ಸ್ಟಾರ್ ನಟಿಗೆ ಫಿಕ್ಸ್ ಆಗಿದ್ದ ಪ್ರಮುಖ ಸಿನಿಮಾ ಈಗ ರಶ್ಮಿಕಾ ಮಂದಣ್ಣ ಕೈಗೆ

Rashmika Mandanna: ರಶ್ಮಿಕಾ ಮಂದಣ್ಣ ಪ್ರಸ್ತುತ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಅವರು ನಟಿಸುವ ಹೆಚ್ಚು ಸಿನಿಮಾಗಳು ನಾಯಕ ಪ್ರಧಾನ, ನಾಯಕಿಗೆ ಬಹಳ ಕಡಿಮೆ ಆದ್ಯತೆ (‘ಗರ್ಲ್​​ಫ್ರೆಂಡ್’ ಮತ್ತು ‘ಥಮಾ’ ಬಿಟ್ಟು) ಆದರೆ ಇತ್ತೀಚೆಗಷ್ಟೆ ಮದುವೆ ಆದ ರಶ್ಮಿಕಾ ಇನ್ನು ಮುಂದೆ ಹೆಚ್ಚು-ಹೆಚ್ಚು ಮಹಿಳಾ ಪ್ರಧಾನ ಮತ್ತು ತಮ್ಮ ನಟನಾ ಕೌಶಲಕ್ಕೆ ಸವಾಲೆನಿಸುವ ಪಾತ್ರಗಳಲ್ಲಿ ನಟಿಸುವ ಉತ್ಸುಕತೆ ತೋರುತ್ತಿದ್ದಾರೆ.

ಸ್ಟಾರ್ ನಟಿಗೆ ಫಿಕ್ಸ್ ಆಗಿದ್ದ ಪ್ರಮುಖ ಸಿನಿಮಾ ಈಗ ರಶ್ಮಿಕಾ ಮಂದಣ್ಣ ಕೈಗೆ
Rashmika Mandanna

Updated on: Jun 07, 2026 | 6:59 PM

ರಶ್ಮಿಕಾ ಮಂದಣ್ಣ (Rashmika Mandanna) ಪ್ರಸ್ತುತ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಅವರು ನಟಿಸುವ ಹೆಚ್ಚು ಸಿನಿಮಾಗಳು ನಾಯಕ ಪ್ರಧಾನ, ನಾಯಕಿಗೆ ಬಹಳ ಕಡಿಮೆ ಆದ್ಯತೆ (‘ಗರ್ಲ್​​ಫ್ರೆಂಡ್’ ಮತ್ತು ‘ಥಮಾ’ ಬಿಟ್ಟು) ಆದರೆ ಇತ್ತೀಚೆಗಷ್ಟೆ ಮದುವೆ ಆದ ರಶ್ಮಿಕಾ ಇನ್ನು ಮುಂದೆ ಹೆಚ್ಚು-ಹೆಚ್ಚು ಮಹಿಳಾ ಪ್ರಧಾನ ಮತ್ತು ತಮ್ಮ ನಟನಾ ಕೌಶಲಕ್ಕೆ ಸವಾಲೆನಿಸುವ ಪಾತ್ರಗಳಲ್ಲಿ ನಟಿಸುವ ಉತ್ಸುಕತೆ ತೋರುತ್ತಿದ್ದಾರೆ. ಇದೀಗ ರಶ್ಮಿಕಾಗೆ ಬಹಳ ಭಾರತದ ಸಂಗೀತ ಕ್ಷೇತ್ರದ ಪ್ರಾತಃ ಸ್ಮರಣೀಯ ಗಾಯಕಿಯೊಬ್ಬರ ಜೀವನ ಆಧರಿತ ಸಿನಿಮಾನಲ್ಲಿ ನಟಿಸುವ ಅವಕಾಶ ಅರಸಿ ಬಂದದೆ. ಈ ಪಾತ್ರ ಮತ್ತೊಬ್ಬ ಸ್ಟಾರ್ ನಟಿಗೆ ಫಿಕ್ಸ್ ಆಗಿತ್ತು. ಅವರ ಕೈಯಿಂದ ಜಾರಿ ರಶ್ಮಿಕಾ ಕೈಗೆ ಬಿದ್ದಿದೆ ಸಿನಿಮಾ. ಯಾವುದು ಆ ಸಿನಿಮಾ?

