Sai Pallavi: ಖ್ಯಾತ ನಟಿ ಸಾಯಿ ಪಲ್ಲವಿ ಒಟ್ಟೂ ಆಸ್ತಿ ಮೌಲ್ಯ ಎಷ್ಟು? ಇಲ್ಲಿದೆ ಮಾಹಿತಿ

| Updated By: ಮದನ್​ ಕುಮಾರ್​

Updated on: May 21, 2021 | 3:54 PM

Sai Pallavi Net Worth: ಪ್ರೇಮಂ​ ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಸಾಯಿ ಪಲ್ಲವಿ. 2015ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಮಲರ್​ ಹೆಸರಿನ ಪಾತ್ರವನ್ನು ಅವರು ನಿರ್ವಹಿಸಿದ್ದರು.

Sai Pallavi: ಖ್ಯಾತ ನಟಿ ಸಾಯಿ ಪಲ್ಲವಿ ಒಟ್ಟೂ ಆಸ್ತಿ ಮೌಲ್ಯ ಎಷ್ಟು? ಇಲ್ಲಿದೆ ಮಾಹಿತಿ
ಸಾಯಿ ಪಲ್ಲವಿ
Follow us on

ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ಮಾಡಿದ್ದು ಕೆಲವೇ ಸಿನಿಮಾಗಳಾದರೂ ಅವರಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ, ಅವರ ಸಂಭಾವನೆ ಕೂಡ ಹೆಚ್ಚಿದೆ. ಹಾಗಾದರೆ, ನಟಿ ಸಾಯಿ ಪಲ್ಲವಿ ಅವರ ಒಟ್ಟೂ ಆಸ್ತಿ ಮೌಲ್ಯ ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಪ್ರೇಮಂ​ ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಸಾಯಿ ಪಲ್ಲವಿ. 2015ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಮಲರ್​ ಹೆಸರಿನ ಪಾತ್ರವನ್ನು ಅವರು ನಿರ್ವಹಿಸಿದ್ದರು. ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದ ಸಾಯಿ ಪಲ್ಲವಿ ಎಲ್ಲರ ಗಮನ ಸೆಳೆದಿದ್ದರು. ನಂತರ ಅವರಿಗೆ ಸಾಲು ಸಾಲು ಪ್ರಾಜೆಕ್ಟ್​ಗಳು ಬರೋಕೆ ಆರಂಭವಾದವು.

ಫಿದಾ ಸಿನಿಮಾ ಮೂಲಕ ಸಾಯಿ ಪಲ್ಲವಿ ಟಾಲಿವುಡ್​ಗೆ ಕಾಲಿಟ್ಟರು. ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತೆ, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಯಿತು. ಈ ಸಿನಿಮಾದಲ್ಲಿ ವರುಣ್​ ತೇಜ್​ಗೆ ಜತೆಯಾಗಿ ನಟಿಸಿದ್ದ ಸಾಯಿ ಪಲ್ಲವಿ ಟಾಲಿವುಡ್​ನಲ್ಲೂ ನೆಲೆ ಕಂಡುಕೊಂಡರು. 13 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗಿದ್ದ ಈ ಸಿನಿಮಾ 90 ಕೋಟಿ ರೂಪಾಯಿ ಗಳಿಸಿತ್ತು.

‘ಮಾರಿ 2’ ಮೊದಲಾದ ಸಿನಿಮಾಗಳಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಸದ್ಯ, ಅವರ ಕೈಯಲ್ಲಿ ಮೂರು ಚಿತ್ರಗಳಿವೆ. ಲವ್​ ಸ್ಟೋರಿ, ವಿರಾಟ ಪರ್ವಮ್​, ಶ್ಯಾಮ್​ ಸಿಂಗ ರಾಯ್​ ಹೆಸರಿನ ತೆಲಗು ಚಿತ್ರಗಳಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಲವ್​ ಸ್ಟೋರಿ, ವಿರಾಟ ಪರ್ವಮ್ ಸಿನಿಮಾ ಶೂಟಿಂಗ್​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಆರಂಭಗೊಂಡಿದೆ. ಶ್ಯಾಮ್​ ಸಿಂಗ್​ ರಾಯ್​ ಚಿತ್ರದ ಶೂಟಿಂಗ್​ ಕೊವಿಡ್​ ಕಾರಣದಿಂದ ಅರ್ಧಕ್ಕೆ ನಿಂತಿದೆ.

ಸಾಯಿ ಪಲ್ಲವಿ ಡಾಕ್ಟರ್​ ಆಗಬೇಕು ಎಂದು ಕನಸು ಕಂಡವರು. ಇವರು ಎಂಬಿಬಿಎಸ್​ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ನಂತರ ಅವರು ನಟನೆಯತ್ತ ಹೊರಳಿದರು. ಈ ಮೂಲಕ ಅವರು ಯಶಸ್ಸು ಕಂಡರು. ಮೂಲಗಳ ಪ್ರಕಾರ ಸಾಯಿ ಪಲ್ಲವಿ ಅವರ ಒಟ್ಟೂ ಆಸ್ತಿ ಮೌಲ್ಯ 29 ಕೋಟಿ ರೂಪಾಯಿ ಎನ್ನಲಾಗಿದೆ. ಸಿನಿಮಾಗಳು ಹಿಟ್ ಆಗುತ್ತಿರುವುದರಿಂದ ಇವರ ಸಂಭಾವನೆ ಕೂಡ ಹೆಚ್ಚಿದೆ.

ಇದನ್ನೂ ಓದಿ: ಲಾಕ್​ಡೌನ್​ನಲ್ಲಿ ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ ದಿನಚರಿ ಏನು? ಮನೆಯಲ್ಲಿದ್ದುಕೊಂಡು ಏನ್​ ಮಾಡ್ತಿದ್ದಾರೆ ಕರಾವಳಿ ಬೆಡಗಿ?