ಕನ್ನಡಿಯಲ್ಲಿ ತನ್ನದೇ ಹೊಟ್ಟೆ ನೋಡಿ ಶಾಕ್ ಆದ ನಟಿ; ಆಮೇಲೆ ಏನಾಯ್ತು?

ಖ್ಯಾತ ದಕ್ಷಿಣದ ನಟಿ ಅವರು ತಮ್ಮ ತೂಕ ಹೆಚ್ಚಳದಿಂದ ಆಘಾತಕ್ಕೊಳದರು. 72 ಕೆಜಿ ತೂಕದೊಂದಿಗೆ ಹೊಸ ಫಿಟ್ನೆಸ್ ಪ್ರಯಾಣ ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರಗತಿಯನ್ನು ಹಂಚಿಕೊಂಡ ಅವರು, ನಿರಂತರ ವ್ಯಾಯಾಮ ಮತ್ತು ಬದ್ಧತೆಯಿಂದ ಫಿಟ್ನೆಸ್​ನ ಪುನಃ ಪಡೆದಿದ್ದಾರೆ. ಆ ವಿಡಿಯೋ ಇಲ್ಲಿದೆ.

ಕನ್ನಡಿಯಲ್ಲಿ ತನ್ನದೇ ಹೊಟ್ಟೆ ನೋಡಿ ಶಾಕ್ ಆದ ನಟಿ; ಆಮೇಲೆ ಏನಾಯ್ತು?
ರಿತಿಕಾ ಸಿಂಗ್

Updated on: May 05, 2025 | 8:54 AM

ಕಲಾವಿದರು ಯಾವಾಗಲೂ ಫಿಟ್ ಆಗಿರೋಕೆ ಬಯಸುತ್ತಾರೆ. ಈ ಕಾರಣದಿಂದಲೇ ನಿತ್ಯವೂ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಾರೆ. ತಾವು ಸೇವನೆ ಮಾಡೋ ಆಹಾರದ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಆದರೆ, ಎಲ್ಲಾ ಸಮಯದಲ್ಲೂ ಇದೇ ರೀತಿ ನಡೆದುಕೊಳ್ಳೋಕೆ ಆಗಲ್ಲ. ಈ ಕಾರಣಕ್ಕೆ ದೇಹದ ಶೇಪ್ ಕಳೆದು ಹೋಗುತ್ತದೆ. ದೊಡ್ಡದಾಗಿ ಹೊಟ್ಟೆ ಬರುತ್ತದೆ. ಸೊಂಟದ ಭಾಗದಲ್ಲಿ ಬೊಜ್ಜು ತುಂಬಿಕೊಳ್ಳುತ್ತದೆ. ಈಗ ನಟಿಯೊಬ್ಬರಿಗೆ ಹೀಗೆಯೇ ಆಗಿದೆ. ಕನ್ನಡಿಯಲ್ಲಿ ತಮ್ಮದೇ ಹೊಟ್ಟೆ ನೋಡಿ ಅವರಿಗೆ ಶಾಕ್ ಆಗಿದೆ. ಆ ಬಳಿಕ ಆಗಿದ್ದು ಮಾತ್ರ ನಿಜಕ್ಕೂ ಸ್ಫೂರ್ತಿದಾಯಕ ಘಟನೆ. ಈ ರೀತಿ ಆಗಿದ್ದು ರಿತಿಕಾ ಸಿಂಗ್ (Ritika Singh) ಅವರಿಗೆ.

ರಿತಿಕಾ ಹುಟ್ಟಿದ್ದು ಮುಂಬೈನಲ್ಲಿ. ಅವರು 2016ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಮೊದಲು ತಮಿಳು, ತೆಲುಗು ಸಿನಿಮಾಗಳನ್ನು ಮಾಡುತ್ತಿದ್ದ ಅವರು ನಂತರ ಹಿಂದಿ, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ವೆಟ್ಟೈಯನ್’ ಸಿನಿಮಾದಲ್ಲಿ ರಿತಿಕಾ ನಟಿಸಿದ್ದರು. ಈ ಚಿತ್ರ ಹಿಟ್ ಆಯಿತು. ಆ ಬಳಿಕ ರಿತಿಕಾ ಬ್ರೇಕ್ ಪಡೆದರು. ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಈ ಅವಧಿಯಲ್ಲಿ ರಿತಿಕಾ ಸಂಪೂರ್ಣವಾಗಿ ಶೇಪ್ ಕಳೆದುಕೊಂಡಿದ್ದರು.

ಇದನ್ನೂ ಓದಿ
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ
ಅಪಘಾತದ ಬಳಿಕ ಬದಲಾಯಿತು ನಾನಿ ಬದುಕು; ಅಂದು ಆಗಿದ್ದೇನು?
ಖ್ಯಾತ ನಿರ್ಮಾಪಕನ ಜೊತೆ ಪೋಸ್ ಕೊಟ್ಟ ಶ್ರೀಲೀಲಾ; ಕೇಳಿಬಂತು ಹೊಸ ಗಾಸಿಪ್
ಸಾರಾ ತೆಂಡೂಲ್ಕರ್​ಗೆ ಹೊಸ ಬಾಯ್​ಫ್ರೆಂಡ್; ಸ್ಟಾರ್ ನಟನ ಜೊತೆ ಡೇಟಿಂಗ್?

ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚಿದ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ

ರಿತಿಕಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ‘ನಾನು ತೂಕ ಹೆಚ್ಚಿಸಿಕೊಂಡಿದ್ದೇನೆ. ಈಗ ನನ್ನ ತೂಕ 72 ಕೆಜಿ’ ಎಂದು ಅವರು ಹೇಳಿದ್ದಾರೆ. ಆ ಬಳಿಕ ಅವರದ್ದೇ ಹೊಟ್ಟೆ ನೋಡಿ ಅವರಿಗೆ ಭಯ ಆಗಿದೆ. ಆ ಬಳಿಕ ಅವರ ಸ್ಫೂರ್ತಿದಾಯಕ ಜರ್ನಿ ಪ್ರಾರಂಭ ಆಗಿದೆ. ಅವರು ನಾನಾ ರೀತಿಯ ವರ್ಕೌಟ್ ಆರಂಭಿಸಿದ್ದಾರೆ.

ಸರಿಯಾದ ರೀತಿಯಲ್ಲಿ ವರ್ಕೌಟ್ ಆರಂಭಿಸಿದರೆ ಎಲ್ಲವೂ ಸರಿ ಆಗುತ್ತದೆ. ದೇಹದಲ್ಲಿ ಬೊಜ್ಜಿನ ಅಂಶ ಕಡಿಮೆ ಆಗುತ್ತದೆ. ರಿತಿಕಾಗೂ ಹಾಗೆಯೇ ಆಗಿದೆ. ರಿತಿಕಾ ನಿರಂತರವಾಗಿ ಬದ್ಧತೆಯಿಂದ ವರ್ಕೌಟ್ ಮಾಡಿದ್ದು, ಅವರ ದೇಹ ಶೇಪ್​ಗೆ ಬಂದಿದೆ. ಅವುಗಳನ್ನು ಕೂಡ ವಿಡಿಯೋದಲ್ಲಿ ಶೇರ್ ಮಾಡಿದ್ದಾರೆ. ಅವರ ಜರ್ನಿ ಅನೇಕರಿಗೆ ಸ್ಫೂರ್ತಿದಾಯಕ ಆಗಿದೆ. ಈ ಬಗ್ಗೆ ಕಮೆಂಟ್ ಬಾಕ್ಸ್​ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಸಿನಿಮಾ ಒಪ್ಪಿಕೊಳ್ಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.