AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಟ್​ನಲ್ಲಿ ಮದ್ಯ ಸೇವಸಿ ಸಮಸ್ಯೆ ಸೃಷ್ಟಿಸಿಕೊಂಡಿದ್ದ ನಟಿ ರಿಚಾ

ನಟಿ ರಿಚಾ ಚಡ್ಡ ಮದ್ಯ ಸೇವಿಸಿ ನಟಿಸಲು ಪ್ರಯತ್ನಿಸಿ ತಾವು ಸಮಸ್ಯೆಗೆ ಸಿಲುಕಿಕೊಂಡಿದ್ದಲ್ಲದೆ, ಇಡೀ ಸೆಟ್​ನಲ್ಲಿದ್ದವರಿಗೆ ಸಮಸ್ಯೆ ಕೊಟ್ಟಿದ್ದರಂತೆ. ಘಟನೆಯನ್ನು ಸ್ವತಃ ನಟಿ ವಿವರಿಸಿದ್ದಾರೆ.

ಸೆಟ್​ನಲ್ಲಿ ಮದ್ಯ ಸೇವಸಿ ಸಮಸ್ಯೆ ಸೃಷ್ಟಿಸಿಕೊಂಡಿದ್ದ ನಟಿ ರಿಚಾ
ಮಂಜುನಾಥ ಸಿ.
|

Updated on: May 12, 2024 | 9:21 AM

Share

ಹಲವು ನಟ-ನಟಿಯರು ಸಿನಿಮಾದ ಶೂಟಿಂಗ್ (Shooting)​ ಬಗ್ಗೆ ಶಿಸ್ತೊಂದನ್ನು ಹೇರಿಕೊಂಡಿರುತ್ತಾರೆ. ಪ್ಯಾಕಪ್ ಆಗುವವರೆಗೆ ಮದ್ಯ ಮುಟ್ಟುವುದಿಲ್ಲ, ಸಿಗರೇಟು ಸೇದುವುದಿಲ್ಲ ಎಂಬಿತ್ಯಾದಿ ಶಿಸ್ತುಗಳನ್ನು ಪಾಲಿಸುತ್ತಿರುತ್ತಾರೆ. ಪಾಸಿದವರು ಸಹ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ ಬಿಡಿ. ಆದರೆ ಹೀಗೆ ಶೂಟಿಂಗ್ ಮಧ್ಯೆ ಮದ್ಯ ಸೇವಿಸುವವರು ಹೆಚ್ಚಾಗಿ ನಟರು, ನಟಿಯರು ಆ ಕೆಲಸಕ್ಕೆ ಕೈ ಹಾಕುವುದಿಲ್ಲ. ಆದರೆ ಇಲ್ಲೊಬ್ಬ ನಟಿ, ಸ್ಟಾರ್ ನಿರ್ದೇಶಕರೊಬ್ಬರ ಸಿನಿಮಾ ಸೆಟ್​ನಲ್ಲಿ ಶೂಟಿಂಗ್ ವೇಳೆ ಮದ್ಯ ಸೇವಿಸಿ ಸಮಸ್ಯೆ ಮಾಡಿಕೊಂಡಿದ್ದರ ಬಗ್ಗೆ ಮಾತನಾಡಿದ್ದಾರೆ.

‘ಗ್ಯಾಂಗ್ಸ್ ಆಫ್ ವಸೇಪುರ್’ ಸಿನಿಮಾ ನೋಡಿದವರಗೆ ರಿಚಾ ಚಡ್ಡಾ ಪ್ರತಿಭೆ ಎಂಥಹದ್ದು ಎಂಬುದು ಗೊತ್ತೆ ಇರುತ್ತದೆ. ಬಾಲಿವುಡ್​ನ ಪ್ರತಿಭಾವಂತ ನಟಿಯರಲ್ಲಿ ರಿಚಾ ಚಡ್ಡಾ ಸಹ ಒಬ್ಬರು. ಇದೀಗ ಅವರು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಹೀರಾಮಂಡಿ’ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಆದರೆ ಈ ವೆಬ್ ಸರಣಿಯಲ್ಲಿ ನಟಿಸುವಾಗ ಮದ್ಯ ಸೇವಿಸಿ ಸಮಸ್ಯೆ ಮಾಡಿಕೊಂಡಿದ್ದರಂತೆ. ರಿಚಾ ಮದ್ಯ ಸೇವಿಸಿದ್ದರಿಂದ ಸೆಟ್​ನಲ್ಲಿರುವವರಿಗೆಲ್ಲ ಸಮಸ್ಯೆಯಾಯ್ತಂತೆ.

