ಹಲವು ನಟ-ನಟಿಯರು ಸಿನಿಮಾದ ಶೂಟಿಂಗ್ (Shooting) ಬಗ್ಗೆ ಶಿಸ್ತೊಂದನ್ನು ಹೇರಿಕೊಂಡಿರುತ್ತಾರೆ. ಪ್ಯಾಕಪ್ ಆಗುವವರೆಗೆ ಮದ್ಯ ಮುಟ್ಟುವುದಿಲ್ಲ, ಸಿಗರೇಟು ಸೇದುವುದಿಲ್ಲ ಎಂಬಿತ್ಯಾದಿ ಶಿಸ್ತುಗಳನ್ನು ಪಾಲಿಸುತ್ತಿರುತ್ತಾರೆ. ಪಾಸಿದವರು ಸಹ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ ಬಿಡಿ. ಆದರೆ ಹೀಗೆ ಶೂಟಿಂಗ್ ಮಧ್ಯೆ ಮದ್ಯ ಸೇವಿಸುವವರು ಹೆಚ್ಚಾಗಿ ನಟರು, ನಟಿಯರು ಆ ಕೆಲಸಕ್ಕೆ ಕೈ ಹಾಕುವುದಿಲ್ಲ. ಆದರೆ ಇಲ್ಲೊಬ್ಬ ನಟಿ, ಸ್ಟಾರ್ ನಿರ್ದೇಶಕರೊಬ್ಬರ ಸಿನಿಮಾ ಸೆಟ್ನಲ್ಲಿ ಶೂಟಿಂಗ್ ವೇಳೆ ಮದ್ಯ ಸೇವಿಸಿ ಸಮಸ್ಯೆ ಮಾಡಿಕೊಂಡಿದ್ದರ ಬಗ್ಗೆ ಮಾತನಾಡಿದ್ದಾರೆ.
‘ಗ್ಯಾಂಗ್ಸ್ ಆಫ್ ವಸೇಪುರ್’ ಸಿನಿಮಾ ನೋಡಿದವರಗೆ ರಿಚಾ ಚಡ್ಡಾ ಪ್ರತಿಭೆ ಎಂಥಹದ್ದು ಎಂಬುದು ಗೊತ್ತೆ ಇರುತ್ತದೆ. ಬಾಲಿವುಡ್ನ ಪ್ರತಿಭಾವಂತ ನಟಿಯರಲ್ಲಿ ರಿಚಾ ಚಡ್ಡಾ ಸಹ ಒಬ್ಬರು. ಇದೀಗ ಅವರು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಹೀರಾಮಂಡಿ’ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಆದರೆ ಈ ವೆಬ್ ಸರಣಿಯಲ್ಲಿ ನಟಿಸುವಾಗ ಮದ್ಯ ಸೇವಿಸಿ ಸಮಸ್ಯೆ ಮಾಡಿಕೊಂಡಿದ್ದರಂತೆ. ರಿಚಾ ಮದ್ಯ ಸೇವಿಸಿದ್ದರಿಂದ ಸೆಟ್ನಲ್ಲಿರುವವರಿಗೆಲ್ಲ ಸಮಸ್ಯೆಯಾಯ್ತಂತೆ.
ವೆಬ್ ಸರಣಿಯ ಸೀನ್ ಒಂದಕ್ಕಾಗಿ ಮದ್ಯ ಕುಡಿದ ರೀತಿಯಲ್ಲಿ ನಟಿಸಬೇಕಿತ್ತಂತೆ. ಸಂಜಯ್ ಲೀಲಾ ಬನ್ಸಾಲಿ, ನಟರಿಂದ ನೈಜ ನಟನೆ ನಿರೀಕ್ಷಿಸುತ್ತಾರೆ. ಹಾಗಾಗಿ ರಿಚಾ ಚಡ್ಡಾ ಸ್ವಲ್ಪ ಜಿನ್ ಸೇವಿಸಿ ನಟಿಸೋಣ ಎಂದುಕೊಂಡು ಎಂದಿಗೂ ಕುಡಿಯದ ರಿಚಾ ಜಿನ್ ಸೇವಿಸಿದರಂತೆ. ಆದರೆ ಜಿನ್ ಕುಡಿದ ಕೆಲವೇ ಹೊತ್ತಿನಲ್ಲಿ ರಿಚಾಗೆ ಗೊತ್ತಾಯ್ತಂತೆ ಏನೋ ಸಮಸ್ಯೆ ಆಗುತ್ತಿದೆಯೆಂದು. ರಿಚಾರ ನಟನೆ ಚೆನ್ನಾಗಿ ಆಗುವ ಬದಲಿಗೆ ಇನ್ನೂ ಕೆಟ್ಟದಾಯ್ತ ಹೋಯ್ತಂತೆ. ಸರಿಯಾಗಿ ನಡೆಯಲು ಆಗಲಿಲ್ಲವಂತೆ. ಕೇವಲ ಒಂದು ಸೀನ್ಗೆ ಸುಮಾರು 60-70 ಟೇಕ್ಸ್ ತೆಗೆದುಕೊಂಡರಂತೆ ರಿಚಾ.
ಇದನ್ನೂ ಓದಿ:ಸಿನಿಮಾ ಶೂಟಿಂಗ್ ಸೆಟ್ ಬೆಂಕಿಗಾಹುತಿ, ನಾಲ್ಕು ಕೋಟಿ ನಷ್ಟ
ರಿಚಾ, ಮದ್ಯ ಸೇವಿಸಿ ಸರಿಯಾಗಿ ನಟಿಸಲು ಆಗದೇ ಇರುವುದಕ್ಕೆ ಸೆಟ್ನಲ್ಲಿದ್ದವರೆಲ್ಲ ಬೇಸರ ಮಾಡಿಕೊಂಡರಂತೆ. ‘ಮೊದಲ 30 ಟೇಕ್ಗಳಲ್ಲಿ ದೃಶ್ಯ ಸರಿಯಾಗಿ ಬರಲಿಲ್ಲವಾದ್ದರಿಂದ ಜಿನ್ ಸೇವಿಸಿದೆ. ಆದರೆ ಅದಾದ ಮೇಲೆ ನನ್ನ ಪರಿಸ್ಥಿತಿ ಇನ್ನಷ್ಟು ಕೆಟ್ಟಿತು. ಸರಿಯಾಗಿ ನಟಿಸಲು ಮಾತ್ರವಲ್ಲ, ಸರಿಯಾಗಿ ನಿಲ್ಲಲು ಸಹ ಸಾಧ್ಯವಾಗಲಿಲ್ಲ’ ಎಂದಿದ್ದಾರೆ ರಿಚಾ ಚಡ್ಡಾ.
ರಿಚಾ ಚಡ್ಡ ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ಮಸಾನ್’, ಫಕ್ರೆ, ಸರಬ್ಜಿತ್ ಇನ್ನೂ ಕೆಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿರುವ ‘ಶಕೀಲ’ ಸಿನಿಮಾನಲ್ಲಿಯೂ ರಿಚಾ ಚಡ್ಡ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