AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಸಿಕ್ತು ‘ಡೆವಿಲ್’ಗೆ ಸೆನ್ಸಾರ್ ಗ್ರೀನ್ ಸಿಗ್ನಲ್, ಸಿನಿಮಾದ ಅವಧಿ ಎಷ್ಟು?

Devil Movie censor: ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ನಾಳೆ (ಡಿಸೆಂಬರ್ 11) ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬುಕ್ ಮೈ ಶೋನಲ್ಲಿ ಚಾಲ್ತಿಯಲ್ಲಿದೆ. ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಇರುವಾಗ ‘ಡೆವಿಲ್’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯು ಪ್ರಮಾಣ ಪತ್ರ ನೀಡಿದೆ. ‘ಡೆವಿಲ್’ ಸಿನಿಮಾಕ್ಕೆ ಸಿಕ್ಕಿರುವ ಪ್ರಮಾಣ ಪತ್ರ ಯಾವುದು? ಸಿನಿಮಾದ ಅವಧಿ ಎಷ್ಟು?

ಕೊನೆಗೂ ಸಿಕ್ತು ‘ಡೆವಿಲ್’ಗೆ ಸೆನ್ಸಾರ್ ಗ್ರೀನ್ ಸಿಗ್ನಲ್, ಸಿನಿಮಾದ ಅವಧಿ ಎಷ್ಟು?
Devil Movie
ಮಂಜುನಾಥ ಸಿ.
|

Updated on:Dec 10, 2025 | 4:08 PM

Share

ದರ್ಶನ್ (Darshan) ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆಗೆ ಕೆಲವು ಗಂಟೆಗಳಷ್ಟೆ ಬಾಕಿ ಇದೆ. ಈಗಾಗಲೇ ಬೆಂಗಳೂರು ಸೇರಿದಂತೆ ಹಲೆವೆಡೆ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ಅಡ್ವಾನ್ಸ್ ಬುಕಿಂಗ್ ಚೆನ್ನಾಗಿಯೇ ನಡೆಯುತ್ತಿದೆ. ಆದರೆ ಸಿನಿಮಾದ ಸೆನ್ಸಾರ್ ಆಗುವುದು ಬಹಳ ತಡವಾಗಿದೆ. ಡಿಸೆಂಬರ್ 11 ರಂದು ಸಿನಿಮಾ ಬಿಡುಗಡೆ ಆಗಲಿಕ್ಕಿದೆ, ಆದರೆ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿರುವುದು ಡಿಸೆಂಬರ್ 10ರ ಮಧ್ಯಾಹ್ನದ ವೇಳೆಗೆ!

‘ಡೆವಿಲ್’ ಸಿನಿಮಾವನ್ನು ಸೆನ್ಸಾರ್ ಮಂಡಳಿಗೆ ಕಳಿಸಲು ಚಿತ್ರತಂಡ ತಡ ಮಾಡಿದೆ ಎನ್ನಲಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪೂರ್ಣ ಆಗದೇ ಇದ್ದ ಕಾರಣದಿಂದಾಗಿ ತಡವಾಗಿ ಸೆನ್ಸಾರ್ ಮಂಡಳಿಗೆ ಸಿನಿಮಾವನ್ನು ಕಳಿಸಲಾಗಿತ್ತು. ‘ಡೆವಿಲ್’ ಸಿನಿಮಾದ ಸೆನ್ಸಾರ್ ಆಗುವ ಮುಂಚೆಯೇ ಅಡ್ವಾನ್ಸ್ ಬುಕಿಂಗ್ ಸಹ ಆರಂಭಿಸಲಾಗಿತ್ತು. ಆದರೆ ಯಾವುದೇ ಮಲ್ಟಿಪ್ಲೆಕ್ಸ್​​ಗಳು ‘ಡೆವಿಲ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ತೆಗೆದುಕೊಂಡಿರಲಿಲ್ಲ, ಸೆನ್ಸಾರ್ ಆಗದೇ ಇದ್ದ ಕಾರಣದಿಂದಾಗಿ ಮಲ್ಟಿಪ್ಲೆಕ್ಸ್​ಗಳು (ಪಿವಿಆರ್-ಐನಾಕ್ಸ್) ಅಡ್ವಾನ್ಸ್ ಬುಕಿಂಗ್ ತೆಗೆದುಕೊಳ್ಳದೆ ಕಾದು ನೋಡುವ ತಂತ್ರ ಅನುಸರಿಸಿವೆ. ಆದರೆ ಕೊನೆಗೂ ಇದೀಗ ‘ಡೆವಿಲ್’ ಸಿನಿಮಾದ ಸೆನ್ಸಾರ್ ಆಗಿದೆ.