ಖ್ಯಾತ ಕರ್ನಾಟಕ ಸಂಗೀತ ಗಾಯಕಿ ಎಂಎಸ್ ಸುಬ್ಬುಲಕ್ಷ್ಮಿ ಅವರ ಬಯೋಪಿಕ್ ಬರಲಿದೆ ಎಂದು ಸುದ್ದಿ ಹರಡಿ ಸುಮಾರು ತಿಂಗಳುಗಳೇ ಆಗಿವೆ. ಎಂಎಸ್ ಸುಬ್ಬಲಕ್ಷ್ಮಿ ಪಾತ್ರದಲ್ಲಿ ಖ್ಯಾತ ನಟಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ಇದೇ ಕಾರಣಕ್ಕೆ ಅವರು ಸಂಗೀತಾಭ್ಯಾಸವನ್ನೂ ಸಹ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಸಾಯಿ ಲಕ್ಷ್ಮಿ ಹಾಡು ಹಾಡುತ್ತಿರುವ ಚಿತ್ರಗಳು ಸಹ ಹರಿದಾಡಿದ್ದವು. ಆದರೆ ಇದೀಗ ಬಂದಿರುವ ಸುದ್ದಿಯೆಂದರೆ ಆ ಸಿನಿಮಾದ ನಾಯಕಿ ಪಾತ್ರ ರಶ್ಮಿಕಾ ಮಂದಣ್ಣ ಅವರಿಗೆ ದೊರಕಿದೆಯಂತೆ.

ಈ ಹಿಂದೆ, ‘ಜರ್ಸಿ’ ಹೆಸರಿನ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶನ ಮಾಡಿದ್ದ ಗೌತಮ್ ತಿನ್ನನೂರಿ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಸಾಯಿ ಪಲ್ಲವಿ ಮತ್ತು ಒಂದು ಸಮಯದಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ, ಈಗ ಹೊರಬಿದ್ದಿರುವ ಮಾಹಿತಿಯಂತ ರಶ್ಮಿಕಾ ಮಂದಣ್ಣ ಅವರಿಗೆ ಎಂಎಸ್ ಸುಬ್ಬಲಕ್ಷ್ಮಿ ಅವರ ಪಾತ್ರ ದೊರೆತಿದೆ. ಮಾತ್ರವಲ್ಲದೆ ರಶ್ಮಿಕಾ ಅವರ ಫೋಟೊಶೂಟ್ ಸಹ ಆಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಕಾಕ್‌ಟೇಲ್ 2’ ಚಿತ್ರದಲ್ಲಿ ಸಲಿಂಗಿಗಳ ಪಾತ್ರ ಮಾಡಿದ್ದಾರಾ ರಶ್ಮಿಕಾ ಮಂದಣ್ಣ, ಕೃತಿ ಸನನ್?

ಇತ್ತೀಚೆಗಷ್ಟೇ ರಶ್ಮಿಕಾ ಅವರ ನಿವಾಸದಲ್ಲಿ ಲುಕ್ ಟೆಸ್ಟ್ ಕೂಡ ನಡೆದಿದ್ದು, ಪ್ರಖ್ಯಾತ ಕಾಸ್ಟ್ಯೂಮ್ ಡಿಸೈನರ್ ನೀರಜಾ ಕೋನಾ ಅವರು ಈ ಲುಕ್ ಟೆಸ್ಟ್‌ಗಾಗಿ ವಿಶೇಷವಾದ ಉಡುಪುಗಳನ್ನು ವಿನ್ಯಾಸಗೊಳಿಸಿದ್ದರು ಎನ್ನಲಾಗಿದೆ. ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಚಿತ್ರತಂಡ ರೆಡಿಯಾಗಿದ್ದು, ರಶ್ಮಿಕಾ ಪಾಲಿಗಂತೂ ಇದು ಬಹು ಸವಾಲಿನ ಪಾತ್ರ ಆಗಲಿದೆ.

ಸಿನಿಮಾದ ಕೆಲಸಗಳು ಅತ್ಯಂತ ವೇಗವಾಗಿ ಮತ್ತು ವ್ಯವಸ್ಥಿತವಾಗಿ ಸಾಗುತ್ತಿದ್ದು. ಮುಂಬರುವ ವಾರಗಳಲ್ಲಿ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಗೌತಮ್ ತಿನ್ನನೂರಿ ಜೊತೆ ಮತ್ತೊಮ್ಮೆ ಕೈಜೋಡಿಸಲಿದ್ದಾರೆ. ರಶ್ಮಿಕಾ ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮತ್ತೊಂದು ಪ್ರಮುಖ ಸಿನಿಮಾ ಅವರ ಬತ್ತಳಿಕೆ ಸೇರಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us