ಸ್ಮಶಾನವಾದ ಮದುವೆ ಮನೆ; ರಣವೀರ್ ಸಿಂಗ್ ಸಿನಿಮಾದಲ್ಲಿ ಬಳಕೆ ಆಗಿದ್ದ ಮನೆಯಲ್ಲಿ ಶೂಟೌಟ್​

‘ರಾಕಿ ಔರ್ ರಾಣಿ ಕಿ ಪ್ರೇಮ್​’ ಕಹಾನಿ ಸಿನಿಮಾದಲ್ಲಿ ದೊಡ್ಡ ನಿವಾಸ ಬಳಕೆ ಆಗಿತ್ತು. ಈ ಮನೆಯಲ್ಲಿ ಮದುವೆ ಏರ್ಪಡಿಸಲಾಗಿತ್ತು. ಈ ಮದುವೆಯಲ್ಲೇ ಶೂಟೌಟ್ ನಡೆದಿದೆ.

ಸ್ಮಶಾನವಾದ ಮದುವೆ ಮನೆ; ರಣವೀರ್ ಸಿಂಗ್ ಸಿನಿಮಾದಲ್ಲಿ ಬಳಕೆ ಆಗಿದ್ದ ಮನೆಯಲ್ಲಿ ಶೂಟೌಟ್​
ರಣವೀರ್-ಆಲಿಯಾ

Updated on: Nov 29, 2023 | 2:42 PM

ಈ ವರ್ಷ ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಸೂಪರ್ ಹಿಟ್ ಆಯಿತು. ಆಲಿಯಾ ಭಟ್ (Alia Bhatt), ರಣವೀರ್ ಸಿಂಗ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಸಿನಿಮಾಗೆ ಬಳಕೆ ಆಗಿದ್ದ ಮನೆಯಲ್ಲಿ ಈಗ ಶೂಟೌಟ್ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತ ವ್ಯಕ್ತಿಯನ್ನು 55 ವರ್ಷದ ಅಶೋಕ್ ಯಾದವ್ ಎಂದು ಗುರುತಿಸಲಾಗಿದೆ.

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ರಂಧಾವ ಕುಟುಂಬದ ಬಂಗಲೆಯಾಗಿ ಈ ಮನೆ ಬಳಕೆ ಆಗಿತ್ತು. ಈ ಜಾಗ ಗ್ರೇಟರ್ ನೋಯ್ಡಾದಲ್ಲಿ ಇದೆ. ಈ ಪ್ರಾಪರ್ಟಿಯಲ್ಲಿ ಮದುವೆ ನಡೆಯುತ್ತಿತ್ತು. ಮೃತನ ಸೊಸೆಯ ತಂದೆಯಿಂದಲೇ ಈ ಕೊಲೆ ನಡೆದಿದೆ.

ಕೇಂದ್ರ ನೋಯ್ಡಾದ ಡೆಪ್ಯುಟಿ ಕಮಿಷನರ್ ಸುನಿತಿ ಅವರು ಈ ಕೇಸ್​ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಅಶೋಕ್ ಯಾದವ್ ಮೃತ ವ್ಯಕ್ತಿ. ಅವರು ನೋಯ್ಡಾ ಸೆಕ್ಟರ್ 51ರ ನಿವಾಸಿ ಆಗಿದ್ದಾರೆ. ಈ ಬಂಗಲೆಯಲ್ಲಿ ಮದುವೆ ನಡೆಯುತ್ತಿತ್ತು. ಘಜಿಯಾಬಾದ್​ನ ಶೇಖರ್ ಎಂಬುವವರು ಹತ್ಯೆ ಮಾಡಿದ ವ್ಯಕ್ತಿ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಮೃತ ಅಶೋಕ್ ಅವರ ಮಗ ಹಾಗೂ ಶೇಖರ್ ಅವರ ಮಗಳು ಮದುವೆ ಆಗಿದ್ದರು. ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಎರಡೂ ಕುಟುಂಬದ ಮಧ್ಯೆ ಕಿತ್ತಾಟ ಆರಂಭ ಆಯಿತು. ಶೇಖರ್ ಮತ್ತು ಅಶೋಕ್ ನಡುವೆ ವಾಗ್ವಾದ ನಡೆಯಿತು. ಅಶೋಕ್ ಅವರ ತಲೆಗೆ ಶೇಖರ್ ಎರಡು ಬಾರಿ ಗುಂಡು ಹಾರಿಸಿದರು. ಇದರಿಂದ ಸ್ಥಳದಲ್ಲಿದ್ದ ಎಲ್ಲರೂ ಆತಂಕಕ್ಕೆ ಒಳಗಾದರು.

ಇದನ್ನೂ ಓದಿ: ಅಂದುಕೊಂಡಂತೆ ನಡೆಯಲಿಲ್ಲ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಮ್ಯಾಜಿಕ್; ಮೊದಲ ದಿನದ ಕಲೆಕ್ಷನ್ ಎಷ್ಟು?

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಈ ವರ್ಷ ಜುಲೈ ತಿಂಗಳಲ್ಲಿ ರಿಲೀಸ್ ಆಯಿತು. ಕರಣ್ ಜೋಹರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದರು. ಹಲವು ವರ್ಷಗಳ ಬಳಿಕ ಅವರು ನಿರ್ದೇಶನಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