ಬಾಲಿವುಡ್ ಸ್ಟಾರ್ ನಿರ್ದೇಶಕನ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್

ಮಲಯಾಳಂನಲ್ಲಿ ಸಿದ್ಧವಾದ 'ದೃಶ್ಯಂ' ಸರಣಿ ಹಿಂದಿಗೂ ರಿಮೇಕ್ ಆಗಿದೆ. ಮೂರನೇ ಭಾಗಕ್ಕೆ ಕನ್ನಡಿಗ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ಇದು 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರು ಅವರ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು. ಹಿಂದಿ 'ದೃಶ್ಯಂ 3' ಮೂಲ ಮಲಯಾಳಂ ಆವೃತ್ತಿಗಿಂತ ವಿಭಿನ್ನವಾಗಿ 'ಫ್ಯಾಮಿಲಿ ಥ್ರಿಲ್ಲರ್' ಆಗಿರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಬಾಲಿವುಡ್ ಸ್ಟಾರ್ ನಿರ್ದೇಶಕನ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್
ರವಿ ಬಸ್ರೂರು

Updated on: Jun 06, 2026 | 12:22 PM

ಮಲಯಾಳಂನಲ್ಲಿ ಸಿದ್ಧವಾದ ‘ದೃಶ್ಯಂ’  (Drishyam) ಸರಣಿ ಅದೇ ಹೆಸರಲ್ಲಿ ಹಿಂದಿಗೂ ರಿಮೇಕ್ ಆಗಿದೆ. ಈಗಾಗಲೇ ಎರಡು ಭಾಗ ತೆರೆಗೆ ಬಂದಿದ್ದು, ಮೂರನೇ ಭಾಗದ ಶೂಟಿಂಗ್ ಮುಕ್ತಾಯಗೊಂಡಿದೆ. ಈ ವರ್ಷದ ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಬಾರಿ ಈ ಚಿತ್ರದಲ್ಲಿ ಕನ್ನಡಿಗರು ಹೆಮ್ಮೆಪಡುವಂತಹ ದೊಡ್ಡ ಸುದ್ದಿಯೊಂದಿದೆ. ಹೌದು, ಭಾರತೀಯ ಚಿತ್ರರಂಗದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್, ಕನ್ನಡಿಗ ರವಿ ಬಸ್ರೂರು ಅವರಿಗೆ ‘ದೃಶ್ಯಂ 3’ ಚಿತ್ರಕ್ಕೆ ಸಂಗೀತ ನೀಡುವ ಆಫರ್ ಸಿಕ್ಕಿದೆ.

ವಿಶೇಷವೆಂದರೆ, ‘ದೃಶ್ಯಂ’ ಸರಣಿಯ ಹಿಂದಿನ ಎರಡು ಭಾಗಗಳಿಗೆ ಬೇರೆ ಬೇರೆ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದರು. ಮೊದಲ ಭಾಗಕ್ಕೆ ವಿಶಾಲ್ ಭಾರದ್ವಾಜ್ ಹಾಗೂ ಎರಡನೇ ಭಾಗಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರು. ಆದರೆ, ಈಗ ‘ದೃಶ್ಯಂ 3’ ಚಿತ್ರಕ್ಕೆ ಸಂಗೀತ ನೀಡುವ ಜವಾಬ್ದಾರಿಯನ್ನು ನಿರ್ಮಾಪಕರು ರವಿ ಬಸ್ರೂರು ಹೆಗಲಿಗೆ ಹೊರಿಸಿದ್ದಾರೆ.

ಅಜಯ್ ದೇವಗನ್ ಅವರೊಂದಿಗೆ ಈಗಾಗಲೇ ‘ಭೋಲಾ’ ಮತ್ತು ‘ಸಿಂಗಂ ಅಗೇನ್’ ಚಿತ್ರಗಳಲ್ಲಿ ಕೆಲಸ ಮಾಡಿರುವ ರವಿ ಬಸ್ರೂರು, ಈಗ ‘ದೃಶ್ಯಂ 3’ ಚಿತ್ರಕ್ಕೆ ಟ್ಯೂನ್ ಹಾಕುತ್ತಿರುವುದು ಅವರ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲಾಗಿದೆ.

