‘ಅವರು ಏನು ಸೇವಿಸ್ತಾರೋ ಗೊತ್ತಿಲ್ಲ’; ಅನಿಮಲ್ ನಿರ್ದೇಶಕನ ಬಗ್ಗೆ ರಶ್ಮಿಕಾ ಮಂದಣ್ಣ ಮಾತು
‘ಸಂದೀಪ್ ಒಂದು ಕಥೆ ಮಾಡಿಕೊಂಡರೆ ಅದಕ್ಕೆ ಬದ್ಧರಾಗುತ್ತಾರೆ. ಜನಕ್ಕೆ ಹೇಗೆ ಬೆಂಕು ಎಂದು ಕೇಳಿ ಕಥೆ ಬದಲಾಯಿಸುವುದಿಲ್ಲ. ಅದು ನನಗೆ ಇಷ್ಟ. ಅವರು ಯಾವಾಗಲೂ ಹೀಗೆಯೇ ಇರಬೇಕು ಎಂಬುದು ನನ್ನ ಆಸೆ’ ಎಂದಿದ್ದಾರೆ ರಶ್ಮಿಕಾ.
ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಅಷ್ಟೇ ಟೀಕೆಗಳನ್ನು ಕೂಡ ಪಡೆದಿದ್ದಾರೆ. ಸಂದೀಪ್ ಅವರ ಕೆಲಸವನ್ನು ಅನೇಕರು ಟೀಕೆ ಮಾಡಿದ್ದಾರೆ. ಆದರೆ, ಅವರನ್ನು ರಶ್ಮಿಕಾ ಮಂದಣ್ಣ ಬಾಯ್ತುಂಬ ಹೊಗಳಿದ್ದಾರೆ. ಅವರ ಕೆಲಸಕ್ಕೆ ಮೆಚ್ಚುಗೆ ಸಿಕ್ಕಿದೆ.
‘ಅವರು (ಸಂದೀಪ್ ರೆಡ್ಡಿ ವಂಗ) ವಿಭಿನ್ನವಾಗಿ ಕೆಲಸ ಮಾಡುತ್ತಾರೆ. ಅವರು ಹೇಗೆ ಯೋಚಿಸುತ್ತಾರೆ, ಏನು ತಿನ್ನುತ್ತಾರೆ ಅಥವಾ ಏನು ಮಾಡುತ್ತಾರೆ ಎಂದು ನನಗೆ ಗೊತ್ತಿಲ್ಲ. ಆದರೆ, ‘ಅನಿಮಲ್’ ಸಿನಿಮಾ ನೋಡಿದಾಗ ಇಂಥ ಸಿನಿಮಾ ಬೇಕು ಎಂದೆನಿಸುವಂತೆ ಮಾಡಿದ್ದಾರೆ. ‘ಅನಿಮಲ್ ಪಾರ್ಕ್’ ಚಿತ್ರದ ಕಥೆ ಹೇಗೆ ಬೇಕಾದರೂ ಇರಬಹುದು. ಈ ವಿಚಾರ ರೋಮಾಂಚನಕಾರಿಯಾಗಿದೆ. ಅವರು ನನಗೆ ಚಿತ್ರದ ಸಣ್ಣ ಎಳೆ ಹೇಳಿದ್ದಾರೆ. ಅನಿಮಲ್ ಪಾರ್ಕ್ ಮೂಲಕ ದೊಡ್ಡ ಸಕ್ಸಸ್ ಕಾಣೋ ಭರವಸೆಯಲ್ಲಿ ಅವರಿದ್ದಾರೆ’ ಎಂದಿದ್ದಾರೆ ರಶ್ಮಿಕಾ.
‘ಸಂದೀಪ್ ಒಂದು ಕಥೆ ಮಾಡಿಕೊಂಡರೆ ಅದಕ್ಕೆ ಬದ್ಧರಾಗುತ್ತಾರೆ. ಜನಕ್ಕೆ ಹೇಗೆ ಬೇಕು ಎಂದು ಕೇಳಿ ಕಥೆ ಬದಲಾಯಿಸುವುದಿಲ್ಲ. ಅದು ನನಗೆ ಇಷ್ಟ. ಅವರು ಯಾವಾಗಲೂ ಹೀಗೆಯೇ ಇರಬೇಕು ಎಂಬುದು ನನ್ನ ಆಸೆ’ ಎಂದಿದ್ದಾರೆ ರಶ್ಮಿಕಾ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಟು ವಿಜಯ್ ದೇವರಕೊಂಡ; ಈ ಸೆಲೆಬ್ರಿಟಿಗಳ ಕ್ರಶ್ ಯಾರು?
ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಹೆಚ್ಚುತ್ತಿದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಆಸ್ತಿ ಮೌಲ್ಯ ಕೂಡ ಹೆಚ್ಚುತ್ತಿದೆ. ಅವರು ಸದ್ಯ ‘ಪುಷ್ಪ 2’, ‘ರೇನ್ಬೋ’ ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಅನಿಮಲ್’ ಸಿನಿಮಾ ಗೆದ್ದ ಬಳಿಕ ಅವರಿಗೆ ಬಾಲಿವುಡ್ನಿಂದ ಸಾಕಷ್ಟು ಆಫರ್ ಬರುತ್ತಿದೆ. ಅಳೆದು ತೂಗಿ ಸಿನಿಮಾ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