Sai Pallavi: ಚಿತ್ರಮಂದಿರದಲ್ಲಿ ಸೋತ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಚಿತ್ರಕ್ಕೆ ಈಗ ಅಂತಾರಾಷ್ಟ್ರೀಯ ಮನ್ನಣೆ

| Updated By: ಮದನ್​ ಕುಮಾರ್​

Updated on: Sep 02, 2022 | 7:30 AM

Gargi Movie: ಸಾಯಿ ಪಲ್ಲವಿ ಅವರ ಪಾಲಿಗೆ ‘ಗಾರ್ಗಿ’ ಸಿನಿಮಾ ತುಂಬ ಸ್ಪೆಷಲ್​. ಕನ್ನಡದಲ್ಲೂ ಮೂಡಿಬಂದ ಈ ಚಿತ್ರಕ್ಕೆ ಸ್ವತಃ ಸಾಯಿ ಪಲ್ಲವಿ ಅವರೇ ಡಬ್​ ಮಾಡಿದ್ದು ವಿಶೇಷ.

Sai Pallavi: ಚಿತ್ರಮಂದಿರದಲ್ಲಿ ಸೋತ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಚಿತ್ರಕ್ಕೆ ಈಗ ಅಂತಾರಾಷ್ಟ್ರೀಯ ಮನ್ನಣೆ
ಸಾಯಿ ಪಲ್ಲವಿ
Follow us on

ಚಿತ್ರರಂಗದಲ್ಲಿ ನಟಿ ಸಾಯಿ ಪಲ್ಲವಿ (Sai Pallavi) ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಗ್ಲಾಮರ್​ ಹಂಗಿಲ್ಲದೇ ಅವರು ಅಪ್ಪಟ ಪ್ರತಿಭೆಯಿಂದಲೇ ಬೆಳೆದುಬಂದಿದ್ದಾರೆ. ಭಾರತದ ಟಾಪ್​ ನಟಿಯರ ಪಟ್ಟಿಯಲ್ಲಿ ಅವರ ಹೆಸರು ಕೂಡ ಮುಂಚೂಣಿಯಲ್ಲಿದೆ. ಆದರೆ ಕೆಲವು ಕಾಂಟ್ರವರ್ಸಿಗಳು ಅವರ ಕೊರಳಿಗೆ ಸುತ್ತಿಕೊಂಡಿವೆ. ಹಾಗಾಗಿ ಚಿತ್ರಮಂದಿರದಲ್ಲಿ ಸಾಯಿ ಪಲ್ಲವಿ ಸಿನಿಮಾಗಳು ಗೆಲ್ಲುತ್ತಿಲ್ಲ. ಈ ವರ್ಷ ತೆರೆಕಂಡ ಅವರ ಎರಡು ಚಿತ್ರಗಳಾದ ‘ವಿರಾಟ ಪರ್ವಂ’ ಮತ್ತು ‘ಗಾರ್ಗಿ’ (Gargi Movie) ಜನಮೆಚ್ಚುಗೆ ಗಳಿಸುವಲ್ಲಿ ವಿಫಲವಾದವು. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾಗಳು ಸೋತು ಸುಣ್ಣವಾದವು. ಆದರೆ ಈಗ ‘ಗಾರ್ಗಿ’ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ. ಮಾಸ್ಕೋ ಇಂಟರ್​ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ (Moscow International Film Festival) ಈ ಸಿನಿಮಾ ಪ್ರದರ್ಶನ ಆಗಲಿದೆ.

ಈ ಸುದ್ದಿ ಕೇಳಿ ಸಾಯಿ ಪಲ್ಲವಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಮಾಸ್ಕೋ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಭಾರತದಿಂದ ಆಯ್ಕೆ ಆದ ಕೆಲವೇ ಸಿನಿಮಾಗಳಲ್ಲಿ ‘ಗಾರ್ಗಿ’ ಕೂಡ ಸ್ಥಾನ ಪಡೆದುಕೊಂಡಿದೆ. ಅದರ ಜೊತೆಗೆ ಅಲ್ಲು ಅರ್ಜು​ನ್​, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’, ವಿಕ್ಕಿ ಕೌಶಲ್​ ಅಭಿನಯದ ‘ಸರ್ದಾರ್ ಉದ್ದಮ್​’ ಚಿತ್ರಗಳು ಕೂಡ ಆಯ್ಕೆ ಆಗಿವೆ.

