ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಪ್ರೀತಿಯಿಂದ ವಿಶ್ ಮಾಡಿದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅವರು ದರ್ಶನ್ ನಟನೆಯ 'ಡೆವಿಲ್' ಚಿತ್ರಕ್ಕೆ ಪ್ರೀತಿಯಿಂದ ಶುಭ ಹಾರೈಸಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆದರೂ ಕನ್ನಡ ಚಿತ್ರರಂಗಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸಿದ್ದಾರೆ. ಈ ಮೂಲಕ ಕನ್ನಡ ಸಿನಿಮಾಗಳ ಪ್ರೋತ್ಸಾಹಕ್ಕೆ ರಿಷಬ್ ತಮ್ಮ ಸಹಕಾರವನ್ನು ನೀಡಿದ್ದಾರೆ. 'ಡೆವಿಲ್' ತಂಡಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ರಿಷಬ್ ಶೆಟ್ಟಿ ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅವರನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ. ಹಾಗಂತ ಅವರು ಕನ್ನಡ ಚಿತ್ರರಂಗಕ್ಕೆ ಬೆಂಬಲಿಸೋದನ್ನು ಮರೆತಿಲ್ಲ. ಈ ಕಾರ್ಯವನ್ನು ಅವರು ಮುಂದುವರಿಸಿದ್ದಾರೆ. ಕನ್ನಡ ಸಿನಿಮಾಗಳಿಗೆ ಅವರ ಬೆಂಬಲ ಸಿಗುತ್ತಿದೆ. ಈಗ ಅವರು ‘ಡೆವಿಲ್’ ಸಿನಿಮಾಗೆ ವಿಶ್ ಮಾಡಿ ಬೆಂಬಲ ಸೂಚಿಸಿದ್ದಾರೆ.
‘ಡೆವಿಲ್’ ಸಿನಿಮಾಗೆ ಮಿಲನಾ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್ 11ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ದರ್ಶನ್ ಯಾವಾಗಲೂ ಪ್ಯಾನ್ ಇಂಡಿಯಾ ಸ್ಟೈಲ್ನ ಅನುಸರಿಸಿದವರಲ್ಲ. ಹೀಗಾಗಿ, ‘ಡೆವಿಲ್’ ಸಿನಿಮಾ ಕನ್ನಡ ಭಾಷೆಯಲ್ಲಿ ಮಾತ್ರ ತೆರೆಗೆ ಬರುತ್ತಿದೆ. ಈ ಸಿನಿಮಾಗೆ ರಿಷಬ್ ಶೆಟ್ಟಿ ಅವರು ವಿಶ್ ಮಾಡಿದ್ದಾರೆ.
‘ದರ್ಶನ್ ಸರ್ ಹಾಗೂ ಅವರ ಡೆವಿಲ್ ತಂಡಕ್ಕೆ ವಿಶ್ ಮಾಡುತ್ತೇನೆ. ಸಿನಿಮಾ ಬ್ಲಾಕ್ಬಸ್ಟರ್ ಕಾಣಲಿ. ದೊಡ್ಡ ಪರದೆಯಲ್ಲಿ ಅಬ್ಬರಿಸಲಿ’ ರಿಷಬ್ ಅವರು ದರ್ಶನ್ ಹಾಗೂ ತಂಡಕ್ಕೆ ವಿಶ್ ಮಾಡಿದ್ದಾರೆ. ಈ ಟ್ವೀಟ್ನ ದರ್ಶನ್ ಫ್ಯಾನ್ಸ್ ರೀ ಟ್ವೀಟ್ ಮಾಡಿಕೊಳ್ಳುತ್ತಿದ್ದಾರೆ.
Wishing @dasadarshan Sir and the entire team of Devil a blockbuster release! May the film set the screens on fire.#Devil #PrakashVeer @AJANEESHB pic.twitter.com/LH1y7SxaRC
— Rishab Shetty (@shetty_rishab) December 10, 2025
‘ಡೆವಿಲ್’ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹೀಗಾಗಿ ಅವರನ್ನು ಕೂಡ ರಿಷಬ್ ಟ್ಯಾಗ್ ಮಾಡಿದ್ದಾರೆ. ಅಜನೀಶ್ ಜೊತೆ ರಿಷಬ್ಗೆ ಒಳ್ಳೆಯ ಬಾಂಧವ್ಯ ಇದೆ. ‘ಕಾಂತಾರ’ ಸಿನಿಮಾದಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದಾರೆ. ‘ಡೆವಿಲ್’ ಸಿನಿಮಾಗೆ ವಿಶ್ ಮಾಡಲು ಇದು ಕೂಡ ಕಾರಣ.
ಇದನ್ನೂ ಓದಿ: ನೀವು ನನ್ನ ಶಕ್ತಿ; ‘ಡೆವಿಲ್’ ರಿಲೀಸ್ಗೂ ಮೊದಲು ಅಭಿಮಾನಿಗಳಿಗೆ ದರ್ಶನ್ ಪತ್ರ
ಡೆವಿಲ್ ಸಿನಿಮಾ ನೂರಾರು ಸ್ಕ್ರಿನ್ಗಳಲ್ಲಿ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈ ಸಿನಿಮಾದ ಟ್ರೇಲರ್ ನೋಡಿ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಬಿಗ್ ಬಾಸ್ ಗಿಲ್ಲಿ ನಟ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಮೊದಲಾದವರು ಸಿನಿಮಾದಲ್ಲಿದ್ದಾರೆ. ಮಿಲನ ಪ್ರಕಾಶ್ ಈ ಚಿತ್ರದ ನಿರ್ಮಾಪಕ ಕೂಡ ಹೌದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




