
ವಿಜಯ್ ದೇವರಕೊಂಡ (Vijay Devarakonda) ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ವಿಚಾರ ಈಗ ಗುಟ್ಟಾಗೇನು ಉಳಿದಿಲ್ಲ. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ಶೀಘ್ರವೇ ಇವರು ಮದುವೆ ಆಗುತ್ತಾರೆ ಎಂದೂ ಹೇಳಲಾಗುತ್ತಿದೆ. ಹೀಗಿರುವಾಗಲೇ ವಿಜಯ್ ಸಹೋದರ ಆನಂದ್ಗಾಗಿ ರಶ್ಮಿಕಾ ಉಚಿತವಾಗಿ ಒಂದು ಕೆಲಸ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆಗುತ್ತಿದೆ. ಅಷ್ಟಕ್ಕೂ ಏನು ಅದು? ಆ ಬಗ್ಗೆ ಇಲ್ಲಿದೆ ವಿವರ.
ಸಾಮಾನ್ಯವಾಗಿ ಎಲ್ಲಾ ಸೆಲೆಬ್ರಿಟಿಗಳು ಯಾವುದೇ ಕೆಲಸವನ್ನು ಉಚಿತವಾಗಿ ಮಾಡಿ ಕೊಡೋದಿಲ್ಲ. ಬೇರೆ ಸಿನಿಮಾ ಪ್ರಮೋಷನ್ ಕೆಲಸಗಳಿಗೆ ಬರಬೇಕು ಎಂದರೆ ಹಣ ಪಡೆಯುತ್ತಾರೆ. ಆದರೆ, ರಶ್ಮಿಕಾ ಅವರು ಆ ರೀತಿ ಮಾಡಿಲ್ಲ. ಆನಂದ್ಗಾಗಿ ಅವರು ಉಚಿತವಾಗಿ ಕೆಲಸ ಮಾಡಿಕೊಟ್ಟಿದ್ದಾರೆ ಎಂದು ವರದಿ ಆಗಿದೆ.
‘ಬೇಬಿ’ ಸಿನಿಮಾದಲ್ಲಿ ನಟಿಸಿದ್ದ ಆನಂದ್ ಹಾಗೂ ವೈಷ್ಣವಿ ಚೈತನ್ಯ ಅವರು ಮತ್ತೆ ಲವ್ಸ್ಟೋರಿ ಕಥೆಯ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಚಿತ್ರಕ್ಕೆ ‘ಪ್ರೊಡಕ್ಷನ್ ನಂಬರ್ 32’ ಎನ್ನುವ ತಾತ್ಕಾಲಿಕ ಟೈಟಲ್ ಇಡಲಾಗಿದೆ. ಈ ಚಿತ್ರ ಮೇ 15ರಂದು ಲಾಂಚ್ ಆಗಿದೆ. ಮುಹೂರ್ತಕ್ಕೆ ಆಗಮಿಸಿದ ರಶ್ಮಿಕಾ ಅವರು ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದಾರೆ.
And it begins for the MOST RELATABLE LOVE STORY 😍@SitharaEnts Production No. 32 takes off with a pooja ceremony full of love ❤️
&
Regular shoot commences this June 🫶🏻Clap by @iamRashmika
Camera Switch On by @ActorSivaji
Script handover by #VenkyAtluri & @kalyanshankar23… pic.twitter.com/POVPgdqhco— Sithara Entertainments (@SitharaEnts) May 15, 2025
ಈ ಚಿತ್ರವನ್ನು ಸಿತಾರಾ ಎಂಟರ್ಟೇನ್ಮೆಂಟ್ ನಿರ್ಮಾಣ ಮಾಡುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳಲಾಗಿದೆ. ತಂಡದವರು ರಶ್ಮಿಕಾಗೆ ಧನ್ಯವಾದ ಹೇಳಿದ್ದಾರೆ. ಆನಂದ್ ಇದ್ದಾನೆ ಎನ್ನುವ ಕಾರಣಕ್ಕೆ ಈ ಚಿತ್ರಕ್ಕೆ ರಶ್ಮಿಕಾ ಕ್ಲ್ಯಾಪ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ವಿಜಯ್ ದೇವರಕೊಂಡಗೆ ಪ್ರೀತಿಯಿಂದ ವಿಜ್ಜು ಎಂದು ಕರೆದು ಬರ್ತ್ಡೇ ವಿಶ್ ತಿಳಿಸಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಹಾಗೂ ಆನಂದ್ ಮಧ್ಯೆಯೂ ಒಳ್ಳೆಯ ಬಾಂಧವ್ಯ ಬೆಳೆದಿದೆ. ವಿಜಯ್ನ ರಶ್ಮಿಕಾ ಮದುವೆ ಆದರೆ ಆಗ ನಟಿಗೆ ಆನಂದ್ ಭಾಮೈದ ಆಗುತ್ತಾರೆ. ಈ ಕಾರಣಕ್ಕೆ ಆನಂದ್ ಅವರ ಅನೇಕ ಸಿನಿಮಾಗಳ ಪ್ರಚಾರ ಕಾರ್ಯಕ್ರಮದಲ್ಲಿ ರಶ್ಮಿಕಾ ಭಾಗಿ ಆಗಿದ್ದರು. ಆದಿತ್ಯ ಹಸನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜನವರಿ 15ರಂದು ಸಿನಿಮಾ ಘೋಷಣೆ ಆಯಿತು. ಈಗ ಚಿತ್ರ ಸೆಟ್ಟೇರಿದೆ. ಹೇಶಮ್ ಅಬ್ದುಲ್ ವಹಾಬ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.