ಇದನ್ನೂ ಓದಿ:ನೀವು ನನ್ನ ಶಕ್ತಿ; ‘ಡೆವಿಲ್’ ರಿಲೀಸ್​​ಗೂ ಮೊದಲು ಅಭಿಮಾನಿಗಳಿಗೆ ದರ್ಶನ್ ಪತ್ರ

‘ಡೆವಿಲ್’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯು ‘ಯು/ಎ’ ಪ್ರಮಾಣ ಪತ್ರವನ್ನು ನೀಡಿದೆ. 16 ವರ್ಷದ ಮೇಲಿನವರು ಸಿನಿಮಾ ನೋಡಬಹುದಾಗಿದೆ. 16 ವರ್ಷದವರು ಪೋಷಕರ ನಿಗಾವಣಿಯಲ್ಲಿ ‘ಡೆವಿಲ್’ ಸಿನಿಮಾ ನೋಡಬೇಕಿದೆ. ಇನ್ನು ‘ಡೆವಿಲ್’ ಸಿನಿಮಾದ ಒಟ್ಟು ರನ್​​ಟೈಂ ಅಂದರೆ ಒಟ್ಟು ಸಿನಿಮಾದ ಅವಧಿ 2 ಗಂಟೆ 49 ನಿಮಿಷಗಳು ಇದೆ. ಕೆಲ ಮೂಲಗಳ ಪ್ರಕಾರ ‘ಡೆವಿಲ್’ ಸಿನಿಮಾ ಈಗಾಗಲೇ ಯುಎಫ್​​ಓಗೆ ಅಪ್​​ಲೋಡ್ ಆಗಿದ್ದು, ಇದೀಗ ಅದಕ್ಕೆ ಪ್ರಮಾಣ ಪತ್ರವನ್ನು ಸಹ ಅಟ್ಯಾಚ್ ಮಾಡಲಾಗುತ್ತಿದೆ. ಆ ಮೂಲಕ ಸಿನಿಮಾ ಯಾವುದೇ ಅಡ್ಡಿ-ಆತಂಕ ಇಲ್ಲದೆ ನಾಳೆ (ಡಿಸೆಂಬರ್ 11) ಬಿಡುಗಡೆ ಆಗಲಿದೆ.

ಈ ಮೊದಲು ‘ಡೆವಿಲ್’ ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಚಿತ್ರತಂಡವು ಸಿನಿಮಾದ ಬಿಡುಗಡೆಯನ್ನು ಡಿಸೆಂಬರ್ 11 ರಂದೇ ಮಾಡುವುದಾಗಿ ಘೋಷಿಸಿತು. ಅಭಿಮಾನಿಗಳ ಒತ್ತಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಚಿತ್ರತಂಡ ಹೇಳಿದೆ. ‘ಡೆವಿಲ್’ ಸಿನಿಮಾನಲ್ಲಿ ದರ್ಶನ್ ಜೊತೆಗೆ ರಚನಾ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಮಿಲನ ಪ್ರಕಾಶ್. ಸಿನಿಮಾನಲ್ಲಿ ಅಚ್ಯುತ್ ಕುಮಾರ್, ವಿನಯ್ ಗೌಡ, ಗಿಲ್ಲಿ ನಟ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Wed, 10 December 25