ಜೂನಿಯರ್ ಎನ್ಟಿಆರ್ (Jr. NTR) ಅವರ ಖ್ಯಾತಿ ದಿನಕಳೆದಂತೆ ಹೆಚ್ಚುತ್ತಲೇ ಇದೆ. 96ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ‘ನಾಟು ನಾಟು..’ ಚಿತ್ರದ ಹಾಡಿನ ದೃಶ್ಯವನ್ನು ಪ್ರಸಾರ ಮಾಡಲಾಗಿದೆ. ಅಷ್ಟೇ ಅಲ್ಲ ಆ್ಯಕ್ಷನ್ ದೃಶ್ಯಗಳನ್ನು ತೋರಿಸುವಾಗ ‘ಆರ್ಆರ್ಆರ್’ ಚಿತ್ರಕ್ಕೂ ಗೌರವ ನೀಡಲಾಗಿದೆ. ಈ ಎಲ್ಲಾ ಕಾರಣದಿಂದ ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಬಾಲಿವುಡ್ಗೆ ಕಾಲಿಡುತ್ತಿರುವ ಜೂನಿಯರ್ ಎನ್ಟಿಆರ್ ಅವರು ಹೊಸ ಪ್ಲ್ಯಾನ್ ಒಂದನ್ನು ರೂಪಿಸಿದ್ದಾರೆ. ‘ವಾರ್ 2’ ಕೆಲಸ ಆರಂಭಕ್ಕೂ ಮುನ್ನ ಅವರು ಹೊಸ ತಂತ್ರದ ಮೊರೆ ಹೋಗಿದ್ದಾರೆ.
‘ಆರ್ಆರ್ಆರ್’ ಚಿತ್ರದ ಬಳಿಕ ಜೂನಿಯರ್ ಎನ್ಟಿಆರ್ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರದ ಬಳಿಕ ಮುಂದಿನ ಸಿನಿಮಾದ ಕೆಲಸ ಆರಂಭಿಸಲು ಅವರು ಸ್ವಲ್ಪ ಸಮಯ ತೆಗೆದುಕೊಂಡರು. ಈಗ ‘ದೇವರ’ ಚಿತ್ರದ ಶೂಟ್ನಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ಚಿತ್ರದ ಕೆಲಸ ಮುಗಿದ ಬಳಿಕ ಅವರು ‘ವಾರ್ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಬಾಲಿವುಡ್ನ ದೊಡ್ಡ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈಗ ಅವರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಜೂನಿಯರ್ ಎನ್ಟಿಆರ್ ಅವರು ಇತ್ತೀಚೆಗೆ ಅಗ್ರೆಸ್ಸಿವ್ ಆಗಿ ಟಿವಿ ಕಮರ್ಷಿಯಲ್ಗಳನ್ನು ಮಾಡುತ್ತಿಲ್ಲ. ಹೊಸ ಬ್ರ್ಯಾಂಡ್ಗಳಿಗೆ ಅವರು ಅಂಬಾಸಿಡರ್ ಆಗಿಲ್ಲ. ಈಗ ಅವರು ಮತ್ತೆ ಹೊಸ ಹೊಸ ಬ್ರ್ಯಾಂಡ್ಗಳ ಪ್ರಚಾರಕ್ಕೆ ಮುಂದಾಗಿದ್ದಾರೆ. ಅವರು ಈ ರೀತ ಆಲೋಚಿಸುವುದಕ್ಕೂ ಒಂದು ಕಾರಣ ಇದೆ ಎಂದು ವರದಿ ಆಗಿದೆ.
ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಜನರ ಜೊತೆ ಕನೆಕ್ಟ್ ಆದ ಹಾಗೆ ಆಗುತ್ತದೆ. ಸಿನಿಮಾದಲ್ಲಿ ನಟಿಸುವುದಕ್ಕೂ ಮೊದಲು ಜಾಹೀರಾತು ಮಾಡಿದರೆ ಹೊಸ ಮುಖ ಎನ್ನುವ ಭಾವನೆ ಕಾಡುವುದಿಲ್ಲ. ಹೀಗಾಗಿ, ಒಂದೆರಡು ದೊಡ್ಡ ಬ್ರ್ಯಾಂಡ್ಗಳ ಜೊತೆ ಕೈ ಜೋಡಿಸಲು ಅವರು ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರು ಮುಂಬೈಗೆ ತೆರಳಿ ಕೆಲವು ಏಜೆನ್ಸಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಬ್ರ್ಯಾಂಡ್ಗಳು ಕೂಡ ದೊಡ್ಡ ಹೀರೋಗಳ ಜೊತೆ ಕೈ ಜೋಡಿಸಲು ಆಸಕ್ತಿ ತೋರಿಸುತ್ತವೆ. ಹೀಗಿರುವಾಗ ಹೀರೋಗಳೇ ಆಸಕ್ತಿ ತೋರಿಸಿ ಮುಂದೆ ಬಂದಾಗ ಇಂಥ ಅವಕಾಶವನ್ನು ಬ್ರ್ಯಾಂಡ್ಗಳು ಮಿಸ್ ಮಾಡಿಕೊಳ್ಳುವುದೇ ಇಲ್ಲ. ‘ವಾರ್ 2’ ಶೂಟಿಂಗ್ಗೂ ಮೊದಲು ಜಾಹೀರಾತು ಶೂಟ್ನಲ್ಲಿ ಅವರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಯಶ್, ರಾಮ್ ಚರಣ್ ಬಳಿಕ ವಿಜಯ್ ದೇವರಕೊಂಡ ಪಾಲಾದ ನರ್ತನ್ ಕತೆ
ಈಗಾಗಲೇ ಮಹೇಶ್ ಬಾಬು, ವಿಜಯ್ ದೇವರಕೊಂಡ, ರಾಮ್ ಚರಣ್ ಮೊದಲಾದ ಸ್ಟಾರ್ಗಳು ಜಾಹೀರಾತುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವರದ್ದು ಹಣ ಮಾಡುವ ಉದ್ದೇಶವಾದರೆ ಇನ್ನೂ ಕೆಲವರದ್ದು ಜನರ ಎದುರು ಹೆಚ್ಚು ಕಾಣಿಸಿಕೊಳ್ಳಬೇಕು ಎಂಬುದು. ಜೂನಿಯರ್ ಎನ್ಟಿಆರ್ ಅವರು ಯಾವ ರೀತಿಯ ಜಾಹೀರಾತು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
‘ದೇವರ’ ಸಿನಿಮಾಗೆ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್ನ ಜಾನ್ವಿ ಕಪೂರ್ ಈ ಚಿತ್ರಕ್ಕೆ ನಾಯಕಿ. ಈ ಸಿನಿಮಾ ಎರಡು ಪಾರ್ಟ್ಗಳಲ್ಲಿ ಬರಲಿದೆಯಂತೆ. ಅಕ್ಟೋಬರ್ 10ರಂದು ಸಿನಿಮಾ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