ಕೆಲವು ಕಲಾವಿದರು ದೊಡ್ಡ ಸ್ಟಾರ್ ಆದ ಬಳಿಕ ಅವರ ಬಗ್ಗೆ ಜನರಿಗೆ ತಿಳಿಯುತ್ತದೆ. ಯಶಸ್ಸು ಸಿಗುವ ಮೊದಲೇ ಕೆಲವು ಸ್ಟಾರ್ಗಳು ಸಾಕಷ್ಟು ಶ್ರೀಮಂತರಾಗಿರುತ್ತಾರೆ. ರಣವೀರ್ ಸಿಂಗ್ (Ranveer Singh), ಭೂಮಿ ಪಡ್ನೇಕರ್, ತಾನ್ಯಾ ಹೋಪ್ ಸೇರಿ ಅನೇಕರು ಈ ಸಾಲಿನಲ್ಲಿದ್ದಾರೆ. ಈ ಸ್ಟಾರ್ ಹೀರೋಗಳ ಬ್ಯಾಕ್ಗ್ರೌಂಡ್ ಬಗ್ಗೆ ಇಲ್ಲಿದೆ ವಿವರ.
ರಣವೀರ್ ಸಿಂಗ್ ಅವರು ಈಗ ದೊಡ್ಡ ಸ್ಟಾರ್. ನೂರಾರು ಕೋಟಿ ರೂಪಾಯಿ ಆಸ್ತಿಯ ಒಡೆಯ. ಅವರು ಚಿತ್ರರಂಗಕ್ಕೆ ಬರೋ ಮೊದಲೇ ಶ್ರೀಮಂತರಾಗಿದ್ದರು. ರಣವೀರ್ ಸಿಂಗ್ ತಂದೆ ಜಗಜೀತ್ ಸಿಂಗ್ ಭವಾನಿ ಅವರು ಸಾಕಷ್ಟು ಶ್ರೀಮಂತರು. ಅವರದ್ದು ಹಲವು ಉದ್ಯಮ ಇದೆ. ಮುಂಬೈನ ಬಾಂದ್ರಾ ಭಾಗದಲ್ಲಿ ಮನೆ ಇದೆ.
ರಶ್ಮಿಕಾ ಮಂದಣ್ಣ ತಂದೆ ಕಾಫಿ ಎಸ್ಟೇಟ್ ಹೊಂದಿದ್ದಾರೆ. ವಿರಾಜಪೇಟೆಯಲ್ಲಿ ಕಲ್ಯಾಣ ಮಂಟಪ ಕೂಡ ಇದೆ. ರಶ್ಮಿಕಾ ತಂದೆಯ ಮನೆಯ ಮೇಲೆ ಐಟಿ ರೇಡ್ ಕೂಡ ಆಗಿತ್ತು. ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದಾರೆ.
ಶಾರ್ವರಿ ವಾಘ್ ಅವರು ಮಹಾರಾಷ್ಟ್ರದ ಮಾಜಿ ಸಿಎಂ ಮನೋಹರ್ ಜೋಶಿ ಮೊಮ್ಮೊಗಳು. ಅವರ ತಂದೆ ಶೈಲೇಶ್ ವಾಗ್ ಅವರು ‘ಡ್ವೆಲ್ ವೆಲ್ ಬಿಲ್ಡರ್ಸ್’ನ ಮಾಲೀಕರು. ಅವರ ತಾಯಿ ನಮ್ರತಾ ಆರ್ಕಿಟೆಕ್ಟರ್.
ನಟಿ ಅದಿತಿ ರಾವ್ ಹೈದರಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರದ್ದು ರಾಯಲ್ ಫ್ಯಾಮಿಲಿ. ಅವರು ತಮಿಳು ನಟ ಸಿದ್ದಾರ್ಥ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಮೂಲಕ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ.
