ನೀವು ನನ್ನ ಶಕ್ತಿ; ‘ಡೆವಿಲ್’ ರಿಲೀಸ್ಗೂ ಮೊದಲು ಅಭಿಮಾನಿಗಳಿಗೆ ದರ್ಶನ್ ಪತ್ರ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಡೆವಿಲ್' ಸಿನಿಮಾ ಡಿಸೆಂಬರ್ 11 ರಂದು ಬಿಡುಗಡೆ ಆಗಲಿದ್ದು, ಅಭಿಮಾನಿಗಳಲ್ಲಿ ಹಬ್ಬದ ವಾತಾವರಣವಿದೆ. ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮೀ ಮೂಲಕ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ವದಂತಿಗಳನ್ನು ಕಡೆಗಣಿಸಿ, ಚಿತ್ರದ ಯಶಸ್ಸಿಗೆ ಶ್ರಮಿಸುವಂತೆ ಕೋರಿದ್ದಾರೆ. ಅಭಿಮಾನಿಗಳೇ ತನ್ನ ಶಕ್ತಿ ಮತ್ತು ಕುಟುಂಬ ಎಂದು ಪ್ರೀತಿಯಿಂದ ತಿಳಿಸಿದ್ದಾರೆ.

ಡಿಸೆಂಬರ್ 11ರಂದು ಅಂದರೆ ಗುರುವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರ ಬಿಡುಗಡೆ ಆಗುತ್ತಿರುವುದು ತಿಳಿದೇ ಇದೆ. ಇದರಿಂದ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಸಿನಿಮಾ ಬಿಡುಗಡೆಗೂ ಮೊದಲು ದರ್ಶನ್ ಅವರು ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ಇದನ್ನು ವಿಜಯಲಕ್ಷ್ಮೀ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ನನ್ನ ಹೃದಯದಿಂದ ಈ ಸಂದೇಶ ನಿಮಗೆ ಕಳುಹಿಸುತ್ತಿದ್ದೇನೆ. ವಿಜಿ ನಿಮ್ಮೆಲ್ಲರಿಗೂ ಇದನ್ನು ತಲುಪಿಸುತ್ತಾಳೆ. ನಿಮ್ಮೆಲ್ಲರ ಪ್ರೀತಿ, ಕಾಳಜಿ, ಬೆಂಬಲ, ನನ್ನ ಸಿನಿಮಾ ಪ್ರಚಾರ ಬಗ್ಗೆ ಪ್ರತಿ ಬಾರಿಯೂ ವಿಜಿ ನನಗೆ ತಿಳಿಸುತ್ತಿದ್ದಾಳೆ. ದೂರ ಇದ್ದರೂ ಪ್ರತಿ ಕ್ಷಣವೂ ನಿಮ್ಮ ಉಪಸ್ಥಿತಿಯನ್ನು ನಾನು ಅನುಭವಿಸುತ್ತೇನೆ. ನಾನು ನಿಮಗೆ ಹೇಳಲು ಬಯಸುವುದೇನೆಂದರೆ ದಯವಿಟ್ಟು ಯಾರು ಏನು ಹೇಳಿದರೂ ಚಿಂತಿಸಬೇಡಿ. ಯಾವುದೇ ವದಂತಿ, ನೆಗೆಟಿವಿಟಿ ನಿಮ್ಮ ಹೃದಯವನ್ನು ಅಲುಗಾಡಿಸಲು ಬಿಡಬೇಡಿ’ ಎಂದು ದರ್ಶನ್ ಕೋರಿದ್ದಾರೆ.
View this post on Instagram
‘ನೀವು ನನ್ನ ಶಕ್ತಿ, ನೀವು ನನ್ನ ಕುಟುಂಬ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದಾಗಿ ನಾನು ನಿಂತಿದ್ದೇನೆ. ನನ್ನ ಜೀವನದ ಈ ಹಂತದಲ್ಲಿ, ನನ್ನ ದೊಡ್ಡ ಶಕ್ತಿ ನೀವೇ. ಈ ಸಮಯದಲ್ಲಿ ನಾನು ಬಯಸುವುದು ಒಂದೇ . ನಮ್ಮ ಡೆವಿಲ್ ಸಿನಿಮಾ ಕಡೆಗೆ ಗಮನ ಹರಿಸಬೇಕು. ನನಗೆ ತೋರಿಸಿದ ಪ್ರೀತಿಯನ್ನು ಡೆವಿಲ್ಗೂ ತೋರಿಸಿ. ನನ್ನ ಅನುಪಸ್ಥಿತಿಯಲ್ಲಿಯೂ ಸಹ, ನೀವು ಪ್ರತಿಯೊಂದು ಪ್ರಶ್ನೆಗೆ, ಅನುಮಾನಕ್ಕೆ, ಧ್ವನಿಗೆ ಉತ್ತರಿಸಬೇಕೆಂದು ನಾನು ಬಯಸುತ್ತೇನೆ. ಪದಗಳಿಂದಲ್ಲ, ಆದರೆ ಈ ಚಿತ್ರದ ಅದ್ಭುತ ಯಶಸ್ಸಿನೊಂದಿಗೆ’ ಎಂದಿದ್ದಾರೆ ದರ್ಶನ್.
ಇದನ್ನೂ ಓದಿ: ದರ್ಶನ್ ಜೈಲಲ್ಲಿ ಯಾರ ಮೇಲೂ ಹಲ್ಲೆ ಮಾಡಿಲ್ಲ; ವಿಜಯಲಕ್ಷ್ಮೀ ‘ನನ್ನ ಸಿನಿಮಾಗೆ ನೀವು ಮಾಡ್ತಿರೋ ಪ್ರಚಾರ, ಶ್ರಮ ಮತ್ತು ನಿಮ್ಮ ಒಗ್ಗಟನಿನ ಬಗ್ಗೆ ಕೇಳಿದಾಗ ನನಗೆ ಹೆಮ್ಮೆ ಮತ್ತು ಭಾವುಕನಗುತ್ತೇನೆ. ನಿಮ್ಮನ್ನೆಲ್ಲ ಮತ್ತೆ ಭೇಟಿಯಾಗುವ ದಿನಕ್ಕಾಗಿ ಕಾಯುತ್ತಿರೋದೇ ಖುಷಿ ಕೊಡ್ತಿದೆ. ನನ್ನ ಸುತ್ತಲೂ ಗೋಡೆಯಂತೆ ನಿಂತಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನನ್ನು ಎಷ್ಟು ನಂಬುತ್ತಿರೋ ನಾನು ನನ್ನ ಸೆಲೆಬ್ರಿಟಿಗಳನ್ನ ಅಷ್ಟೇ ನಂಬುತ್ತಿನಿ . ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಎಲ್ಲವನ್ನೂ ಉತ್ತರಿಸುತ್ತದೆ. ಅಲ್ಲಿವರೆಗೂ ತಲೆಯನ್ನೆತ್ತಿ, ಹೃದಯ ಬಲವಾಗಿರಲಿ, ಪ್ರೀತಿ ಅಚಲವಾಗಿರಲಿ’ ಎಂದು ಜಾಲತಾಣದಲ್ಲಿ ಅಭಿಮಾನಿಗಳಿಗೆ ಪತ್ನಿ ಮೂಲಕ ದರ್ಶನ್ ಸಂದೇಶ ರವಾನಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



