
ಭಾರತ ವಿಶ್ವಕಪ್ (Wrold Cup 2023) ಗೆಲ್ಲುವ ಹಾದಿಯಲ್ಲಿದೆ. ಸೆಮಿಫೈನಲ್ ಪಂದ್ಯದಲ್ಲಿ ದೊಡ್ಡ ಗುರಿಯನ್ನೇ ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ ನೀಡಿದೆ. ಈ ಬಾರಿ ಭಾರತ ವಿಶ್ವಕಪ್ ಗೆಲ್ಲುವುದು ಪಕ್ಕಾ ಎಂದು ಹಲವು ಕ್ರಿಕೆಟ್ ವಿಶ್ಲೇಷಕರು ಈಗಾಗಲೇ ಅಭಿಪ್ರಾಯ ತಿಳಿಸಿದ್ದಾರೆ. ಈ ನಡುವೆ ತೆಲುಗು ನಟಿಯೊಬ್ಬಾಕೆ ಭಾರತ ವಿಶ್ವಕಪ್ ಗೆದ್ದರೆ ತಾವು ಬೆತ್ತಲಾಗಿ ವಿಶಾಖಪಟ್ಟಣದ ಬೀಚ್ನಲ್ಲಿ ಓಡಾಡುವುದಾಗಿ ಹೇಳಿದ್ದಾರೆ.
ನಂತರ ಮತ್ತೊಂದು ಫೊಸ್ಟ್ನಲ್ಲಿ ”ಧರ್ಮದ ಕಾರಣಕ್ಕೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಗೆಲ್ಲಲಿ ಎಂದು ಕೋರಿಕೊಳ್ಳುತ್ತಿದ್ದವರು ಸಹ ಈಗ ನನ್ನ ಘೋಷಣೆ ನಂತರ ಭಾರತ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದ್ದಾರೆ” ಎಂದಿದ್ದಾರೆ.
ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆ ಎಂದು ನಟಿಯರು ಹೇಳುವುದು ಇದು ಹೊಸತೇನೂ ಅಲ್ಲ. ಗ್ಲಾಮರಸ್ ಪಾತ್ರಗಳ ಮೂಲಕವೇ ಜನಪ್ರಿಯತೆ ಗಳಿಸಿರುವ ನಟಿ ಪೂನಂ ಪಾಂಡೆ ಮೊದಲ ಬಾರಿ ಹೀಗೊಂದು ಹೇಳಿಕೆ ನೀಡಿದ್ದರು. ಭಾರತ 2013ರ ವಿಶ್ವಕಪ್ ಆಡುವ ಸಮಯದಲ್ಲಿ, ‘ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುವೆ’ ಎಂದು ಹೇಳಿಕೆ ನೀಡಿದ್ದರು. ಪೂನಂರ ಈ ಹೇಳಿಗೆ ತೀವ್ರ ವಿರೋಧ ಆಗ ವ್ಯಕ್ತವಾಗಿತ್ತು.
ಇದನ್ನೂ ಓದಿ:ಬಹುತೇಕ ಬೆತ್ತಲೆಯಾಗಿ ಬಂದು ಒಂದೇ ಕೈಯಲ್ಲಿ ಮಾನ ಮುಚ್ಚಿಕೊಂಡ ನಟಿ ಉರ್ಫಿ ಜಾವೇದ್
ಈಗ ತೆಲುಗು ನಟಿ ರೇಖಾ ಬೋಜ್ ಅವರು, ಈ ಬಾರಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಚಾಂಪಿಯನ್ ಆದರೆ ನಾನು ವಿಶಾಖಪಟ್ಟಣದ ಬೀಚ್ನಲ್ಲಿ ಬೆತ್ತಲೆಯಾಗಿ ಓಡಾಡುತ್ತೇನೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿಯ ಪೋಸ್ಟ್ಗೆ ಹಲವಾರು ಪ್ರತಿಕ್ರಿಯೆಗಳು ಬಂದಿದ್ದು, ಹಲವರು ಪೋಸ್ಟ್ ಅನ್ನು ಖಂಡಿಸಿದ್ದಾರೆ. ಇನ್ನು ಕೆಲವರು ಫೈನಲ್ ಪಂದ್ಯವನ್ನು ವೈಜಾಗ್ ಬೀಚ್ನಲ್ಲಿಯೇ ನಿಂತು ವೀಕ್ಷಿಸುತ್ತೇವೆ ಎಂದು ಕೀಟಲೆ ಮಾಡಿದ್ದಾರೆ.
ರೇಖಾ ಬೋಜ್, ತೆಲುಗಿನ ನಟಿ. ಮಾಂಗಲ್ಯಂ’, ‘ಸ್ವಾತಿ ಚಿನುಕು’, ‘ರಂಗೀಲಾ’, ‘ಕಾಲಾಯ ತಸ್ಮಾಯ ನಾಮಃ’ ಸೇರಿದಂತೆ ತೆಲುಗಿನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಚ್ಚಿನ ಅವಕಾಶಗಳು ಸಿಗದೇ ರೋಸಿ ಹೋದಂತಾಗಿರುವ ರೇಖಾ, ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