‘ದಳಪತಿ’ ವಿಜಯ್ 66ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ? ಬಾಲಿವುಡ್​ ನಟಿಯರನ್ನು ಹಿಂದಿಕ್ಕಿದ ಕೊಡಗಿನ ಹುಡುಗಿ

| Updated By: ರಾಜೇಶ್ ದುಗ್ಗುಮನೆ

Updated on: Mar 08, 2022 | 8:12 PM

ವಿಜಯ್​ ಸದ್ಯ ‘ಬೀಸ್ಟ್’ ಸಿನಿಮಾದ ಕೊನೆಯ ಹಂತದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.ಈಗ ಅವರ 66ನೇ ಸಿನಿಮಾ ಬಗ್ಗೆ ಟಾಕ್​ ಶುರುವಾಗಿದೆ. ಯುಗಾದಿ ನಿಮಿತ್ತ ಏಪ್ರಿಲ್​ 2ರಂದು ಸಿನಿಮಾ ಸೆಟ್ಟೇರಲಿದೆ.  

‘ದಳಪತಿ’ ವಿಜಯ್ 66ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ? ಬಾಲಿವುಡ್​ ನಟಿಯರನ್ನು ಹಿಂದಿಕ್ಕಿದ ಕೊಡಗಿನ ಹುಡುಗಿ
ರಶ್ಮಿಕಾ-ವಿಜಯ್
Follow us on

ರಶ್ಮಿಕಾ ಮಂದಣ್ಣ ಅವರು (Rashmika Mandanna) ದಕ್ಷಿಣ ಭಾರತ ಹಾಗೂ ಬಾಲಿವುಡ್​ನಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ. ರಶ್ಮಿಕಾ ಕಾಲ್​ಶೀಟ್​ ಪಡೆಯೋಕೆ ಸ್ಟಾರ್ ನಿರ್ಮಾಪಕರು ಕಾದು ಕೂತಿದ್ದಾರೆ. ಈ ಮಧ್ಯೆ ರಶ್ಮಿಕಾ ಹಲವು ಸ್ಕ್ರಿಪ್ಟ್​ಗಳನ್ನು​ ಕೇಳುತ್ತಿದ್ದಾರೆ. ತುಂಬಾನೇ ಲೆಕ್ಕಾಚಾರ ಹಾಕಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಕಾಲಿವುಡ್ (Kollywood)​ ಅಂಗಳದಿಂದ ಹೊಸ ಸುದ್ದಿಯೊಂದು ಹರಿದಾಡಿದೆ. ದಳಪತಿ ವಿಜಯ್ (Thalapathy Vijay) ನಟನೆಯ 66ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ ಎನ್ನುವ ವಿಚಾರ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗೋದು ಮಾತ್ರ ಬಾಕಿ ಉಳಿದಿದೆ ಎನ್ನಲಾಗಿದೆ.

ವಿಜಯ್​ ಸದ್ಯ ‘ಬೀಸ್ಟ್’ ಸಿನಿಮಾದ ಕೊನೆಯ ಹಂತದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ನೆಲ್ಸನ್​ ದಿಲೀಪ್​ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಸನ್​ ಪಿಕ್ಚರ್ಸ್​ ಬಂಡವಾಳ ಹೂಡಿದೆ. ಈ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ. ಈಗ ಅವರ 66ನೇ ಸಿನಿಮಾ ಬಗ್ಗೆ ಟಾಕ್​ ಶುರುವಾಗಿದೆ. ಯುಗಾದಿ ನಿಮಿತ್ತ ಏಪ್ರಿಲ್​ 2ರಂದು ಸಿನಿಮಾ ಸೆಟ್ಟೇರಲಿದೆ.

‘ದಳಪತಿ 66’ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ನಿರ್ಮಾಪಕ ದಿಲ್​ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆರಂಭದಲ್ಲಿ ಪೂಜಾ ಹೆಗ್ಡೆ ಹಾಗೂ ಕಿಯಾರಾ ಅಡ್ವಾಣಿ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಆಲೋಚನೆ ಚಿತ್ರತಂಡದ್ದಾಗಿತ್ತು. ಕೊನೆಯ ಸಮಯದಲ್ಲಿ ರಶ್ಮಿಕಾ ಅವರನ್ನು ಚಿತ್ರತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಯುಗಾದಿ ದಿನ ಈ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ.

ರಶ್ಮಿಕಾ ಅವರು ಈ ಮೊದಲಿನಿಂದಲೂ ವಿಜಯ್​ ಅಭಿಮಾನಿಗಳಿಗೆ ಹತ್ತಿರ ಆಗೋಕೆ ಸಾಕಷ್ಟು ಪ್ರಯತ್ನಿಸಿದ್ದರು. ಸಾಕಷ್ಟು ಸಂದರ್ಶನಗಳಲ್ಲಿ ತಾವು ವಿಜಯ್ ಅಭಿಮಾನಿ ಎಂದು ಹೇಳಿಕೊಂಡಿದ್ದರು. ಕೊನೆಗೂ ಅವರ ಆಸೆ ಈಡೇರುತ್ತಿದೆ. ಈ ಸಿನಿಮಾ ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲಿ ಸಿದ್ಧವಾಗುತ್ತಿರುವುದರಿಂದ ರಶ್ಮಿಕಾ ಹೆಚ್ಚು ಸಂಭಾವನೆ ಪಡೆದುಕೊಳ್ಳಬಹುದು.

ಹಿಂದಿಯ ‘ಮಿಷನ್​ ಮಜ್ನು’ ಹಾಗೂ ‘ಗುಡ್​ ಬೈ’ ಸಿನಿಮಾ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ‘ಪುಷ್ಪ 2’ ಚಿತ್ರದ ಶೂಟಿಂಗ್​ನಲ್ಲೂ ಅವರು ಶೀಘ್ರವೇ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ರಿಲೀಸ್​ ಆದ ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಓಪನಿಂಗ್​ ಪಡೆದುಕೊಂಡಿಲ್ಲ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಿರುಮಲ ಕಿಶೋರ್​ ನಿರ್ದೇಶನ ಮಾಡಿರುವ ಈ ಸಿನಿಮಾಗೆ  ಎಸ್​ಎಲ್​ವಿ ಸಿನಿಮಾಸ್​ ಸಂಸ್ಥೆ ಬಂಡವಾಳ ಹೂಡಿದೆ.

ಇದನ್ನೂ ಓದಿ: ‘ನಾನು ಪ್ಯಾನ್​ ಇಂಡಿಯಾ ನಟಿ ಆಗಬೇಕು’; ರಶ್ಮಿಕಾ ಮಂದಣ್ಣ ಹೀಗೆ ಹೇಳಲು ಇದೆ ಒಂದು ಮುಖ್ಯ ಕಾರಣ

ರಶ್ಮಿಕಾ ಮಂದಣ್ಣ, ಪೂಜಾ ಬಳಿಕ ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡ ಮತ್ತೋರ್ವ ಕನ್ನಡದ ನಟಿ