ಅಲಾಯಾ ಅವರ ತಂದೆ ಫರ್ಹಾನ್ ಇಬ್ರಹಾಮ್ ಅವರು ಮುಂಬೈನಲ್ಲಿ ದೊಡ್ಡ ಫರ್ನಿಚರ್ ಬಿಸ್ನೆಸ್ ಹೊಂದಿದ್ದಾರೆ. ಅವರು ಇಂಟೀರಿಯರ್ ಡಿಸೈನರ್ ಕೂಡ ಹೌದು. ಅವರು ಮುಂಬೈನಲ್ಲಿ ತಮ್ಮದೇ ಮನೆ ಹೊಂದಿದ್ದಾರೆ.
ನಟಿ ಸೋನಂ ಕಪೂರ್ ತಂದೆ ಅನಿಲ್ ಕಪೂರ್ ಅವರು ಮಧ್ಯಮ ವರ್ಗದ ಕುಟುಂಬದವರಾಗಿದ್ದರು. ಆ ಬಳಿಕ ಅನಿಲ್ ಕಪೂರ್ ಅವರು ಸಾಕಷ್ಟು ಹಣ ಮಾಡಿದರು.
ನಟಿ ರಾಧಿಕಾ ಮದನ್ ಅವರ ತಂದೆ ‘ನಟರಾಜ್ ಸ್ಟೇಷನರಿ ಪ್ರೈವೇಟ್ ಲಿಮಿಟೆಡ್’ನ ಸದಸ್ಯರಲ್ಲಿ ಒಬ್ಬರು. ಅವರು ಜುಹುದಲ್ಲಿ ಮನೆ ಹೊಂದಿದ್ದಾರೆ. ಗುರಗ್ರಾಮದಲ್ಲಿ ದೊಡ್ಡ ಬಂಗಲೆ ಇದೆ.
ನಟಿ ಭೂಮಿ ಪಡ್ನೇಕರ್ ತಂದೆ ಸತೀಶ್ ಅವರು ಮಹಾರಾಷ್ಟ್ರದಲ್ಲಿ ಶಾಸಕರು ಹಾಗೂ ಸಚಿವರಾಗಿದ್ದರು. ಹಿಂದಿ ಚಿತ್ರರಂಗದಲ್ಲಿ ಭೂಮಿ ಫೇಮಸ್ ಆಗಿದ್ದಾರೆ.
ಇದನ್ನೂ ಓದಿ:ಮುತ್ತಿನ ಮಳೆ ಸುರಿಸಿ ಗಂಡನ ಹುಟ್ಟುಹಬ್ಬ ಆಚರಿಸಿದ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ ಅವರು ಬಾಲಿವುಡ್ನಲ್ಲಿ ಹೆಸರು ಮಾಡಿದ್ದಾರೆ. ಅವರ ತಂದೆ ದೊಡ್ಡ ಉದ್ಯಮ ಹೊಂದಿದ್ದಾರೆ. ರಿಲಾಯನ್ಸ್ ಗ್ರೂಪ್ನ ಜೊತೆ ಆಪ್ತತೆ ಹೊಂದಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರಾ ಬ್ಯಾಕ್ಗ್ರೌಂಡ್ ಕೂಡ ದೊಡ್ಡದಾಗಿದೆ.
ರಿತೇಶ್ ದೇಶ್ಮುಖ್ ಅವರು ನಟನಾಗಿ ಗಮನಸೆಳೆದಿದ್ದಾರೆ. ಅವರ ತಂದೆ ವಿಲಾಸ್ರಾವ್ ದೇಶ್ಮುಖ್ ಮಹಾರಾಷ್ಟ್ರ ಸಿಎಂ ಆಗಿದ್ದರು. ಇದಲ್ಲದೆ ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ನಟಿ ತಾನ್ಯಾ ಹೋಪ್ ಅವರು ಹಲವು ಸಿನಿಮಾ ಮಾಡಿ ಗಮನ ಸೆಳೆದಿದ್ದಾರೆ. ಅವರ ತಂದೆ ರವಿ ಪೂರ್ವಾಂಕರ್ ಅವರು ದೊಡ್ಡ ಉದ್ಯಮಿ. ಪೂರ್ವಾಂಕರ್ ಸಂಸ್ಥೆಯ ಮಾಲೀಕರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