‘ರೆಟ್ರೋ’ ಸಿನಿಮಾದ ಲಾಭದಲ್ಲಿ 10 ಕೋಟಿ ರೂಪಾಯಿ ದಾನ ಮಾಡಿದ ನಟ ಸೂರ್ಯ

ನಟ ಸೂರ್ಯ ಅವರು ಬಡ ಮಕ್ಕಳ ಶಿಕ್ಷಣಕ್ಕಾಗಿ ಬರೋಬ್ಬರಿ 10 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚಿಗೆ ವ್ಯಕ್ತಪಡಿಸಲಾಗುತ್ತಿದೆ. ‘ರೆಟ್ರೋ’ ಸಿನಿಮಾದಿಂದ ಬಂದ ಲಾಭದಲ್ಲಿ ಅವರು ಈ ಜನಪರ ಕಾರ್ಯ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ರೆಟ್ರೋ’ ಸಿನಿಮಾದ ಲಾಭದಲ್ಲಿ 10 ಕೋಟಿ ರೂಪಾಯಿ ದಾನ ಮಾಡಿದ ನಟ ಸೂರ್ಯ
Suriya Donates Rs 10 Cr

Updated on: May 09, 2025 | 7:34 PM

ಕಾಲಿವುಡ್ ನಟ ಸೂರ್ಯ (Suriya) ಅವರು ಮೊದಲಿನಿಂದಲೂ ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಆ ಕಾರಣದಿಂದ ಅವರು ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಈಗ ಅದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾ (Retro Movie) ಇತ್ತೀಚೆಗೆ ಬಿಡುಗಡೆ ಆಯಿತು. ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರಕ್ಕೆ ಉತ್ತಮ ಕಲೆಕ್ಷನ್ ಆಗಿದೆ. ಅದರಲ್ಲಿ ಬಂದ ಲಾಭದಲ್ಲಿ ಸೂರ್ಯ ಅವರು ಬರೋಬ್ಬರಿ 10 ಕೋಟಿ ರೂಪಾಯಿಯನ್ನು ದಾನ ಮಾಡಿದ್ದಾರೆ! ಅವರ ಈ ಕಾರ್ಯಕ್ಕೆ ಅಭಿಮಾನಿಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

‘ರೆಟ್ರೋ’ ಸಿನಿಮಾದಲ್ಲಿ ಸೂರ್ಯ ಮತ್ತು ಪೂಜಾ ಹೆಗ್ಡೆ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಕಾರ್ತಿಕ್ ಸುಬ್ಬರಾಜು ಅವರು ನಿರ್ದೇಶನ ಮಾಡಿದ್ದಾರೆ. ಸೂರ್ಯ ಅವರು ಈ ಚಿತ್ರದಲ್ಲಿ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಜನರಿಂದ ಸಿಕ್ಕ ಪ್ರೀತಿಗೆ ಸೂರ್ಯ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಹಣವನ್ನು ದಾನ ಮಾಡುವ ಮೂಲಕ ಜನಮೆಚ್ಚುಗೆಗೆ ಸೂರ್ಯ ಪಾತ್ರರಾಗಿದ್ದಾರೆ.

ಇದನ್ನೂ ಓದಿ
ಈಡೇರಲೇ ಇಲ್ಲ ಮುತ್ತಪ್ಪ ರೈ ಬಯೋಪಿಕ್ ಆಸೆ: ವಿವರಿಸಿದ ರವಿ ಶ್ರೀವತ್ಸ
ಸೌರವ್ ಗಂಗೂಲಿ ಜೀವನ ಆಧರಿಸಿದ ಸಿನಿಮಾಕ್ಕೆ ಕೊನೆಗೂ ಸಿಕ್ಕ ನಾಯಕ
ಬಹುನಿರೀಕ್ಷಿತ ಕ್ರಿಕೆಟಿಗನ ಬಯೋಪಿಕ್ ಘೋಷಣೆ, ಯಾರು ಆ ಆಟಗಾರ
ಬರಲಿದೆ ರಜನಿಕಾಂತ್ ಬಯೋಪಿಕ್; ಬಾಲಿವುಡ್ ನಿರ್ಮಾಪಕನ ಬಂಡವಾಳ

ಸೂರ್ಯ ಅವರು ಬಡ ಮಕ್ಕಳಿಗೆ ಶಿಕ್ಷಣ ನೀಡಲು ಆಗರಂ ಫೌಂಡೇಶನ್ ನಡೆಸುತ್ತಿದ್ದಾರೆ. ಈ ಫೌಂಡೇಶನ್​​ಗೆ ಸೂರ್ಯ ಅವರು 10 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ‘ಹಂಚಿಕೊಳ್ಳುವುದರಲ್ಲಿ ದೊಡ್ಡ ಸಂತಸ ಇದೆ. ಜೀವನದಲ್ಲಿ ನಟನಾಗಿ ಗುರುತು ಮತ್ತು ಉದ್ದೇಶವನ್ನು ನೀಡಿದ ಜನರಿಗಾಗಿ ಇದನ್ನು ನೀಡುತ್ತಿದ್ದೇನೆ. ರೆಟ್ರೋ ಸಿನಿಮಾಗೆ ನೀವು ನೀಡಿದ ಬೆಂಬಲದಿಂದ ನನಗೆ ಖುಷಿ ಮತ್ತು ಬಲ ಸಿಕ್ಕಿದೆ’ ಎಂದು ಸೂರ್ಯ ಅವರು ಹೇಳಿದ್ದಾರೆ.

‘ಆಗರಂ ಫೌಂಡೇಶನ್ ಮೂಲಕ ಸಾವಿರಾರು ವಿದ್ಯಾರ್ಥಿಗಳು ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ರೆಟ್ರೋ ಸಿನಿಮಾದಿಂದ ಬಂದ ಲಾಭದಲ್ಲಿ 10 ಕೋಟಿ ರೂಪಾಯಿಯನ್ನು ದಾನ ಮಾಡಲು ನನಗೆ ಹೆಮ್ಮೆ ಎನಿಸುತ್ತಿದೆ. ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ಯುವ ಮನಸ್ಸುಗಳಿಗೆ ಬೆಂಬಲ ನೀಡೋಣ. ಯಾಕೆಂದರೆ, ಶಿಕ್ಷಣವೇ ಆಯುಧ, ಶಿಕ್ಷಣವೇ ರಕ್ಷಣೆ’ ಎಂದಿದ್ದಾರೆ ಸೂರ್ಯ.

ಇದನ್ನೂ ಓದಿ: ಸಿನಿಮಾ ಶೀರ್ಷಿಕೆಗೆ ತಕ್ಕಂತೆ ರೆಟ್ರೋ ಅವತಾರ ತಾಳಿದ ಪೂಜಾ ಹೆಗ್ಡೆ

ಸ್ಟೋನ್ ಬೆಂಚ್ ಕ್ರಿಯೇಷನ್ಸ್ ಸಂಸ್ಥೆಯು ‘ರೆಟ್ರೋ’ ಸಿನಿಮಾವನ್ನು ನಿರ್ಮಿಸಿದೆ. ಸೂರ್ಯ ಅವರು ತಮ್ಮ ‘2ಡಿ ಎಂಟರ್​ಟೇನ್ಮೆಂಟ್’ ಮೂಲಕ ಸಹ-ನಿರ್ಮಾಣ ಮಾಡಿದ್ದಾರೆ. ಈಗ ಅವರು ತಮ್ಮ ಪಾಲಿನ ಲಾಭದ ಹಣದಲ್ಲಿ ದೊಡ್ಡ ಮೊತ್ತವನ್ನು ದೇಣಿಗೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.