ವೆಬ್ ಸರಣಿಯ ಸೀನ್ ಒಂದಕ್ಕಾಗಿ ಮದ್ಯ ಕುಡಿದ ರೀತಿಯಲ್ಲಿ ನಟಿಸಬೇಕಿತ್ತಂತೆ. ಸಂಜಯ್ ಲೀಲಾ ಬನ್ಸಾಲಿ, ನಟರಿಂದ ನೈಜ ನಟನೆ ನಿರೀಕ್ಷಿಸುತ್ತಾರೆ. ಹಾಗಾಗಿ ರಿಚಾ ಚಡ್ಡಾ ಸ್ವಲ್ಪ ಜಿನ್ ಸೇವಿಸಿ ನಟಿಸೋಣ ಎಂದುಕೊಂಡು ಎಂದಿಗೂ ಕುಡಿಯದ ರಿಚಾ ಜಿನ್ ಸೇವಿಸಿದರಂತೆ. ಆದರೆ ಜಿನ್ ಕುಡಿದ ಕೆಲವೇ ಹೊತ್ತಿನಲ್ಲಿ ರಿಚಾಗೆ ಗೊತ್ತಾಯ್ತಂತೆ ಏನೋ ಸಮಸ್ಯೆ ಆಗುತ್ತಿದೆಯೆಂದು. ರಿಚಾರ ನಟನೆ ಚೆನ್ನಾಗಿ ಆಗುವ ಬದಲಿಗೆ ಇನ್ನೂ ಕೆಟ್ಟದಾಯ್ತ ಹೋಯ್ತಂತೆ. ಸರಿಯಾಗಿ ನಡೆಯಲು ಆಗಲಿಲ್ಲವಂತೆ. ಕೇವಲ ಒಂದು ಸೀನ್​ಗೆ ಸುಮಾರು 60-70 ಟೇಕ್ಸ್ ತೆಗೆದುಕೊಂಡರಂತೆ ರಿಚಾ.

ಇದನ್ನೂ ಓದಿ:ಸಿನಿಮಾ ಶೂಟಿಂಗ್ ಸೆಟ್​ ಬೆಂಕಿಗಾಹುತಿ, ನಾಲ್ಕು ಕೋಟಿ ನಷ್ಟ

ರಿಚಾ, ಮದ್ಯ ಸೇವಿಸಿ ಸರಿಯಾಗಿ ನಟಿಸಲು ಆಗದೇ ಇರುವುದಕ್ಕೆ ಸೆಟ್​ನಲ್ಲಿದ್ದವರೆಲ್ಲ ಬೇಸರ ಮಾಡಿಕೊಂಡರಂತೆ. ‘ಮೊದಲ 30 ಟೇಕ್​ಗಳಲ್ಲಿ ದೃಶ್ಯ ಸರಿಯಾಗಿ ಬರಲಿಲ್ಲವಾದ್ದರಿಂದ ಜಿನ್ ಸೇವಿಸಿದೆ. ಆದರೆ ಅದಾದ ಮೇಲೆ ನನ್ನ ಪರಿಸ್ಥಿತಿ ಇನ್ನಷ್ಟು ಕೆಟ್ಟಿತು. ಸರಿಯಾಗಿ ನಟಿಸಲು ಮಾತ್ರವಲ್ಲ, ಸರಿಯಾಗಿ ನಿಲ್ಲಲು ಸಹ ಸಾಧ್ಯವಾಗಲಿಲ್ಲ’ ಎಂದಿದ್ದಾರೆ ರಿಚಾ ಚಡ್ಡಾ.

ರಿಚಾ ಚಡ್ಡ ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ಮಸಾನ್’, ಫಕ್ರೆ, ಸರಬ್​ಜಿತ್ ಇನ್ನೂ ಕೆಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿರುವ ‘ಶಕೀಲ’ ಸಿನಿಮಾನಲ್ಲಿಯೂ ರಿಚಾ ಚಡ್ಡ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!