SS Rajamouli: ರಾಮ್​ ಚರಣ್​, ಜೂ. ಎನ್​ಟಿಆರ್​ಗೆ ಮಣೆಹಾಕಿ ರಾಜಮೌಳಿಯನ್ನು ಕಡೆಗಣಿಸಿದ ಆಸ್ಕರ್​; ಅಭಿಮಾನಿಗಳಿಗೆ ಅಸಮಾಧಾನ

|

Updated on: Jun 30, 2023 | 12:37 PM

Academy Members: ಜಾಗತಿಕ ಮಟ್ಟದಲ್ಲಿ ‘ಆರ್​ಆರ್​ಆರ್​’ ಸಿನಿಮಾಗೆ ಮನ್ನಣೆ ಸಿಗಲು ರಾಜಮೌಳಿ ಅವರ ಕೊಡುಗೆ ದೊಡ್ಡದು. ಅವರಿಗೆ ಆಸ್ಕರ್​ ಸದಸ್ಯತ್ವ ಸಿಗಬೇಕು ಎಂಬುದು ಫ್ಯಾನ್ಸ್ ಒತ್ತಾಯ.

SS Rajamouli: ರಾಮ್​ ಚರಣ್​, ಜೂ. ಎನ್​ಟಿಆರ್​ಗೆ ಮಣೆಹಾಕಿ ರಾಜಮೌಳಿಯನ್ನು ಕಡೆಗಣಿಸಿದ ಆಸ್ಕರ್​; ಅಭಿಮಾನಿಗಳಿಗೆ ಅಸಮಾಧಾನ
ರಾಮ್​ ಚರಣ್​, ಜೂನಿಯರ್​ ಎನ್​ಟಿಆರ್​, ಎಸ್​ಎಸ್​ ರಾಜಮೌಳಿ
Follow us on

ಭಾರತದಲ್ಲಿ ಆಸ್ಕರ್​ ಪ್ರಶಸ್ತಿ (Oscars) ಬಗ್ಗೆ ಮತ್ತೆ ಚರ್ಚೆ ಆಗುತ್ತಿದೆ. ಕೆಲವೇ ತಿಂಗಳ ಹಿಂದೆ ‘ಆರ್​ಆರ್​ಆರ್​’ (RRR Movie) ಸಿನಿಮಾದ ‘ನಾಟು ನಾಟು..’ ಹಾಡಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಾಗ ಎಲ್ಲರೂ ಸಂಭ್ರಮಿಸಿದ್ದರು. ಆ ಹಾಡಿನಲ್ಲಿ ರಾಮ್​ ಚರಣ್​ ಹಾಗೂ ಜೂನಿಯರ್​ ಎನ್​ಟಿಆರ್​ ಮಾಡಿದ ಡ್ಯಾನ್ಸ್​ ಸಖತ್​ ಟ್ರೆಂಡ್​ ಆಗಿತ್ತು. ಆಸ್ಕರ್​ ವೇದಿಕೆ ಏರಿದ್ದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮತ್ತು ಗೀತರಚನಾಕಾರ ಚಂದ್ರಬೋಸ್​ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿತ್ತು. ಈಗ ಇನ್ನೂ ಹೆಚ್ಚು ಖುಷಿಪಡುವಂತಹ ಬೆಳವಣಿಗೆ ಆಗಿದೆ. ‘ಆರ್​ಆರ್​ಆರ್​’ ತಂಡದ 6 ಜನರಿಗೆ ಆಸ್ಕರ್​ ಸದಸ್ಯತ್ವ ನೀಡಲಾಗಿದೆ. ಆದರೆ ನಿರ್ದೇಶಕ ಎಸ್​ಎಸ್​ ರಾಜಮೌಳಿ (SS Rajamouli) ಅವರಿಗೆ ಈ ಗೌರವ ಸಿಕ್ಕಿಲ್ಲ ಎಂಬುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣ ಆಗಿದೆ.

