‘ನನ್ನ ಮದುವೆ ಆಗುವ ಹುಡುಗನಿಗೆ ಈ ಗುಣ ಇರಲೇಬೇಕು’; ಸಾಯಿ ಪಲ್ಲವಿ ಮುಕ್ತ ಮಾತು

ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಸಾಯಿ ಪಲ್ಲವಿ ತಮ್ಮ ಮದುವೆ ಹಾಗೂ ಜೀವನಸಂಗಾತಿಯ ಗುಣಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಒಳ್ಳೆಯ ಗುಣದೊಂದಿಗೆ ಅಡುಗೆ ಮಾಡಲು ಬರುವವರನ್ನು ಮದುವೆಯಾಗುವೆ ಎಂದಿರುವ ಅವರು, ರಾಮಾಯಣ ಸಿನಿಮಾದಲ್ಲಿ ಸೀತಾ ಮಾತೆಯ ಪಾತ್ರ ಸಿಕ್ಕಿದ್ದಕ್ಕೆ ತಾವು ಧನ್ಯ ಎಂದು ಭಾವುಕರಾಗಿದ್ದಾರೆ.

‘ನನ್ನ ಮದುವೆ ಆಗುವ ಹುಡುಗನಿಗೆ ಈ ಗುಣ ಇರಲೇಬೇಕು’; ಸಾಯಿ ಪಲ್ಲವಿ ಮುಕ್ತ ಮಾತು
ಸಾಯಿ ಪಲ್ಲವಿ

Updated on: Oct 29, 2026 | 8:46 AM

ಮುಖ್ಯಾಂಶಗಳು

  • ಸಾಯಿ ಪಲ್ಲವಿ ಬಯಸುವ ಆದರ್ಶ ಗುಣಗಳು
  • ವೈದ್ಯಕೀಯ ವೃತ್ತಿ ಬಿಟ್ಟು ನಟನೆಯ ಲೋಕಕ್ಕೆ ಬಂದ ಹಾದಿ
  • ‘ರಾಮಾಯಣ’ ಚಿತ್ರದಲ್ಲಿ ಸೀತಾ ಮಾತೆಯ ಪಾತ್ರ ನಿರ್ವಹಿಸಿದ ಅಪರೂಪದ ಅನುಭವ

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಸೀತಾ ಮಾತೆಯಾಗಿ ಅಭಿನಯಿಸುತ್ತಿರುವ ನಟಿ ಸಾಯಿ ಪಲ್ಲವಿ ಅವರ ಹೆಸರು ಈಗ ದೇಶಾದ್ಯಂತ ಭಾರೀ ಚರ್ಚೆಯಲ್ಲಿದೆ. ಇತ್ತೀಚೆಗೆ ತಮ್ಮ ಚಿತ್ರದ ಸಹನಟರಾದ ರಣಬೀರ್ ಕಪೂರ್ ಹಾಗೂ ರವಿ ದುಬೆ ಅವರೊಂದಿಗೆ ‘ಕೌನ್ ಬನೇಹಾ ಕರೋಡ್‌ಪತಿ 18’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ತಮಗಿರಬೇಕಾದ ಜೀವನಸಂಗಾತಿಯ ಗುಣಗಳು ಹಾಗೂ ರಾಮಾಯಣ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ವಿಶೇಷ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಾಯಿ ಪಲ್ಲವಿ ಬಯಸುವ ಪರ್ಫೆಕ್ಟ್ ಪತಿ ಹೇಗಿರಬೇಕು?