ಮಾಸ್ಕೋದಲ್ಲಿ ಇರುವ ಭಾರತದ ರಾಯಭಾರ ಕಚೇರಿ ತನ್ನ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಮಾಸ್ಕೋ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆ ಆದ ಸಿನಿಮಾಗಳ ಪೋಸ್ಟರ್​ಗಳನ್ನು ಹಂಚಿಕೊಳ್ಳಲಾಗಿದೆ. ಸಾಯಿ ಪಲ್ಲವಿ ಅವರ ಅಪ್ಪಟ ಅಭಿಮಾನಿಗಳು ಈ ಪೋಸ್ಟ್​ಗೆ ಕಮೆಂಟ್​ ಮಾಡುತ್ತಿದ್ದಾರೆ. ‘ಗಾರ್ಗಿ’ ಚಿತ್ರಕ್ಕೆ ಇನ್ನಷ್ಟು ಮನ್ನಣೆ ಮತ್ತು ಪ್ರಶಸ್ತಿ ಸಿಗಬೇಕು ಎಂದು ಫ್ಯಾನ್ಸ್​ ಆಶಿಸುತ್ತಿದ್ದಾರೆ. ಈ ಚಿತ್ರ ಆಸ್ಕರ್​ಗೆ ಆಯ್ಕೆ ಆಗಬೇಕು ಎಂಬುದು ಕೆಲವರ ಬಯಕೆ.

ಇದನ್ನೂ ಓದಿ
ವಿಮರ್ಶೆಯಲ್ಲಿ ಗೆದ್ದ ಸಾಯಿ ಪಲ್ಲವಿ ಚಿತ್ರ ‘ಗಾರ್ಗಿ’; ಆದರೆ, ಚಿತ್ರಮಂದಿರದಲ್ಲಿ ಹೇಗಿದೆ ರೆಸ್ಪಾನ್ಸ್?
Gargi Twitter Review: ಹೇಗಿದೆ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಚಿತ್ರ? ಫಸ್ಟ್​ ಡೇ ಫಸ್ಟ್​ ಶೋ ನೋಡಿದವರ ವಿಮರ್ಶೆ ಇಲ್ಲಿದೆ..
‘ಗಾರ್ಗಿ’ ಚಿತ್ರಕ್ಕೆ ಐದಕ್ಕೆ ಐದು ಸ್ಟಾರ್ ನೀಡಿದ ವಿಮರ್ಶಕರು; ಸಾಯಿ ಪಲ್ಲವಿ ಫುಲ್​ ಖುಷ್
‘ಒಂದು ದಿನದಲ್ಲಿ ನನ್ನ ಜೀವನವೇ ಬದಲಾಯ್ತು’; ಟೀಚರ್ ‘ಗಾರ್ಗಿ’ ಬಾಳಿನ ಏರಿಳಿತದ ಹಾದಿ

ಸಾಯಿ ಪಲ್ಲವಿ ಅವರ ಪಾಲಿಗೆ ‘ಗಾರ್ಗಿ’ ಸಿನಿಮಾ ತುಂಬ ಸ್ಪೆಷಲ್​ ಆಗಿದೆ. ಈ ಚಿತ್ರದ ಬಗ್ಗೆ ಅವರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಗೌತಮ್​ ರಾಮಚಂದ್ರನ್​ ನಿರ್ದೇಶನದ ಈ ಸಿನಿಮಾ ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಮೂಡಿಬಂದಿದೆ. ಕನ್ನಡಕ್ಕೆ ಸ್ವತಃ ಸಾಯಿ ಪಲ್ಲವಿ ಅವರೇ ಡಬ್​ ಮಾಡಿರುವುದು ವಿಶೇಷ. ಜುಲೈ 15ರಂದು ಥಿಯೇಟರ್​ನಲ್ಲಿ ರಿಲೀಸ್​ ಆದ ‘ಗಾರ್ಗಿ’ ಚಿತ್ರಕ್ಕೆ ಜನರು ಹೆಚ್ಚು ಪ್ರೀತಿ ತೋರಿಸಲಿಲ್ಲ. ಆದರೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಬಳಿಕ ಆಗಸ್ಟ್​ 12ರಂದು ‘ಸೋನಿ ಲಿವ್’​ ಮೂಲಕ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಯಿತು. ಒಟಿಟಿಯಲ್ಲಿ ಸಿನಿಮಾ ನೋಡಿದ ಅನೇಕರು ಪ್ರಶಂಸೆ ವ್ಯಕ್ತಪಡಿಸಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.