ರಶ್ಮಿಕಾ ಮಂದಣ್ಣರ ಹೊಸ ಸಿನಿಮಾ ಹಿಂದಿ ಸಿನಿಮಾ ಟ್ರೈಲರ್ ರಿಲೀಸ್

Rashmika Mandanna: 14 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ನಟನೆಯ ‘ಕಾಕ್​​ಟೇಲ್’ ಸಿನಿಮಾದ ಕತಾ ಮಾದರಿಯನ್ನೇ ಇರಿಸಿಕೊಂಡಿರುವ ‘ಕಾಕ್​​ಟೇಲ್ 2’ ಸಿನಿಮಾ ಹೊಸ ಪ್ರೇಕ್ಷಕರಿಗೆ ಮುದವಾಗುವ ರೀತಿಯಲ್ಲಿ ಪ್ರೇಮ ಹಾಗೂ ಗೆಳೆತನದ ಮಹತ್ವ ಸಾರುವ ಉದ್ದೇಶ ಇರಿಸಿಕೊಂಡು ಚಿತ್ರಮಂದಿರಗಳಿಗೆ ಬರುತ್ತಿದೆ.

ರಶ್ಮಿಕಾ ಮಂದಣ್ಣರ ಹೊಸ ಸಿನಿಮಾ ಹಿಂದಿ ಸಿನಿಮಾ ಟ್ರೈಲರ್ ರಿಲೀಸ್
Cocktail 2

Updated on: Jun 02, 2026 | 7:15 PM

ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ನಟಿಸಿರುವ ತ್ರಿಕೋನ ಪ್ರೇಮಕತೆಯುಳ್ಳ ಹೊಸ ಸಿನಿಮಾ ‘ಕಾಕ್​​ಟೇಲ್ 2’ನ ಟ್ರೈಲರ್ ಇಂದು (ಜೂನ್ 2) ಬಿಡುಗಡೆ ಆಗಿದೆ. 14 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ನಟನೆಯ ‘ಕಾಕ್​​ಟೇಲ್’ ಸಿನಿಮಾದ ಕತಾ ಮಾದರಿಯನ್ನೇ ಇರಿಸಿಕೊಂಡಿರುವ ‘ಕಾಕ್​​ಟೇಲ್ 2’ ಸಿನಿಮಾ ಹೊಸ ಪ್ರೇಕ್ಷಕರಿಗೆ ಮುದವಾಗುವ ರೀತಿಯಲ್ಲಿ ಪ್ರೇಮ ಹಾಗೂ ಗೆಳೆತನದ ಮಹತ್ವ ಸಾರುವ ಉದ್ದೇಶ ಇರಿಸಿಕೊಂಡು ಚಿತ್ರಮಂದಿರಗಳಿಗೆ ಬರುತ್ತಿದೆ.

2012 ರಲ್ಲಿ ಬಿಡುಗಡೆ ಆಗಿದ್ದ ‘ಕಾಕ್​​ಟೇಲ್’ ಸಿನಿಮಾನಲ್ಲಿ ಮಾಡರ್ನ್ ಯುವತಿ, ಸಾಂಪ್ರದಾಯಿಕ ಯುವತಿಯ ನಡುವೆ ಒಬ್ಬಾಕೆಯನ್ನು ನಾಯಕ ಸೈಫ್ ಅಲಿ ಖಾನ್ ಆಯ್ಕೆ ಮಾಡಬೇಕಿತ್ತು. ಈ ಹೊಸ ಕಾಕ್​​ಟೇಲ್​ ನಲ್ಲಿಯೂ ಕತೆ ತುಸು ಹಾಗೆಯೇ ಇದೆ. ಇಲ್ಲಿ ಕೃತಿ ಸನೋನ್ ಮಾಡರ್ನ್ ಹುಡುಗಿ ಅಲಿ ಆಗಿದ್ದರೆ ರಶ್ಮಿಕಾ ಮಂದಣ್ಣ ತುಸು ಸಾಂಪ್ರದಾಯಿಕ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಶಾಹಿದ್ ಕಪೂರ್ ಯಾರೊಟ್ಟಿಗೆ ಮದುವೆ ಆಗಬೇಕು ಎಂದು ಆಯ್ಕೆ ಕೊಳ್ಳಬೇಕಿದೆ.

ಇದನ್ನೂ ಓದಿ:‘ಪುಷ್ಪ’ ತೆರಳಿದ್ದ ಜಾಗಕ್ಕೆ ಹೋದ ನಟಿ ರಶ್ಮಿಕಾ ಮಂದಣ್ಣ

ಸಿನಿಮಾದ ಟ್ರೈಲರ್​​ನಲ್ಲಿ ತೋರಿಸಿರುವಂತೆ ‘ಕಾಕ್​​ಟೇಲ್ 2’ ಸಿನಿಮಾವು ಒಂದೊಳ್ಳೆ ಹಾಸ್ಯಭರಿತ ಪ್ರೇಮಕತೆಯಾಗಿದ್ದು, ಸಿನಿಮಾನಲ್ಲಿ ಹಾಸ್ಯದ ಜೊತೆಗೆ ಎಮೋಷನ್ಸ್ ಸಹ ಇದೆ. ಜೊತೆಗೆ ಒಂದು ಸುಂದರ ಪ್ರಯಾಣವೂ ಇದೆ. ಗೆಳೆತನ ಮತ್ತು ಪ್ರೀತಿಯ ಬಗ್ಗೆ ಸಂದೇಶವನ್ನು ‘ಕಾಕ್​​ಟೇಲ್ 2’ ಸಿನಿಮಾ ಹೊಂದಿದೆ. ಸಿನಿಮಾನಲ್ಲಿ ಕೃತಿ ಸನೋನ್ ಸಖತ್ ಗ್ಲಾಮರಸ್ ಆಗಿ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಕಂಡು ಬರುತ್ತಿದೆ. ಹಾಗೆಯೇ ರಶ್ಮಿಕಾ ಸಹ ತುಸು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಎಮೋಷನಲ್ ದೃಶ್ಯಗಳು ಸಹ ರಶ್ಮಿಕಾ ಅವರಿಗೆ ಇದೆ.

Cocktail 2 Official Trailer | Shahid Kapoor, Kriti Sanon, Rashmika Mandanna | In Cinemas 19th June

2012ರ ‘ಕಾಕ್​​ಟೇಲ್’ ಸಿನಿಮಾನಲ್ಲಿದ್ದ ಬ್ಲಾಕ್ ಬಸ್ಟರ್ ಹಾಡಾದ ‘ತುಹು ದಿನ್ ಜಲೆ’ ಹಾಡು ‘ಕಾಕ್​​ಟೇಲ್ 2’ ಸಿನಿಮಾನಲ್ಲಿಯೂ ಉಳಿಸಿಕೊಳ್ಳಲಾಗಿದೆ. ಸಿನಿಮಾವನ್ನು ಹೋಮಿ ಅದಾಜಾನಿಯಾ ನಿರ್ದೇಶನ ಮಾಡಿದ್ದಾರೆ. ಲವ್ ರಂಜನ್ ಈ ಸಿನಿಮಾಕ್ಕೆ ಕತೆ ಮತ್ತು ಚಿತ್ರಕತೆ ಬರೆದಿದ್ದಾರೆ. ನಿರ್ಮಾಣ ಮಾಡಿರುವುದು ದಿನೇಶ್ ವಿಜನ್. ಸಿನಿಮಾ ಜೂನ್ 19ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us