ಇದನ್ನೂ ಓದಿ: ಬುಧವಾರವೂ ಜಾರ್ಜ್‌ಕುಟ್ಟಿ ಕಮಾಲ್; 7 ದಿನಕ್ಕೆ ‘ದೃಶ್ಯಂ 3’ ಗಳಿಕೆ ಎಷ್ಟು?

ಯಾವುದೇ ಗಾಡ್‌ಫಾದರ್ ಇಲ್ಲದೆ, ಕರಾವಳಿಯ ಸಣ್ಣ ಹಳ್ಳಿಯಿಂದ ಬಂದು ಇಂದು ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿರುವ ರವಿ ಬಸ್ರೂರು ಅವರ ಜರ್ನಿ ನಿಜಕ್ಕೂ ಸ್ಪೂರ್ತಿದಾಯಕ. ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡ ಇವರು, ಮುಂದೆ ‘ಕೆಜಿಎಫ್’ ಫ್ರಾಂಚೈಸಿ ಮೂಲಕ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದರು. ಆ ಸಿನಿಮಾದ ಇವರ ಬಿಜಿಎಂ ಇಂಟರ್ನ್ಯಾಷನಲ್ ಮಟ್ಟದಲ್ಲಿ ಸೌಂಡ್ ಮಾಡಿತು. ಈಗ ರವಿ ಬಸ್ರೂರು ಇಂದು ಪ್ಯಾನ್-ಇಂಡಿಯಾ ಮಟ್ಟದ ಮೋಸ್ಟ್ ವಾಂಟೆಡ್ ಮ್ಯೂಸಿಕ್ ಡೈರೆಕ್ಟರ್ ಆಗಿ ಬೆಳೆದು ನಿಂತಿದ್ದಾರೆ.

ಮಲಯಾಳಂ ಕಿಂತ ವಿಭಿನ್ನವಾಗಿರಲಿದೆ ಹಿಂದಿ ‘ದೃಶ್ಯಂ 3’

ಕಳೆದ ಮೇ 21 ರಂದು ಬಿಡುಗಡೆಯಾದ ಮೂಲ ಮಲಯಾಳಂ ‘ದೃಶ್ಯಂ 3’ ಚಿತ್ರಕ್ಕೂ, ಹಿಂದಿ ಆವೃತ್ತಿಗೂ ಸಾಕಷ್ಟು ವ್ಯತ್ಯಾಸ ಇರಲಿದೆ ಎಂದು ತಿಳಿದುಬಂದಿದೆ. ಹಿಂದಿನ ಎರಡು ಭಾಗಗಳು ಒರಿಜಿನಲ್ ಕಥೆಯನ್ನೇ ಹೋಲುತ್ತಿದ್ದವು, ಆದರೆ ಈ ಬಾರಿ ಹಿಂದಿ ಪ್ರೇಕ್ಷಕರಿಗೆ ತಕ್ಕಂತೆ ಕಥೆ ಮತ್ತು ಟ್ವಿಸ್ಟ್‌ಗಳಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಮಲಯಾಳಂ ಚಿತ್ರ ಎಮೋಷನಲ್ ಫ್ಯಾಮಿಲಿ ಡ್ರಾಮಾವಾಗಿದ್ದರೆ, ಅಜಯ್ ದೇವಗನ್ ನಟನೆಯ ಹಿಂದಿ ಚಿತ್ರ ಪಕ್ಕಾ ‘ಫ್ಯಾಮಿಲಿ ಥ್ರಿಲ್ಲರ್’ ಆಗಿರಲಿದೆ ಎಂದು ನಿರ್ದೇಶಕ ಅಭಿಷೇಕ್ ಪಾಠಕ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us