ಕಾರ್ಯಕ್ರಮದ ನಿರೂಪಕ ಅಮಿತಾಭ್ ಬಚ್ಚನ್ ಅವರು ಜೀವನಸಂಗಾತಿಯಲ್ಲಿ ಇರಬೇಕಾದ ಗುಣಗಳ ಬಗ್ಗೆ ಕೇಳಿದಾಗ ಸಾಯಿ ಪಲ್ಲವಿ ಮನ ಬಿಚ್ಚಿ ಮಾತನಾಡಿದರು. ‘ಮೊದಲನೆಯದಾಗಿ, ಅವನು ಒಬ್ಬ ಒಳ್ಳೆಯ ಮನುಷ್ಯನಾಗಿರಬೇಕು. ಅತಿಯಾದ ಸ್ವಾರ್ಥಿ ಆಗಿರಬಾರದು. ಸ್ವಯಂ ವಿಮರ್ಶೆ ಮಾಡಿಕೊಳ್ಳುವ ವ್ಯಕ್ತಿಯಾಗಿರಬೇಕು. ತಮ್ಮ ನಡವಳಿಕೆಗಳನ್ನು ಸರಿ-ತಪ್ಪು ಎಂದು ಪರಿಶೀಲಿಸಿಕೊಳ್ಳುವ ಗುಣವಿರಬೇಕು. ಅಂದರೆ, ತಾವು ಜೀವನದಲ್ಲಿ ಎಲ್ಲಿದ್ದೇವೆ ಎಂಬ ಅರಿವು ಅಥವಾ ಒಳನೋಟ ಇರಬೇಕು’ ಎಂದರು ಅವರು.

‘ತಪ್ಪನ್ನು ಮಾಡುವುದು ಸಹಜ, ಆದರೆ ಆ ತಪ್ಪನ್ನು ತಿದ್ದುಕೊಳ್ಳುವ ಮನಸ್ಸಿರಬೇಕು. ಅದನ್ನು ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸಬಾರದು. ನನ್ನದೇನೂ ದೊಡ್ಡ ಪಟ್ಟಿಯಿಲ್ಲ, ಆದರೆ ಅವರು ಉತ್ತಮ ವ್ಯಕ್ತಿಯಾಗಿರಬೇಕು ಮತ್ತು ಅವರಿಗೆ ಅಡುಗೆ ಮಾಡಲು ಗೊತ್ತಿದ್ದರೆ ಇನ್ನೂ ಉತ್ತಮ’ ಎಂದರು.

ಎಂಬಿಬಿಎಸ್ ಓದಿದ್ದ ಸಾಯಿ

ವೈದ್ಯಕೀಯ ಶಿಕ್ಷಣ (ಎಂಬಬಿಎಸ್) ಪೂರ್ಣಗೊಳಿಸಿದ ನಂತರ ನಟನೆಗೆ ಬಂದಿದ್ದರ ಬಗ್ಗೆ ಅಮಿತಾಭ್ ಕೇಳಿದರು, ‘ನಾನು ಅಭಿನಯಿಸಬೇಕು ಎಂಬುದನ್ನು ದೇವರೇ ಬರೆದಿದ್ದರು’ ಎಂದರು.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾನಲ್ಲಿ ಎಐ ಬಳಕೆ? ನಿರ್ದೇಶಕ ನಿತೀಶ್ ಕೊಟ್ಟರು ಉತ್ತರ

ಸೀತೆ ಪಾತ್ರದ ಕುರಿತು ಸಾಯಿ ಪಲ್ಲವಿ ಮಾತು

‘ಪ್ರತಿ ಬಾರಿಯೂ ನಾನು ಯಾವುದಾದರೂ ಪಾತ್ರವನ್ನು ನಿರ್ವಹಿಸುವಾಗ, ಈ ಪಾತ್ರಕ್ಕೆ ನಾನು ಏನು ನೀಡಬಲ್ಲೆ? ಎಂದು ಯೋಚಿಸುತ್ತಿದ್ದೆ. ಆದರೆ, ಸೀತಾ ಮಾತೆಯಂತಹ ಪಾತ್ರವನ್ನು ಮಾಡುವುದರಿಂದ ನನಗೆ ಏನು ಸಿಗುತ್ತದೆ? ಇದರಿಂದ ನನಗೆ ಯಾವ ಜ್ಞಾನ ಸಿಗುತ್ತದೆ? ಎಂದು ಆಲೋಚಿಸಿದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us