‘ಆರ್​ಆರ್​ಆರ್​’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ ರಾಮ್​ ಚರಣ್​, ಜೂನಿಯರ್​ ಎನ್​ಟಿಆರ್​, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಸಾಹಿತಿ ಚಂದ್ರಬೋಸ್​, ಕ್ಯಾಮೆರಾಮ್ಯಾನ್​ ಸೆಂಥಿಲ್ ಕುಮಾರ್ ಮತ್ತು ಪ್ರೊಡಕ್ಷನ್ ಡಿಸೈನರ್ ಸಾಬು ಸಿರೀಲ್ ಅವರಿಗೆ ಆಸ್ಕರ್​ ಸದಸ್ಯತ್ವ ಸಿಕ್ಕಿದೆ. ಮುಂದಿನ ವರ್ಷ ಆಸ್ಕರ್​ ಪ್ರಶಸ್ತಿಗೆ ಹಣಾಹಣಿ ನಡೆಸುವ ಸಿನಿಮಾ ಮತ್ತು ಸೆಲೆಬ್ರಿಟಿಗಳಿಗೆ ಈ ಸದಸ್ಯರು ವೋಟ್​ ಮಾಡುವ ಅಧಿಕಾರ ಪಡೆದಿದ್ದಾರೆ. ಆದರೆ ಆಸ್ಕರ್​ ಸಮಿತಿಯವರು ರಾಜಮೌಳಿಯನ್ನು ಕಡೆಗಣಿಸಿರುವುದು ಯಾಕೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: SS Rajamouli: ಆಸ್ಕರ್​ ಸದಸ್ಯತ್ವ ಪಡೆದವರಿಗೆ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಕಡೆಯಿಂದ ಅಭಿನಂದನೆ

ಜಾಗತಿಕ ಮಟ್ಟದಲ್ಲಿ ‘ಆರ್​ಆರ್​ಆರ್​’ ಸಿನಿಮಾಗೆ ಮನ್ನಣೆ ಸಿಗಲು ರಾಜಮೌಳಿ ಅವರ ಕೊಡುಗೆ ಜಾಸ್ತಿ ಇದೆ. ದೊಡ್ಡ ಕ್ಯಾನ್ವಾಸ್​ನಲ್ಲಿ ಸಿನಿಮಾ ಮಾಡುವುದು ಹೇಗೆ ಎಂಬ ಕಲೆ ಅವರಿಗೆ ಸಿದ್ಧಿಸಿದೆ. ಬಿಗ್​ ಪ್ರಾಜೆಕ್ಟ್​ಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಅವರು ಈಗ ವಿಶ್ವಾದ್ಯಂತ ಹೆಸರು ಮಾಡಿದ್ದಾರೆ. ‘ಆರ್​ಆರ್​ಆರ್​’ ಚಿತ್ರದ ಮಾಸ್ಟರ್​ ಮೈಂಡ್​​ ಅವರು. ಅಂಥ ನಿರ್ದೇಶಕನಿಗೆ ಆಸ್ಕರ್​ ಸದಸ್ಯತ್ವ ಸಿಗಬೇಕು ಎಂಬುದು ಫ್ಯಾನ್ಸ್ ಒತ್ತಾಯ.

ಇದನ್ನೂ ಓದಿ: SS Rajamouli: ಡಬಲ್ ರೋಲ್​ನಲ್ಲಿ ಮಿಂಚಿದ ನಟ ಎಸ್​.ಎಸ್. ರಾಜಮೌಳಿ; ಅರೆ ಇದೇನಿದು ಹೊಸ ಅಪ್​ಡೇಟ್?

ತಮಗೆ ಆಸ್ಕರ್​ ಸದಸ್ಯತ್ವ ಸಿಕ್ಕಿಲ್ಲ ಎಂದು ರಾಜಮೌಳಿ ಕಿಂಚಿತ್ತೂ ಬೇಸರ ಮಾಡಿಕೊಳ್ಳಲಿಲ್ಲ. ತಮ್ಮ ತಂಡದವರಿಗೆ ಗೌರವ ಸಿಕ್ಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಟ್ವಿಟರ್​ ಮೂಲಕ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ. ‘ಆಸ್ಕರ್​ ಸದಸ್ಯತ್ವ ಪಡೆಯಲು ನಮ್ಮ RRR ಸಿನಿಮಾ ತಂಡದ 6 ಜನರಿಗೆ ಈ ವರ್ಷ ಆಹ್ವಾನ ಬಂದಿರುವುದಕ್ಕೆ ನನಗೆ ತುಂಬ ಹೆಮ್ಮೆಯೆನಿಸುತ್ತಿದೆ. ತಾರಕ್​, ಚರಣ್​, ಪೆದ್ದಣ್ಣ, ಸಾಬು ಸರ್​, ಸೇಂಥಿಲ್​ ಹಾಗೂ ಚಂದ್ರಬೋಸ್​ ಅವರಿಗೆ ನನ್ನ ಅಭಿನಂದನೆ. ಆಸ್ಕರ್​ ಸದಸ್ಯತ್ವಕ್ಕೆ ಆಹ್ವಾನಿತರಾಗಿರುವ ಭಾರತೀಯ ಚಿತ್ರರಂಗದ ಇತರರಿಗೂ ಅಭಿನಂದನೆ ತಿಳಿಸುತ್ತೇನೆ’ ಎಂದು ರಾಜಮೌಳಿ ಪೋಸ್ಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.