಅವರು ನಟಿಸಿದ ‘ಅನಿಮಲ್’, ‘ಪುಷ್ಪ 2’, ‘ಛಾವ’ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಆದರೆ ಸಲ್ಮಾನ್ ಖಾನ್ ಜೊತೆ ನಟಿಸಿದ ‘ಸಿಕಂದರ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ. ಆದರೂ ಕೂಡ ರಶ್ಮಿಕಾ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಿಂದಲೂ ರಶ್ಮಿಕಾ ಅವರಿಗೆ ಸಖತ್ ಆಫರ್​ಗಳು ಬರುತ್ತಿವೆ. ಈಗಂತೂ ಅವರಿಗೆ ಕೈತುಂಬ ಸಂಭಾವನೆ ಸಿಗುತ್ತಿದೆ.

ಇದನ್ನೂ ಓದಿ: ಕೊರಿಯನ್ ಹಾರ್ಟ್ ಮಾಡಲು ರಶ್ಮಿಕಾ ಒತ್ತಾಯ; ಮುಲಾಜಿಲ್ಲದೇ ನಿರಾಕರಿಸಿದ ಸಲ್ಮಾನ್

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಅವರು ಹೆಚ್ಚು ಕ್ಲೋಸ್ ಆಗಿದ್ದಾರೆ. ಈಗಾಗಲೇ ಅನೇಕ ಬಾರಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ಬರ್ತ್​ಡೇಗೆ ವಿಜಯ್ ದೇವರಕೊಂಡ ಹೇಗೆ ವಿಶ್ ಮಾಡುತ್ತಾರೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.